AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

‘ಭೂಲ್ ಭುಲಯ್ಯ’ ಸಿನಿಮಾ ಮಾಡಿದ್ದ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರು ಈಗ ‘ಭೂತ್ ಬಂಗ್ಲ’ ಸಿನಿಮಾ ಮಾಡಿದ್ದಾರೆ. ಏಪ್ರಿಲ್ 16ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಟ್ರೇಲರ್ ಮೂಲಕ ಗಮನ ಸೆಳೆಯಲಾಗಿದೆ. ಅಕ್ಷಯ್ ಕುಮಾರ್, ಟಬು, ಪರೇಶ್ ರಾವಲ್, ರಾಜ್​ಪಾಲ್ ಯಾದವ್ ಮುಂತಾದವರು ನಟಿಸಿದ್ದಾರೆ.

‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?
Paresh Rawal, Akshay KumarImage Credit source: Balaji Motion Pictures
ಮದನ್​ ಕುಮಾರ್​
|

Updated on: Apr 06, 2026 | 7:22 PM

Share

ಬಾಲಿವುಡ್‌ನ ಯಶಸ್ವಿ ಜೋಡಿಗಳಲ್ಲೊಂದಾದ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರು ದೀರ್ಘಕಾಲದ ನಂತರ ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಷನ್​ನಲ್ಲಿ ಬಹುನಿರೀಕ್ಷಿತ ಹಾರರ್ ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ (Bhooth Bangla) ಸಿದ್ಧವಾಗಿದೆ. ಈಗ ಈ ಚಿತ್ರದ ಟ್ರೇಲರ್ (Bhooth Bangla Trailer) ಬಿಡುಗಡೆ ಆಗಿದ್ದು, ಸಿನಿರಸಿಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಏಪ್ರಿಲ್ 16ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಹಾರರ್ ಕಾಮಿಡಿ ಕಥಾಹಂದರ ಇರುವ ಈ ಸಿನಿಮಾ ಹೇಗಿದೆ ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ.

ಪ್ರಿಯದರ್ಶನ್ ಅವರ ವಿಶಿಷ್ಟ ಶೈಲಿಯ ಹಾಸ್ಯವು ‘ಭೂತ್ ಬಂಗ್ಲ’ ಟ್ರೇಲರ್​ನಲ್ಲಿದೆ. ಹೀರೋಗೆ ಪಿತ್ರಾರ್ಜಿತವಾಗಿ ಒಂದು ಹಳೆಯ ಬಂಗಲೆ ಆಸ್ತಿಯಾಗಿ ಬರುತ್ತದೆ. ಆದರೆ, ಆ ಬಂಗಲೆಯ ಹಿಂದೆ ಒಂದು ಭಯಾನಕ ಅರಣ್ಯವಿರುತ್ತದೆ. ಕಥೆಯ ಮತ್ತೊಂದು ಆಸಕ್ತಿದಾಯಕ ತಿರುವೆಂದರೆ, ಮದುವೆಗಳೇ ನಡೆಯದ ಮಂಗಳಪುರ ಎಂಬ ಗ್ರಾಮದಲ್ಲಿ ಹೀರೋ ಮದುವೆ ನಿಶ್ಚಯವಾಗುತ್ತದೆ. ಅಲ್ಲಿಂದ ಆರಂಭವಾಗುವ ಗೊಂದಲ ಮತ್ತು ಹಾಸ್ಯದ ಸನ್ನಿವೇಶಗಳೇ ಈ ಚಿತ್ರದ ಜೀವಾಳ.

ಈ ಚಿತ್ರದ ದೊಡ್ಡ ಆಕರ್ಷಣೆ ಎಂದರೆ ಅದು ನಟಿ ಟಬು. ಟ್ರೇಲರ್‌ನಲ್ಲಿ ಅವರ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಗಂಭೀರತೆ ಮತ್ತು ನಿಗೂಢತೆಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿರುವಂತೆ ಕಾಣುತ್ತಿದೆ. ಟ್ರೇಲರ್​ನಲ್ಲಿ ಅದ್ದೂರಿ ದೃಶ್ಯಗಳು ಮತ್ತು ಹಾಸ್ಯದ ಸಂಭಾಷಣೆಗಳು ಇದ್ದರೂ ಕೂಡ ಚಿತ್ರದ ಮೂಲ ಕಥೆ ಸ್ವಲ್ಪ ಹಳೆಯ ಶೈಲಿಯದ್ದೇ ಇರಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.

ಭೂತ್ ಬಂಗ್ಲ ಟ್ರೇಲರ್:

ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. 1000 ಕೋಟಿಗೂ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಆ ಚಿತ್ರದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ, ಪ್ರೇಕ್ಷಕರು ಹಾರರ್ ಕಾಮಿಡಿ ಶೈಲಿಯ ‘ಭೂತ್ ಬಂಗ್ಲ’ ಚಿತ್ರಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಕಾಂಬಿನೇಷನ್ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಇದೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಅವರಿಬ್ಬರು ಮ್ಯಾಜಿಕ್ ಮಾಡುತ್ತಾರಾ ಇಲ್ಲವಾ ಎಂಬ ಅನುಮಾನ ಮೂಡಿದೆ. ನೆಟ್ಟಿಗರ ವಲಯದಲ್ಲಿ ಈ ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್ 16ರಂದು ಸಿನಿಮಾದ ಅಸಲಿ ಕಹಾನಿ ಏನು ಎಂಬುದು ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್