Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಸಾಯುತ್ತೀರಾ?’; ರಕ್ತಸಿಕ್ತವಾಗಿ ಬಿದ್ದಿದ್ದ ಸೈಫ್​​ನ ಕೇಳಿದ್ದ ತೈಮೂರ್

ಜನವರಿ 16ರಂದು ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಯತ್ನ ಮತ್ತು ದಾಳಿಯ ಬಗ್ಗೆ ಅವರು ನೀಡಿದ ಮೊದಲ ಸಂದರ್ಶನದಲ್ಲಿ, ಘಟನೆಯ ವಿವರಗಳು ಮತ್ತು ಅವರ ಕುಟುಂಬದ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದ್ದಾರೆ. ಕಳ್ಳನನ್ನು ಎದುರಿಸಿದ ರೀತಿ, ಮಕ್ಕಳನ್ನು ರಕ್ಷಿಸಿದ ರೀತಿ, ಮತ್ತು ಆಸ್ಪತ್ರೆಗೆ ರಿಕ್ಷಾದಲ್ಲಿ ಹೋದ ಕಾರಣಗಳನ್ನು ಅವರು ವಿವರಿಸಿದ್ದಾರೆ.

‘ನೀವು ಸಾಯುತ್ತೀರಾ?’; ರಕ್ತಸಿಕ್ತವಾಗಿ ಬಿದ್ದಿದ್ದ ಸೈಫ್​​ನ ಕೇಳಿದ್ದ ತೈಮೂರ್
ತೈಮೂರ್​-ಸೈಫ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 10, 2025 | 1:50 PM

ಈ ವರ್ಷ ಜನವರಿ 16ರಂದು ನಟ ಸೈಫ್ ಅಲಿ ಖಾನ್ ಅವರನ್ನು ಸ್ವಂತ ಮನೆಯಲ್ಲಿಯೇ ಕಳ್ಳನೊಬ್ಬ ಇರಿದಿದ್ದ. ಕಳ್ಳತನದ ಉದ್ದೇಶದಿಂದ ಮನೆಗೆ ನುಗ್ಗಿದ ಆರೋಪಿ, ಸೈಫ್ ಗೆ ಚಾಕುವಿನಿಂದ ಆರು ಬಾರಿ ಇರಿದಿದ್ದಾನೆ. ಈ ಘಟನೆಯ ನಂತರ ಸೈಫ್ ತಮ್ಮ ಮೊದಲ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ, ಸೈಫ್ ಘಟನೆಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಜನವರಿ 16 ರ ಮಧ್ಯರಾತ್ರಿ ಏನಾಯಿತು, ಸೈಫ್ ಮಕ್ಕಳನ್ನು ಹೇಗೆ ಉಳಿಸಿದರು, ನಂತರ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಏಕೆ ಕರೆದೊಯ್ಯಲಾಯಿತು ಮತ್ತು ಘಟನೆಯ ನಂತರ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು – ಈ ಎಲ್ಲಾ ಪ್ರಶ್ನೆಗಳಿಗೆ ಅವರು ಈ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

ಕಳ್ಳನೊಂದಿಗಿನ ಜಗಳದಲ್ಲಿ ಸೈಫ್ ಗಾಯಗೊಂಡರು. ಅವರ ಬಟ್ಟೆಗಳು ರಕ್ತದಿಂದ ಕೂಡಿದ್ದವು. ಕಳ್ಳನನ್ನು ಕೋಣೆಯಲ್ಲಿ ಕೂಡಿಹಾಕಿದ ನಂತರ, ಸೈಫ್, ಕರೀನಾ ಮತ್ತು ಅವರ ಇಬ್ಬರು ಮಕ್ಕಳು ಕಟ್ಟಡದ ಕೆಳಕ್ಕೆ ಹೋದರು. ಸೈಫ್​ನನ್ನು ಆಸ್ಪತ್ರೆಗೆ ಕರೆದೊಯ್ಯಲು ರಿಕ್ಷಾ ಅಥವಾ ಟ್ಯಾಕ್ಸಿಗಾಗಿ ಕರೀನಾ ಬೀದಿಯಲ್ಲಿ ಕೂಗುತ್ತಿದ್ದರು. ಈ ಘಟನೆಯ ಬಗ್ಗೆ ಸೈಫ್ ಮಾತನಾಡಿದ್ದಾರೆ.

‘ಕರೀನಾ ತುಂಬಾ ಹೆದರುತ್ತಿದ್ದಳು. ಅವಳು ಸಹಾಯಕ್ಕಾಗಿ ಬೀದಿಯಲ್ಲಿ ಕಿರುಚುತ್ತಿದ್ದಳು. ಅವಳು, ನೀನು ಆಸ್ಪತ್ರೆಗೆ ಹೋಗು, ನಾನು ಸಹೋದರಿ ಕರಿಷ್ಮಾಳ ಮನೆಗೆ ಹೋಗುತ್ತೇನೆ ಎಂದಳು. ಅವಳು ಭಯದಿಂದ ಎಲ್ಲರನ್ನೂ ಕರೆಯುತ್ತಿದ್ದಳು, ಆದರೆ ಯಾರೂ ಎಚ್ಚರವಾಗಿರಲಿಲ್ಲ. ನಾನು ಚೆನ್ನಾಗಿದ್ದೇನೆ, ನಾನು ಸಾಯುವುದಿಲ್ಲ ಎಂದು ಹೇಳುವ ಮೂಲಕ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಆಗ ತೈಮೂರ್ ಆತಂಕದಿಂದ ನನ್ನತ್ತ ನೋಡಿ, ‘ನೀವು ಸಾಯುತ್ತೀರಾ?’ ಎಂದು ಕೇಳಿದ. ನಾನು ಅವನಿಗೆ ‘ಇಲ್ಲ’ ಎಂದೆ’ ಎಂದು ವಿವರಿಸಿದ್ದಾರೆ ಸೈಫ್ ಅಲಿ ಖಾನ್.

ದಾಳಿಯ ನಂತರ ಸೈಫ್ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದು ಅವರ ಹಿರಿಯ ಮಗ ಇಬ್ರಾಹಿಂ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ, ನಂತರ, ಲೀಲಾವತಿ ಆಸ್ಪತ್ರೆಯ ವೈದ್ಯರು ಸೈಫ್ ಜೊತೆ ಆಸ್ಪತ್ರೆಗೆ ಬಂದಿದ್ದು ಎಂಟು ವರ್ಷದ ತೈಮೂರ್, ಇಬ್ರಾಹಿಂ ಅಲ್ಲ ಎಂದು ಸ್ಪಷ್ಟಪಡಿಸಿದರು. ಇಷ್ಟು ಚಿಕ್ಕ ಮಗುವಿನೊಂದಿಗೆ ಆಸ್ಪತ್ರೆಗೆ ಏಕೆ ಹೋದರು ಎಂದು ಕೇಳಿದಾಗ, ಸೈಫ್, ‘ಅವನು ಸಂಪೂರ್ಣವಾಗಿ ಶಾಂತನಾಗಿದ್ದನು’ ಎಂದು ಹೇಳಿದರು.

ಇದನ್ನೂ ಓದಿ: ‘ಅವರಿಗೂ ಮನೆ ಇದೆ’; ಡ್ರೈವರ್ ಏಕಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸೈಫ್ ಅಲಿ ಖಾನ್

‘ನಾನು ನಿಮ್ಮ ಜೊತೆ ಬರುತ್ತೇನೆ ಎಂದು ತೈಮೂರ್ ಹೇಳಿದೆ. ಆ ಸಮಯದಲ್ಲಿ, ನನಗೆ ಏನಾದರೂ ಸಂಭವಿಸಿದರೆ, ಅವನ ಮುಖವನ್ನು ನೋಡುವುದೇ ನನಗೆ ತುಂಬಾ ಧೈರ್ಯ ನೀಡುತ್ತದೆ ಎಂದು ನನಗನ್ನಿಸಿತು. ನನಗೆ ಒಬ್ಬಂಟಿಯಾಗಿ ಹೋಗಲು ಇಷ್ಟವಿರಲಿಲ್ಲ. ನನ್ನ ಹೆಂಡತಿ ತೈಮೂರ್‌ನನ್ನು ನನ್ನೊಂದಿಗೆ ಕಳುಹಿಸಿದಳು ಏಕೆಂದರೆ ಅವನು ನನಗಾಗಿ ಏನು ಮಾಡಬಲ್ಲನೆಂದು ಅವಳಿಗೆ ತಿಳಿದಿತ್ತು. ಬಹುಶಃ ಆ ಕ್ಷಣಕ್ಕೆ ಅದು ಸರಿ ಇರಲಿಲ್ಲ. ಆದರೆ ನನಗೆ ಒಳ್ಳೆಯದೆನಿಸಿತು. ನನಗೆ ಏನಾದರೂ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸಿದರೂ ಸಹ, ಅವನು ನನ್ನ ಪಕ್ಕದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ಅವನಿಗೂ ನನ್ನನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹಾಗಾಗಿ, ತೈಮೂರ್, ಹರಿ ಮತ್ತು ನಾನು ರಿಕ್ಷಾದಲ್ಲಿ ಆಸ್ಪತ್ರೆಗೆ ಹೋದೆವು’ ಎಂದಿದ್ದಾರೆ ಸೈಫ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:47 pm, Mon, 10 February 25