‘ಎರಡು ಪೆಗ್ ಬಿದ್ಮೇಲೆ ಸಲ್ಮಾನ್ ಖಾನ್ ತುಂಬಾ ಒಳ್ಳೆಯವರು’; ಖ್ಯಾತ ಗಾಯಕನ ಶಾಕಿಂಗ್ ಹೇಳಿಕೆ
ಖ್ಯಾತ ಗಾಯಕ ಮಿಕಾ ಸಿಂಗ್ ಅವರು ಸಲ್ಮಾನ್ ಖಾನ್ ಅವರ ರಾತ್ರಿಯ ವ್ಯಕ್ತಿತ್ವದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸಂಜೆ ಆರು ಗಂಟೆಯ ನಂತರ ಮಾತ್ರ ಸಲ್ಮಾನ್ ಅವರನ್ನು ಭೇಟಿಯಾಗಬೇಕೆಂದು ಸಲಹೆ ನೀಡಿದ್ದಾರೆ. ಎರಡು ಪೆಗ್ ಕುಡಿದ ನಂತರ ಸಲ್ಮಾನ್ ಅವರು ಹೇಗೆ ಬದಲಾಗುತ್ತಾರೆ ಎಂಬುದನ್ನು ಮಿಕಾ ವಿವರಿಸಿದ್ದಾರೆ.

ಖ್ಯಾತ ಗಾಯಕ ಹಾಗೂ ರ‍್ಯಾಪರ್ ಮಿಕಾ ಸಿಂಗ್ ಅವರು ಸಲ್ಮಾನ್ ಖಾನ್ (Salman Khan) ಜೊತೆ ಒಳ್ಳೆಯ ಬಾಂಡಿಂಗ್ ಹೊಂದಿದ್ದಾರೆ. ಸಲ್ಮಾನ್ ಖಾನ್ ಬಗೆಗಿನ ಹಲವು ರಹಸ್ಯಗಳು ಅವರಿಗೆ ಗೊತ್ತಿವೆ. ಈಗ ಅವರು ಸಲ್ಮಾನ್ ಖಾನ್ ಬಗ್ಗೆ ಒಂದು ದೊಡ್ಡ ವಿಚಾರ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಸಂಜೆ 6 ಗಂಟೆ ಮೇಲೆ ಭೇಟಿ ಮಾಡಬೇಕು ಎಂದಿದ್ದಾರೆ. ಶುಭಂಕರ್ ಮಿಶ್ರಾ ಜೊತೆ ನೀಡಿದ ಸಂದರ್ಶನದಲ್ಲಿ ಮಿಕಾ ಈ ವಿಚಾರ ರಿವೀಲ್ ಮಾಡಿದ್ದಾರೆ. ಎರಡು ಪೆಗ್ ಹೊಡೆದ ಮೇಲೆ ಅವರು ಯಾವ ರೀತಿ ಇರುತ್ತಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.
‘ಸಲ್ಮಾನ್ ಖಾನ್ ರಾತ್ರಿ ಮೇಲೆ ಬೇರೆಯದೇ ರೀತಿಯ ವ್ಯಕ್ತಿ ಆಗುತ್ತಾರೆ. ಅವರು ಬೆಳಿಗ್ಗೆ ಇನ್ನೊಂದು ರೀತಿ ಕಾಣಿಸುತ್ತಾರೆ. ಎರಡು ಪೆಗ್ ಹಾಕಿದ ಮೇಲೆ ಸಲ್ಮಾನ್ ಖಾನ್ ನನ್ನ ಬಳಿ ಓಪನ್ ಆಗಿ ಮಾತನಾಡುತ್ತಾರೆ. ಅವರ ಸರಿಸಮಾನರಾಗಿ ನನ್ನ ನೋಡುತ್ತಾರೆ. ಎರಡು ಪೆಗ್ ಹಾಕಿದ ಮೇಲೆ ತುಂಬಾ ಒಳ್ಳೆಯವರು’ ಎಂದಿದ್ದಾರೆ ಅವರು.
ಮೀಟ್ ಬ್ರದರ್ಸ್ ಮತ್ತು ಸಲ್ಮಾನ್ ಅವರೊಂದಿಗಿನ ಭೇಟಿಯ ಬಗ್ಗೆ ಮಿಕಾ ಸಿಂಗ್ ಒಂದು ವಿಚಾರವನ್ನು ಹಂಚಿಕೊಂಡರು. ಈ ಕಥೆಯನ್ನು ಅವರು ಯಾರಿಗೂ ಹೇಳಿಲ್ಲವಂತೆ. ಸಲ್ಮಾನ್ ಖಾನ್ ಅವರು ಮೀಟ್ ಬ್ರದರ್ಸ್ ಜೊತೆ ರಾತ್ರಿ ಬಿರಿಯಾನಿ ತಿಂದಿದ್ದರು, ಮತ್ತು ಅವರು ಉತ್ತಮ ಸ್ನೇಹಿತರಾಗುತ್ತಾರೆಂದು ಭಾವಿಸಿದ್ದರಂತೆ. ಆದರೆ, ಅಲ್ಲಾಗಿದ್ದೇ ಬೇರೆ.
ಮೀಟ್ ಬ್ರದರ್ಸ್ ಮತ್ತು ಸಲ್ಮಾನ್ ಅವರೊಂದಿಗಿನ ಭೇಟಿಯ ಬಗ್ಗೆ ಮಿಕಾ ವಿವರಿಸಿದರು. ‘ನಾನು ಈ ಕಥೆಯನ್ನು ಎಂದಿಗೂ ಹೇಳಿಲ್ಲ. ಮೀಟ್ ಬ್ರದರ್ಸ್ ಒಮ್ಮೆ ಅವರೊಂದಿಗೆ ಬಿರಿಯಾನಿ ತಿಂದಿದ್ದರು. ಆ ಬಳಿಕ ಅವರು ಸಲ್ಲು ಜೊತೆ ಉತ್ತಮ ಸ್ನೇಹಿತರಾದರು ಎಂದು ಭಾವಿಸಿದ್ದರು. ನನಗೆ ಗೊತ್ತಿರೋ ವಿಚಾರ ಅವರಿಗೆ ಗೊತ್ತಿಲ್ಲ’ ಎಂದಿದ್ದಾರೆ ಮಿಕಾ ಸಿಂಗ್.
ಇದನ್ನೂ ಓದಿ: ವಯಸ್ಸಾಯ್ತು ಎಂದು ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸಲ್ಮಾನ್ ಖಾನ್
‘ಮೀಟ್ ಬ್ರದರ್ಸ್ ಜೊತೆ ಸಲ್ಮಾನ್ ಖಾನ್ ಬಿರಿಯಾನಿ ತಿಂದಿದ್ದು ರಾತ್ರಿ. ಮರುದಿನ ಮೀಟ್ ಬ್ರದರ್ಸ್ ಸಲ್ಲುಗೆ ಎದುರಾದರು. ಸಲ್ಮಾನ್ ಒಂದು ಹೆಲ್ಲೋ ಕೂಡ ಹೇಳದೇ ಹೋದರು. ಇದನ್ನು ನೋಡಿ ಮೀಟ್ ಬ್ರದರ್ಸ್ಗೆ ಶಾಕ್ ಆಯಿತು’ ಎಂದಿದ್ದಾರೆ ಅವರು. ‘ಸಲ್ಮಾನ್ ಖಾನ್ ಅವರನ್ನು ಸಂಜೆ 6 ಗಂಟೆ ಬಳಿಕ ಮಾತ್ರ ಭೇಟಿ ಆಗಬೇಕು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅವರನ್ನು ಭೇಟಿ ಮಾಡಲೇಬಾರದು’ ಎಂದಿದ್ದಾರೆ ಮಿಕಾ ಸಿಂಗ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 pm, Sat, 3 May 25








