AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜುನ್ ಕಪೂರ್-ಸಾಹಿಬಾ ಬಾಲಿ ಡೇಟಿಂಗ್? ಲಾರ್ಡ್ಸ್​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಟ ಅರ್ಜುನ್ ಕಪೂರ್ ಮತ್ತು ಸಾಹಿಬಾ ಬಾಲಿ ಒಟ್ಟಿಗೆ ಭಾರತ ಹಾಗೂ ಇಂಗ್ಲೆಂಡ್ ಪಂದ್ಯ ವೀಕ್ಷಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ಬಳಿಕ ಅರ್ಜುನ್ ಕಪೂರ್ ಅವರ ಈ ಸಾರ್ವಜನಿಕ ಭೇಟಿ ಹೊಸ ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದೆ. ಸಾಹಿಬಾ ತಾವು ಸಿಂಗಲ್ ಎಂದು ಈ ಹಿಂದೆ ಹೇಳಿದ್ದರೂ, ಇವರಿಬ್ಬರ ಸೋಷಿಯಲ್ ಮೀಡಿಯಾ ಒಡನಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅರ್ಜುನ್ ಕಪೂರ್-ಸಾಹಿಬಾ ಬಾಲಿ ಡೇಟಿಂಗ್? ಲಾರ್ಡ್ಸ್​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಜೋಡಿ
ಸಾಹಿಬಾ-ಅರ್ಜುನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 20, 2026 | 7:48 AM

Share

ಮುಖ್ಯಾಂಶಗಳು

  • ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ ಅರ್ಜುನ್ ಕಪೂರ್-ಸಾಹಿಬಾ
  • ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
  • ಅಭಿಮಾನಿಗಳಿಂದ ಮುಂಚಿತವಾಗಿಯೇ ಕಂಗ್ರಾಟ್ಸ್ ಸಂದೇಶ

ಜುಲೈ 19ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಏಕದಿನ ಪಂದ್ಯವನ್ನು ಅರ್ಜುನ್ ಕಪೂರ್-ಸಾಹಿಬಾ ಬಾಲಿ ಒಟ್ಟಿಗೆ ವೀಕ್ಷಿಸಿದ್ದಾರೆ. ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅರ್ಜುನ್ ಮತ್ತು ಸಾಹಿಬಾ ಪಂದ್ಯವನ್ನು ಎಂಜಾಯ್ ಮಾಡುತ್ತಾ ರಿಲ್ಯಾಕ್ಸ್ ಆಗಿ ಕಂಡರು. ಈ ಸಾರ್ವಜನಿಕ ಭೇಟಿಯು ಇಬ್ಬರ ನಡುವೆ ಸ್ನೇಹಕ್ಕಿಂತ ಮೀರಿದ ಸಂಬಂಧ ಇದೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ಈ ಹೊಸ ವದಂತಿಗಳ ಬಗ್ಗೆ ಅರ್ಜುನ್ ಕಪೂರ್ ಅಥವಾ ಸಾಹಿಬಾ ಬಾಲಿ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೈದಾನದಲ್ಲಿ ಇವರಿಬ್ಬರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ. ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿರುವುದು ಜನರ ಗಮನ ಸೆಳೆದಿದೆ. ಆದರೆ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಇದೆ ಎಂದು ಖಚಿತಪಡಿಸುವ ಯಾವುದೇ ಸುಳಿವು ವಿಡಿಯೋಗಳಲ್ಲಿ ಇಲ್ಲ.

ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇಬ್ಬರಿಗೂ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸಲು ಶುರು ಮಾಡಿದ್ದಾರೆ. ‘ಇವರಿಬ್ಬರು ಜೊತೆಯಾಗಿದ್ದಾರಾ? ಸಾಹಿಬಾ ಬೇರೆಯವರ ಜೊತೆ ಇರಲಿಲ್ಲವೇ?’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸಾಹಿಬಾ ಅವರು ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆ ಪಂದ್ಯಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ. ಅರ್ಜುನ್ ಕಪೂರ್ ಕೇವಲ ಅದೇ ಫ್ರೆಂಡ್ಸ್ ಗ್ಯಾಂಗ್‌ನಲ್ಲಿ ಭಾಗವಾಗಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿ ಗಮನ ಸೆಳೆದಿತ್ತು

ಇತ್ತೀಚೆಗಷ್ಟೇ ಅರ್ಜುನ್ ಜನ್ಮದಿನಕ್ಕೆ ಸಾಹಿಬಾ ಅವರು ತಮಾಷೆಯಾಗಿ ಶುಭ ಕೋರಿದ್ದರು. ಅರ್ಜುನ್ ಫೋಟೋ ಹಂಚಿಕೊಂಡಿದ್ದ ಅವರು ‘ಎಲ್ಲರ ಬೆಸ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು. ತೂಕ ಇಳಿಸುವುದನ್ನು ನಿಲ್ಲಿಸಿ, ಸ್ವಲ್ಪ ಕೇಕ್ ತಿನ್ನಿ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜುನ್ ‘ನೀನು ನನ್ನ ಜೊತೆ ಸೇರಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ರಿಪ್ಲೈ ಮಾಡಿದ್ದರು. ಈ ಸಂಭಾಷಣೆಯು ಅಭಿಮಾನಿಗಳ ಗಮನ ಸೆಳೆದಿತ್ತು.

ಇದನ್ನೂ ಓದಿ: ‘ಅಂತ್ಯವನ್ನು ಒಪ್ಪಿಕೊಳ್ಳಿ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅರ್ಜುನ್ ಕಪೂರ್ ಮನಸ್ಥಿತಿ 

ಸಾಹಿಬಾ ಬಾಲಿ ಯಾರು?

ಸಾಹಿಬಾ ಅವರು ನಟಿ ಮತ್ತು ಕಂಟೆಂಟ್ ಕ್ರಿಯೇಟರ್. ತಾವು ಸಿಂಗಲ್ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರು. ಕಂಟೆಂಟ್ ಕ್ರಿಯೇಟರ್ ಕುಲ್ಲು ಜೊತೆಗಿನ ತಮ್ಮ ಕೆಮಿಸ್ಟ್ರಿ ಕೇವಲ ವೃತ್ತಿಪರ ಸ್ನೇಹ ಅಷ್ಟೇ ಎಂದು ಹೇಳಿದ್ದಾರು. ಅರ್ಜುನ್ ಜೊತೆಗಿನ ಇವರ ಸ್ನೇಹವು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ.

ಮಲೈಕಾ ಅರೋರಾ ಜೊತೆ ಬ್ರೇಕಪ್

ಅರ್ಜುನ್ ಕಪೂರ್ ಈ ಹಿಂದೆ ನಟಿ ಮಲೈಕಾ ಅರೋರಾ ಜೊತೆ ಸುದೀರ್ಘ ಸಂಬಂಧ ಹೊಂದಿದ್ದರು. 2018 ರಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರು 2024ರಲ್ಲಿ ಬೇರ್ಪಟ್ಟರು. ಇಬ್ಬರ ನಡುವಿನ 12 ವರ್ಷಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಕಾಕ್ರೋಚ್ ಜನತಾ ಪಕ್ಷದ 'ಚಲೋ ಸಂಸತ್' ಮೆರವಣಿಗೆಗೆ ದೆಹಲಿ ಪೊಲೀಸರ ನಿರ್ಬಂಧ!
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಬೆಟ್ಟದ ರಂಗನಾಥನ ತಪ್ಪಲಿನಲ್ಲೇ ಚೆನ್ನಮ್ಮನ ಅಂತ್ಯಕ್ರಿಯೆ ಏಕೆ?
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ವಾಸ್ತು ತಜ್ಞರು ಹೇಳಿದ್ದಿಷ್ಟು
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ದೇವೇಗೌಡ ಪತ್ನಿ ಚೆನ್ನಮ್ಮ ನಿಧನ: ಎರಡು ದಿನ ಮದ್ಯ ಮಾರಾಟ ನಿಷೇಧ
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಪತ್ನಿಯ ಪಾರ್ಥಿವ ಶರೀರವನ್ನ ಕೊಂಡೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ!
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು
ICUನಲ್ಲಿ ಚೆನ್ನಮ್ಮರ ಕೊನೆಕ್ಷಣ ಹೇಗಿತ್ತು? ಪುತ್ರಿ ಅನುಸೂಯ ಹೇಳಿದ್ದಿಷ್ಟು