AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಹಾಡಿನಿಂದ 70 ಕೋಟಿ ಲಾಭ, ಹಾಡು ಮಾಡಿದವನಿಗೆ ಸಿಕ್ಕಿದ್ದೆಷ್ಟು?

Music Director: ಸಿನಿಮಾ ಹಾಡುಗಳನ್ನು ಯೂಟ್ಯೂಬ್, ಸ್ಪೋಟಿಫೈ, ಅಮೆಜಾನ್ ಮ್ಯೂಸಿಕ್, ಜಿಯೋ ಸಾವನ್ ರೀತಿಯ ಅಪ್ಲಿಕೇಶನ್​​ಗಳಲ್ಲಿ ಹಾಡುಗಳನ್ನು ಕೇಳುತ್ತಾರೆ. ಯೂಟ್ಯೂಬ್​​ಗಳೆಲ್ಲ ಹಾಡುಗಳನ್ನು ಜನ ಉಚಿತವಾಗಿ ನೋಡುತ್ತಾರೆ. ಆದರೆ ಇದರಿಂದಲೇ ಆಡಿಯೋ ಸಂಸ್ಥೆಗಳಿಗೆ ಭಾರಿ ಮೊತ್ತದ ಹಣ ಬರುತ್ತದೆ. ಈ ಬಗ್ಗೆ ಇದೀಗ ಹಿಂದಿಯ ಸಂಗೀತ ನಿರ್ದೇಶಕರೊಬ್ಬರು ಮಾತನಾಡಿದ್ದಾರೆ.

ಒಂದು ಹಾಡಿನಿಂದ 70 ಕೋಟಿ ಲಾಭ, ಹಾಡು ಮಾಡಿದವನಿಗೆ ಸಿಕ್ಕಿದ್ದೆಷ್ಟು?
Amaal Malik
ಮಂಜುನಾಥ ಸಿ.
|

Updated on:Feb 03, 2026 | 5:08 PM

Share

ಸಿನಿಮಾಗಳ (Cinema) ಆಡಿಯೋ ಹಕ್ಕುಗಳು ಕೋಟ್ಯಂತರ ರೂಪಾಯಿಗೆ ಮಾರಾಟ ಆಗುತ್ತವೆ. ಮುಂಚೆಯೆಲ್ಲ ಜನ ಸಿನಿಮಾಗಳ ಸಿಡಿ, ಕ್ಯಾಸೆಟ್ ಖರೀದಿ ಮಾಡಿ ಹಾಡು ಕೇಳುತ್ತಿದ್ದರು. ಆದರೆ ಈಗ ಯೂಟ್ಯೂಬ್, ಸ್ಪೋಟಿಫೈ, ಅಮೆಜಾನ್ ಮ್ಯೂಸಿಕ್, ಜಿಯೋ ಸಾವನ್ ರೀತಿಯ ಅಪ್ಲಿಕೇಶನ್​​ಗಳಲ್ಲಿ ಹಾಡುಗಳನ್ನು ಕೇಳುತ್ತಾರೆ. ಯೂಟ್ಯೂಬ್​​ಗಳೆಲ್ಲ ಹಾಡುಗಳನ್ನು ಜನ ಉಚಿತವಾಗಿ ನೋಡುತ್ತಾರೆ. ಆದರೆ ಇದರಿಂದಲೇ ಆಡಿಯೋ ಸಂಸ್ಥೆಗಳಿಗೆ ಭಾರಿ ಮೊತ್ತದ ಹಣ ಬರುತ್ತದೆ. ಈ ಬಗ್ಗೆ ಇದೀಗ ಹಿಂದಿಯ ಸಂಗೀತ ನಿರ್ದೇಶಕರೊಬ್ಬರು ಮಾತನಾಡಿದ್ದಾರೆ.

ಅಮಾಲ್ ಮಲ್ಲಿಕ್, ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಸಹ. ಹಲವಾರು ಅತ್ಯುತ್ತಮ ಸಿನಿಮಾ ಹಾಡುಗಳನ್ನು ನೀಡಿದ್ದಾರೆ. ಆದರೆ ಕೆಲವು ವಿವಾದಗಳಿಗೆ ವಿಶೇಷವಾಗಿ ಸಂಗೀತ ಸಂಸ್ಥೆಗಳ ವಿರೋಧವನ್ನು ಕಟ್ಟಿಕೊಂಡು ಅವಕಾಶ ವಂಚಿತರಾಗಿದ್ದಾರೆ. ಈ ಬಗ್ಗೆ ಇದೀಗ ಅಮಾಲ್ ಮಲ್ಲಿಕ್ ಅವರು ಮಾತನಾಡಿದ್ದು, ಸಂಗೀತ ಸಂಸ್ಥೆಗಳು ಸಂಗೀತಗಾರರಿಗೆ ಮಾಡುವ ಅನ್ಯಾಯವನ್ನು ವಿವರಿಸಿದ್ದಾರೆ. ತಮ್ಮ ಒಂದೇ ಒಂದು ಹಾಡಿನಿಂದ ಸಂಗೀತ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಹಣ ಬಂತೆಂದು ತಿಳಿಸಿದ್ದಾರೆ.

ರಣ್​​ಬೀರ್ ಕಪೂರ್, ಅರ್ಜುನ್ ರಾಮ್​​ಪಾಲ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ರಾಯ್’ ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದರು. ಆ ಸಿನಿಮಾದ ‘ಸೂರಜ್ ಡೂಬಾ ಹೈ’ ಹಾಡು ಸಖತ್ ಹಿಟ್ ಆಗಿತ್ತು. ಟಿ ಸೀರೀಸ್​​ನವರು ಆಡಿಯೋ ಹಕ್ಕು ಖರೀದಿ ಮಾಡಿದ್ದರು. ಅಮಾಲ್ ಮಲ್ಲಿಕ್ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಆ ಒಂದು ಹಾಡಿನಿಂದ ಟಿ ಸೀರೀಸ್​​ಗೆ ಈ ವರೆಗೆ 70 ಕೋಟಿಗೂ ಹೆಚ್ಚು ಮೊತ್ತ ಸಿಕ್ಕಿದೆಯಂತೆ.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?

ಮ್ಯೂಸಿಕ್ ಕಂಪೆನಿಗೆ 60-70 ಕೋಟಿ ಕೇವಲ ಆ ಒಂದು ಹಾಡಿನಿಂದ ಬಂತು ಆದರೆ ನನಗೆ ಸಿಕ್ಕಿದ್ದು ಬಹಳ ಅತ್ಯಲ್ಪ. ನನಗೆ ಈ ವರೆಗೆ ಸುಮಾರು ಒಂದು ಕೋಟಿ ರೂಪಾಯಿ ಸಿಕ್ಕಿರಬಹುದು ಅಷ್ಟೆ. ಈ ಹಕ್ಕಿಗಾಗಿ ಹೋರಾಟ ಎಂಬುದು ಕೇವಲ ನನ್ನ ವೈಯಕ್ತಿಕ ಸಂಪತ್ತಿಗಾಗಿ ಅಲ್ಲ. ನಾನು ಜನರಿಗೆ ಸಹಾಯ ಮಾಡಲು ಆ ರೀತಿಯ ಹಣವನ್ನು ಗಳಿಸಲು ಬಯಸುತ್ತೇನೆ. ನಾನು ಜನ ಸೇವೆಯನ್ನು ನನ್ನದೇ ಆದ ರೀತಿಯಲ್ಲಿ ಮಾಡುತ್ತೇನೆ, ನಾನು ಮಾಡುವ ಹೋರಾಟದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ಜನರಿಗೆ ಸಹಾಯ ಮಾಡಲು ನನಗೆ ಹಣ ಬೇಕು. ನನಗೆ ಹಕ್ಕುಗಳು ಅಥವಾ ಸಮಾನ ಹಕ್ಕುಗಳು ಅಥವಾ ಕೆಲವು ರೀತಿಯ ಹಕ್ಕುಗಳು ಇದ್ದಾಗ ಮಾತ್ರ ಅದು ಸಾಧ್ಯ’ ಎಂದಿದ್ದಾರೆ ಅಮಾಲ್.

ದಕ್ಷಿಣದ ಸಂಗೀತ ನಿರ್ದೇಶಕರುಗಳ ಬಗ್ಗೆ ಮಾತನಾಡಿರುವ ಅಮಾಲ್ ಮಲ್ಲಿಕ್, ‘ದಕ್ಷಿಣದ ಸಂಗೀತ ನಿರ್ದೇಶಕರು ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಎಆರ್ ರೆಹಮಾನ್ ಹಾಗೂ ಇನ್ನೂ ಕೆಲವರು ತಮ್ಮ ನಿರ್ಣಯಕ್ಕೆ ಗಟ್ಟಿಯಾಗಿ ನಿಂತು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ’ ಎಂದು ಮಲ್ಲಿಕ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Tue, 3 February 26

Follow Us
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ