Boycott ಟ್ರೆಂಡ್ನಿಂದ ಕಂಗೆಟ್ಟ ಆಮಿರ್ ಖಾನ್; ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ 1300 ಶೋಗಳು ರದ್ದು
2018ರ ‘ಥಗ್ಸ್ ಆಫ್ ಹಿಂದೂಸ್ಥಾನ್’ ಸಿನಿಮಾ ಮಕಾಡೆ ಮಲಗಿತು. ಆ ಬಳಿಕ ನಾಲ್ಕು ವರ್ಷಗಳ ಶ್ರಮ ಹಾಕಿ ಆಮಿರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮಾಡಿದ್ದರು. ಆದರೆ, ಈ ಚಿತ್ರಕ್ಕೂ ಸೋಲಿನ ಭೀತಿ ಕಾಡಿದೆ.
ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೊದಲ ದಿನವೇ ಮುಗ್ಗರಿಸಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಪ್ರೇಕ್ಷಕರು ಇಲ್ಲದೆ ಅನೇಕ ಕಡೆಗಳಲ್ಲಿ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಇನ್ನು, ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಶುರುವಾದ ಅಭಿಯಾನ ಈ ಚಿತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ. ದಿನ ಕಳೆದಂತೆ ಶೋಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದು ಆಮಿರ್ ಖಾನ್ ಅವರ ಚಿಂತೆಗೆ ಕಾರಣವಾಗಿದೆ. ಹೀಗೆ ಮುಂದುವರಿದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸ್ಥಿತಿಗೆ ತಲುಪಲಿದೆ.
2017ರಲ್ಲಿ ಆಮಿರ್ ಖಾನ್ ನಟನೆಯ ‘ಸೀಕ್ರೆಟ್ ಸೂಪರ್ಸ್ಟಾರ್’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಹಿಟ್ ಆಯಿತು. ಆ ಬಳಿಕ ತೆರೆಗೆ ಬಂದ ಅವರ ಯಾವ ಚಿತ್ರಗಳೂ ಆ ಮಟ್ಟಿಗೆ ಯಶಸ್ಸು ಕಂಡಿಲ್ಲ. 2018ರ ‘ಥಗ್ಸ್ ಆಫ್ ಹಿಂದೂಸ್ಥಾನ್’ ಸಿನಿಮಾ ಮಕಾಡೆ ಮಲಗಿತು. ಆ ಬಳಿಕ ನಾಲ್ಕು ವರ್ಷಗಳ ಶ್ರಮ ಹಾಕಿ ಆಮಿರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮಾಡಿದ್ದರು. ಆದರೆ, ಈ ಚಿತ್ರಕ್ಕೂ ಸೋಲಿನ ಭೀತಿ ಕಾಡಿದೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬ ಮಾತನ್ನು ಆಮಿರ್ ಖಾನ್ ಅವರು ಈ ಮೊದಲು ಆಡಿದ್ದರು. ಇದೇ ವಿಚಾರ ಇಟ್ಟುಕೊಂಡು ಆಮಿರ್ ಖಾನ್ ಸಿನಿಮಾ ಬ್ಯಾನ್ ಮಾಡಬೇಕು ಎಂಬ ಆಗ್ರಹಗಳನ್ನು ಮಾಡಲಾಗುತ್ತಿದೆ. ‘ಲಾಲ್ ಸಿಂಗ್ ಚಡ್ಡಾ’ಗೂ ತೆರೆಗೆ ಬರುವುದಕ್ಕೆ ಕೆಲವು ತಿಂಗಳು ಬಾಕಿ ಇರುವಾಗಲೇ ಬೈಕಾಟ್ ಟ್ರೆಂಡ್ ಆರಂಭ ಆಗಿತ್ತು. ಇದು ಆಮಿರ್ ಚಿತ್ರಕ್ಕೆ ಸಾಕಷ್ಟು ಹೊಡೆತ ನೀಡಿದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಸುಮಾರು 1300 ಶೋಗಳಿಗೆ ಕತ್ತರಿ ಹಾಕಲಾಗಿದೆ. ಅಕ್ಷಯ್ ಕುಮಾರ್ ನಟನೆಯ ‘ರಕ್ಷಾ ಬಂಧನ್’ ಸಿನಿಮಾ ಕೂಡ ಆಗಸ್ಟ್ 11ರಂದು ತೆರೆಗೆ ಬಂದಿದೆ. ಈ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ 1000 ಶೋಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಇದರಿಂದ ಅಕ್ಷಯ್ ಕುಮಾರ್ ಸಿನಿಮಾದ ಮೈಲೇಜ್ ಹೆಚ್ಚುತ್ತಿದೆ.
ಇದನ್ನೂ ಓದಿ: ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ; ಸ್ಟಾರ್ಗಳ ಪ್ರತಿಕ್ರಿಯೆ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್
‘ಲಾಲ್ ಸಿಂಗ್ ಚಡ್ಡಾ’ ಶೋಗೆ ಬೆರಳೆಣಿಕೆ ಜನರು ಮಾತ್ರ ಬರುತ್ತಿದ್ದಾರೆ. ಈ ಕಾರಣದಿಂದ ಸಿನಿಮಾದ 1300 ಶೋಗಳು ಮೊದಲ ದಿನ ರದ್ದುಗೊಂಡಿವೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಿನಿಮಾ ಮತ್ತಷ್ಟು ಹೀನಾಯ ಸ್ಥಿತಿ ತಲುಪಲಿದೆ.