ಬಾಲಿವುಡ್​ಗೆ ಕೆಟ್ಟ ಭಾಷೆಯಲ್ಲಿ ಬೈಯ್ದು, ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್

ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಅವರು ಬಿಕ್ಕಳಿಸಿ ಅತ್ತಿದ್ದಾರೆ. ವಿಡಿಯೋದಲ್ಲಿ ಅನೇಕರ ಹೆಸರನ್ನು ಅವರು ಬಹಿರಂಗಪಡಿಸಿದ್ದಾರೆ. ಆದರೆ ಕೆಲವೇ ನಿಮಿಷಗಳ ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾರೆ. ನಂತರ ಇನ್​ಸ್ಟಾಗ್ರಾಮ್ ಖಾತೆಯನ್ನು ಕೂಡ ಅವರು ಡಿಲೀಟ್ ಮಾಡಿದ್ದಾರೆ. ಬಾಬಿಲ್ ಖಾನ್ ಅವರಿಗೆ ಏನೋ ತೊಂದರೆ ಆಗಿದೆ ಎಂದು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

ಬಾಲಿವುಡ್​ಗೆ ಕೆಟ್ಟ ಭಾಷೆಯಲ್ಲಿ ಬೈಯ್ದು, ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್
Irrfan Khan, Babil Khan

Updated on: May 04, 2025 | 1:30 PM

ಬಾಲಿವುಡ್ ನಟ ಇರ್ಫಾನ್ ಖಾನ್ (Irrfan Khan) ಅವರು ನಿಧನರಾಗಿ 5 ವರ್ಷ ಕಳೆದಿದೆ. ಅವರಂಥ ಪ್ರತಿಭಾವಂತ ಕಲಾವಿದನ್ನು ಕಳೆದುಕೊಂಡಿದ್ದು ಭಾರತೀಯ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ. 2022ರಲ್ಲಿ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್ (Babil Khan) ಕೂಡ ಚಿತ್ರರಂಗಕ್ಕೆ ಕಾಲಿಟ್ಟರು. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಕಲಾ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಅವರ ನಟನೆಗೆ ಅನೇಕರಿಂದ ಮೆಚ್ಚುಗೆ ಸಿಕ್ಕಿತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅವರಿಗೆ ಅವಕಾಶಗಳು ಸಿಗಲಿಲ್ಲ. ಈಗ ಬಾಬಿಲ್ ಖಾನ್ ಅವರ ಒಂದು ವಿಡಿಯೋ (Babil Khan Crying Video) ವೈರಲ್ ಆಗಿದೆ. ಬಾಲಿವುಡ್​ಗೆ ಅವರು ಕೆಟ್ಟದಾಗಿ ಬೈಯ್ದಿದ್ದಾರೆ. ಜೋರಾಗಿ ಅಳುತ್ತಾ ನೋವು ತೋಡಿಕೊಂಡಿದ್ದಾರೆ.

ಬಾಬಿಲ್ ಖಾನ್ ಅವರು ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ವಿಡಿಯೋ ಹಂಚಿಕೊಂಡರು. ‘ಬಾಲಿವುಡ್ ಕೊಳಕಾಗಿದೆ. ಇದು ತುಂಬ ಕ್ರೂರವಾಗಿದೆ. ನಾನು ನೋಡಿದ ನಕಲಿ ಚಿತ್ರರಂಗ ಇದು’ ಎಂದು ಬಾಬಿಲ್ ಖಾನ್ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಅನನ್ಯಾ ಪಾಂಡೆ, ಶನಾಯಾ ಕಪೂರ್, ಅರ್ಜುನ್ ಕಪೂರ್​, ಸಿದ್ದಾಂತ್ ಚತುರ್ವೇದಿ, ಆದರ್ಶ್ ಗೌರವ್, ಅರಿಜಿತ್ ಸಿಂಗ್, ರಾಘವ್ ಜುಯಲ್ ಮುಂತಾದವರ ಹೆಸರನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬಾಬಿಲ್ ಅವರು ಈ ವಿಡಿಯೋವನ್ನು ಡಿಲೀಟ್ ಮಾಡಿದರು. ಆದರೆ ಅದನ್ನು ಡೌನ್​ಲೋಡ್ ಮಾಡಿಕೊಂಡ ನೆಟ್ಟಿಗರು ಬೇರೆ ಬೇರೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಚಿಂತೆ ಆಗುತ್ತಿದೆ. ಬಾಬಿಲ್ ಖಾನ್ ಅವರಿಗೆ ನಿಜಕ್ಕೂ ಏನಾಗಿದೆ? ಅವರ ಮಾನಸಿಕ ಆರೋಗ್ಯ ಸರಿಯಾಗಿದೆಯಾ ಎಂದು ನೆಟ್ಟಿಗರು ಕಾಳಜಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

another part of the story babil had put
byu/Anxious_Scratch2449 inBollyBlindsNGossip

ಸೂಕ್ತ ಅವಕಾಶಗಳು ಇಲ್ಲದ ಕಾರಣ ಬಾಬಿಲ್ ಖಾನ್ ಅವರು ಈ ರೀತಿ ವಿಡಿಯೋ ಮಾಡಿರಬಹುದಾ ಎಂಬ ಪ್ರಶ್ನೆ ಮೂಡಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಬಾಬಿಲ್ ಖಾನ್ ಅವರಿಗೆ ಏನಾದರೂ ಕಿರುಕುಳ ಆಗಿರಬಹುದಾ ಎಂಬ ಸಂಶಯ ಕೂಡ ವ್ಯಕ್ತವಾಗಿದೆ.

His PR is gonna have a hard time tomorrow
byu/Anxious_Scratch2449 inBollyBlindsNGossip

ಈ ವೈರಲ್ ವಿಡಿಯೋದ ಬಗ್ಗೆ ಬಾಬಿಲ್ ಖಾನ್ ಅವರಾಗಲಿ, ಅವರ ಆಪ್ತರಾಗಲೀ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದು ಶಾಕಿಂಗ್ ಸಂಗತಿ ಏನೆಂದರೆ, ಬಾಬಿಲ್ ಖಾನ್ ಅವರು ಈಗ ಇನ್​ಸ್ಟಾಗ್ರಾಮ್​ ಖಾತೆಯನ್ನೇ ಡಿಲಿಟ್ ಮಾಡಿದ್ದಾರೆ!

ಇದನ್ನೂ ಓದಿ: ನಿಮ್ಮಂತಹ ಹುಟ್ಟು ಕಲಾವಿದ ಇನ್ನೂ ಇರಬೇಕಿತ್ತು ಇರ್ಫಾನ್ ಖಾನ್​

ಇದರಿಂದ ಅಭಿಮಾನಿಗಳಿಗೆ ಆತಂಕ ಇನ್ನಷ್ಟು ಜಾಸ್ತಿ ಆಗಿದೆ. ಅಲ್ಲದೇ ಬಾಲಿವುಡ್​ ಒಳಗೆ ಇರಬಹುದಾದ ಅನೇಕ ಹುಳುಕುಗಳ ಬಗ್ಗೆ ಜನರು ಈಗ ಮಾತನಾಡಲು ಆರಂಭಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಸಂದರ್ಭದಲ್ಲೂ ಇದೇ ರೀತಿ ಚರ್ಚೆ ಜೋರಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:26 pm, Sun, 4 May 25