ಅನಿಲ್ ಕಪೂರ್, ಬೋನಿ ಕಪೂರ್ ತಾಯಿ ನಿಧನ, ಚಿತ್ರರಂಗದ ಸಂತಾಪ
Nirmala Kapoor passed away: ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್, ನಿರ್ಮಾಪಕ ಬೋನಿ ಕಪೂರ್ ಅವರ ತಾಯಿ ನಿರ್ಮಲಾ ಕಪೂರ್ ಅವರು ನಿನ್ನೆ ಸಂಜೆ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ನಿರ್ಮಲಾ ಕಪೂರ್ ಅವರ ಅಂತಿಮ ದರ್ಶನಕ್ಕೆ ಬಾಲಿವುಡ್ನ ಹಲವು ದಿಗ್ಗಜರು ಬೋನಿ ಕಪೂರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಿರ್ಮಲಾ ಕಪೂರ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಬಾಲಿವುಡ್ನ (Bollywood) ಖ್ಯಾತ ನಟ ಅನಿಲ್ ಕಪೂರ್ (Anil Kapoor), ನಿರ್ಮಾಪಕ ಬೋನಿ ಕಪೂರ್ ಅವರಿಗೆ ಮಾತೃ ವಿಯೋಗ ಉಂಟಾಗಿದೆ. ಈ ಇಬ್ಬರು ದಿಗ್ಗಜರ ತಾಯಿ ನಿರ್ಮಲಾ ಕಪೂರ್ ನಿನ್ನೆ (ಮೇ 02) ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಬಾಲಿವುಡ್ನ ತಾರೆಯರಾದ ರಾಣಿ ಮುಖರ್ಜಿ, ಕರಣ್ ಜೋಹರ್, ಅನನ್ಯಾ ಪಾಂಡೆ ಇನ್ನೂ ಹಲವಾರು ಮಂದಿ ರಾತ್ರಿಯೇ ಕಪೂರ್ ಮನಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಅನಿಲ್ ಕಪೂರ್, ಬೋನಿ ಕಪೂರ್ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಿರ್ಮಲಾ ಕಪೂರ್ ಅವರನ್ನು ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ 5:20ಕ್ಕೆ ಅವರು ಕೊನೆ ಉಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಹೇಳಿದೆ. ಅವರು ಶಾಂತಿನಿಂದ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಸಿಇಓ ಸಂತೋಷ್ ಶೆಟ್ಟಿ ಹೇಳಿದ್ದಾರೆ. ನಿರ್ಮಲಾ ಕಪೂರ್ ಅವರಿಗೆ ನಾಲ್ಕು ಮಂದಿ ಮಕ್ಕಳು, ಬೋನಿ ಕಪೂರ್, ರೀನಾ, ಸಂಜಯ್ ಕಪೂರ್ ಮತ್ತು ಅನಿಲ್ ಕಪೂರ್.
ಇದನ್ನೂ ಓದಿ:ಯಶ್ ಹಾದಿಯಲ್ಲಿ ಅನಿಲ್ ಕಪೂರ್, ಶಾರುಖ್, ಅಜಯ್, ಅಮಿತಾಬ್ ಬಚ್ಚನ್ಗೂ ಮಾದರಿ
ನಿರ್ಮಲಾ ಮೊಮ್ಮಕಳು ಸಹ ದೊಡ್ಡ ಸ್ಟಾರ್ಗಳು. ಸೋನಂ ಕಪೂರ್, ಜಾನ್ಹವಿ ಕಪೂರ್, ಖುಷಿ ಕಪೂರ್, ಅರ್ಜುನ್ ಕಪೂರ್, ಹರ್ಷವರ್ಧನ್ ಕಪೂರ್ ಇನ್ನೂ ಕೆಲವರಿದ್ದಾರೆ. ತಾಯಿಯ ಅಗಲಿಕೆ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಿರ್ಮಾಪಕ ಬೋನಿ ಕಪೂರ್, ‘ಅವರು ಶಾಂತಿಯಿಂದ ಇಹಲೋಕ ತ್ಯಜಿಸಿದ್ದಾರೆ. ಅವರು ತಮ್ಮ ಕುಟುಂಬ, ಪ್ರೀತಿಪಾತ್ರರೊಂದಿಗೆ ತುಂಬು ಜೀವನ ನಡೆಸಿದರು. ಈಗ ನಾಲ್ಕು ಮಕ್ಕಳನ್ನು, ಪ್ರೀತಿಯ ಸೊಸೆಯಂದಿರನ್ನು, ಅಳಿಯನನ್ನು, 11 ಮೊಮ್ಮಕ್ಕಳನ್ನು, ನಾಲ್ಕು ಮರಿ ಮೊಮ್ಮಕ್ಕಳನ್ನು, ಹಾಗೂ ಜೀವನಕ್ಕೆ ಆಗುವಷ್ಟು ನೆನಪುಗಳನ್ನು ತ್ಯಜಿಸಿ ಹೊರಟಿದ್ದಾರೆ ಎಂದಿದ್ದಾರೆ.
ನಿರ್ಮಲಾ ಕಪೂರ್ ಅವರ ಪತಿ ಸುರೇಂಧರ್ ಕಪೂರ್ ಅವರು ಸಿನಿಮಾ ನಿರ್ಮಾಪಕರಾಗಿದ್ದರು. ಅವರು ಹಿಂದಿಯ ಜನಪ್ರಿಯ ಸಿನಿಮಾಗಳಾದ ‘ಹಮ್ ಪಾಂಚ್’, ‘ಓ ಸಾಥ್ ದಿನ್’, ‘ಲೋಫರ್’, ‘ಜುದಾಯಿ’, ‘ಹಮಾರೆ ದಿಲ್ ಆಪ್ಕೆ ಪಾಸ್ ಹೈ’, ‘ಓ ಸಾಥ್ ದಿನ್’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಸುರೇಂಧರ್ ಕಪೂರ್ ಅವರು 2011 ರಲ್ಲಿ ನಿಧನ ಹೊಂದಿದರು. ಇಂದು ನಿರ್ಮಲಾ ಕಪೂರ್ ಅವರ ಅಂತ್ಯ ಸಂಸ್ಕಾರ ಮುಂಬೈನಲ್ಲಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




