AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮನ್ನಾ ಭಾಟಿಯಾ ದೇಹದ ಬಗ್ಗೆ ಕೀಳು ಹೇಳಿಕೆ, ಕಾಲಿಗೆ ಬೀಳಲು ರೆಡಿ ಎಂದ ನಟ

Annu Kapoor movie: ಅನ್ನು ಕಪೂರ್, ಬಾಲಿವುಡ್​ ಮತ್ತು ಹಿಂದಿ ಟಿವಿ ರಂಗದ ಬಲು ಹಿರಿಯ ನಟ. ಒಂದಿಲ್ಲೊಂದು ಸಂದರ್ಶನ, ಪಾಡ್​​ಕಾಸ್ಟ್​​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಅನ್ನು ಕಪೂರ್, ಇತರೆ ನಟ-ನಟಿಯರ ಬಗ್ಗೆ ಮಾತನಾಡುವುದು ತುಸು ಹೆಚ್ಚು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿದ್ದರು. ನೆಟ್ಟಿಗರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ತಮನ್ನಾ ಭಾಟಿಯಾ ದೇಹದ ಬಗ್ಗೆ ಕೀಳು ಹೇಳಿಕೆ, ಕಾಲಿಗೆ ಬೀಳಲು ರೆಡಿ ಎಂದ ನಟ
Annu Kapoor Tamannah Bhatia
ಮಂಜುನಾಥ ಸಿ.
|

Updated on: Apr 24, 2026 | 3:12 PM

Share

ಅನ್ನು ಕಪೂರ್ (Annu Kapoor), ಬಾಲಿವುಡ್​ ಮತ್ತು ಹಿಂದಿ ಟಿವಿ ರಂಗದ ಬಲು ಹಿರಿಯ ನಟ. ರಾಜ್​ಶ್ರೀ ಪಾನ್ ಮಸಾಲ ಜಾಹೀರಾತುಗಳಿಂದ ಅಂತೂ ಭಾರಿ ಜನಪ್ರಿಯತೆಯನ್ನು ಅನ್ನು ಕಪೂರ್ ಪಡೆದುಕೊಂಡಿದ್ದಾರೆ. ಒಂದಿಲ್ಲೊಂದು ಸಂದರ್ಶನ, ಪಾಡ್​​ಕಾಸ್ಟ್​​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಅನ್ನು ಕಪೂರ್, ಇತರೆ ನಟ-ನಟಿಯರ ಬಗ್ಗೆ ಮಾತನಾಡುವುದು ತುಸು ಹೆಚ್ಚು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿದ್ದರು. ನೆಟ್ಟಿಗರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಹಿರಿಯ ನಟ ಅನ್ನು ಕಪೂರ್ ಒಂದು ಸಂದರ್ಶನದಲ್ಲಿ ತಮನ್ನಾ ಅವರ ‘ಆಜ್ ಕಿ ರಾತ್’ ಐಟಂ ಹಾಡಿನ ಬಗ್ಗೆ ಮಾತನಾಡುತ್ತಾ, ಅವರ ದೇಹವನ್ನು ಹಿಂದಿಯಲ್ಲಿ ‘ದೂಧಿಯಾ ಬದನ್’ (ಹಾಲಿನಂಥ ಮೈಮಾಟ) ಎಂದು ಬಣ್ಣಿಸಿದ್ದರು. ಹಿಂದಿಯಲ್ಲಿ ಇದು ತುಸು ಅಶ್ಲೀಲ ಅರ್ಥ ನೀಡುವ ಮಾತಾಗಿದೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು ಮತ್ತು ಅನೇಕರು ಇದನ್ನು ‘ಅಶ್ಲೀಲ’, ಮಹಿಳೆಯ ಬಗ್ಗೆ ಅಗೌರವ ಎಂದು ಟೀಕಿಸಿದ್ದರು.

ಅನ್ನು ಕಪೂರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ‘ಇಂಗ್ಲಿಷ್‌ನಲ್ಲಿ ‘ಮಿಲ್ಕಿ ಬಾಡಿ’ ಎಂದರೆ ಯಾರೂ ಆಕ್ಷೇಪಿಸುವುದಿಲ್ಲ, ಆದರೆ ನಾನು ಹಿಂದಿಯಲ್ಲಿ ಹೇಳಿದ್ದಕ್ಕೆ ಜನರಿಗೆ ಸಮಸ್ಯೆಯಾಗಿದೆ. ನಮ್ಮ ಸ್ವಂತ ಭಾಷೆಯಲ್ಲಿ ಹೇಳಿದ್ದು ಹೆಚ್ಚು ಚುಚ್ಚಿದಂತೆ ಕಾಣುತ್ತದೆ’ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ‘ನಾನು ಅವರ ದೇಹವನ್ನು ಕೇವಲ ಶ್ಲಾಘಿಸಿದ್ದೇನೆಯೇ ಹೊರತು ಯಾವುದೇ ಕೆಟ್ಟ ದೃಷ್ಟಿಯಿಂದ ಅಥವಾ ಕಾಮದ ದೃಷ್ಟಿಯಿಂದ ನೋಡಿಲ್ಲ. 71 ವರ್ಷದ ವ್ಯಕ್ತಿಯಾದ ನನಗೆ ಅವರ ವಯಸ್ಸಿನ ಮಕ್ಕಳಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಪುತ್ರನೊಟ್ಟಿಗೆ ತಮನ್ನಾ ಭಾಟಿಯಾ ಮಾತುಕತೆ

‘ಈ ಹೇಳಿಕೆಯಿಂದ ನಟಿ ತಮನ್ನಾ ಅವರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸಲು ತಮಗೆ ಯಾವುದೇ ಮುಜುಗರವಿಲ್ಲ. ಒಂದು ವೇಳೆ ಅವರು ನಾನು ಆ ರೀತಿ ಹೇಳಿದ್ದೇನೆಯೇ ಎಂದು ಕೇಳಿದರೆ, ಹೌದು ಎಂದು ಒಪ್ಪಿಕೊಳ್ಳುತ್ತೇನೆ. ನಿಮಗೆ ಅದರಿಂದ ನೋವಾಗಿದ್ದರೆ ನಾನು ನಿಮ್ಮ ಪಾದ ಮುಟ್ಟಿ ಕ್ಷಮೆಯಾಚಿಸುತ್ತೇನೆ. ನನ್ನ ಉದ್ದೇಶ ತಪ್ಪಾಗಿಲ್ಲದಿರುವಾಗ ನನಗೆ ಕ್ಷಮೆ ಕೇಳಲು ಹಿಂಜರಿಕೆಯಿಲ್ಲ’ ಎಂದು ಹೇಳಿದ್ದಾರೆ.

‘ಸ್ತ್ರೀ 2’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ‘ಆಜ್ ಕಿ ರಾತ್’ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ನೃತ್ಯವನ್ನು ಹೊಗಳು ಭರದಲ್ಲಿ ಅನ್ನು ಕಪೂರ್ ಈ ವಿವಾದಾತ್ಮಕ ಶಬ್ದಗಳನ್ನು ಬಳಸಿದ್ದರು. ಅಲ್ಲದೆ, ತಮನ್ನಾ ಅವರ ಹಾಡು ಮತ್ತು ಅವರ ಮೈಮಾಟವನ್ನು ನೋಡಿ ಮಕ್ಕಳು ಚೆನ್ನಾಗಿ ನಿದ್ರಿಸುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದು ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ