ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್ನ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಇಬ್ಬರೂ ಹಲವು ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಇದ್ದವರು. ಆದರೆ, ಇವರ ಮಧ್ಯೆ ಕಿರಿಕ್ ಆಗಿದೆ ಎಂಬ ಮಾತು ಕೇಳಿ ಬಂದಿತ್ತು. ಕೆಲವರು ಇದನ್ನು ಒಪ್ಪಿದರೆ ಇನ್ನೂ ಕೆಲವರು ಒಪ್ಪುವುದಿಲ್ಲ. ಈ ವಿವಾದ ಶುರುವಾಗಿದ್ದು ಹೇಗೆ? ಇದಕ್ಕೆ ಕಾರಣ ಆಗಿದ್ದು ‘ರಾಮ್‌ಲೀಲಾ’ ಚಿತ್ರದಲ್ಲಿ ಆದ ಕಿರಿಕ್ ಎಂದು ಹೇಳಲಾಗುತ್ತದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇಂದು ನಾವು ಚರ್ಚಿಸೋಣ.
ದೀಪಿಕಾ ಪಡುಕೋಣೆ ಅವರು ‘ರಾಮ್‌ಲೀಲಾ’ ಚಿತ್ರದಲ್ಲಿ ನಟಿಸಿದರು. ರಣವೀರ್ ಸಿಂಗ್ ಹಾಗೂ ದೀಪಿಕಾ ಕೆಮಿಸ್ಟ್ರಿ ಗಮನ ಸೆಳೆಯಿತು. ಈ ಚಿತ್ರದಲ್ಲಿ ಪ್ರಿಯಾಂಕಾ ಅವರು ಒಂದು ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಸಲಿಗೆ ಹೇಳಬೇಕು ಎಂದರೆ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲೇ ಪ್ರಿಯಾಂಕಾ ಕಾಣಿಸಿಕೊಳ್ಳಬೇಕಿತ್ತಂತೆ. ಆದರೆ, ಅಲ್ಲಿ ಆಗಿದ್ದೇ ಬೇರೆ. ಈ ಆಫರ್ ದೀಪಿಕಾ ಪಾಲಾಯಿತು. ಈ ಬಗ್ಗೆ ಪ್ರಿಯಾಂಕಾ ತಾಯಿ ಮಾತನಾಡಿದ್ದಾರೆ.
ಮಧು ಚೋಪ್ರಾ ಪ್ರಿಯಾಂಕಾ ಅವರ ತಾಯಿ. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ಆ ಘಟನೆ ಬಗ್ಗೆ ಹೆಚ್ಚು ನೆನಪಿಲ್ಲ. ನಾನು ಆಗ ಕ್ಲಿನಿಕ್ನಲ್ಲಿ ಇದ್ದೆ. ಅವಳು ಮರಳಿ ಬಂದಾಗ ನಾನು ಸಿನಿಮಾದಲ್ಲಿ ಸಾಂಗ್ ಒಂದನ್ನು ಮಾಡೋದು ಮಾತ್ರ ಉತ್ತಮ ಎಂದಳು. ಏನಾಯಿತು ಎಂದು ಕೇಳಿದೆ. ಅವಳು ಹೆಚ್ಚು ಮಾತನಾಡಲಿಲ್ಲ. ಅದೇ ಬೇಸ್ಟ್ ಎಂದಳು’ ಎಂದಿದ್ದಾರೆ ಮಧು.
‘ನನ್ನ ಮಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಳು ಅನಿಸುತ್ತದೆ. ಅವಳು ಕೇವಲ ಡ್ಯಾನ್ಸ್ ಮಾಡಲು ಒಪ್ಪಿದ್ದಾಳೆ ಎಂದರೆ ಅದಕ್ಕೆ ಕಾರಣ ಅವರಿನ್ನೂ ಒಳ್ಳೆಯ ಫ್ರೆಂಡ್ಸ್. ಅವಳಿಗೆ ರಿವೇಂಜ್ ಮನೋಭಾವ ಇಲ್ಲ’ ಎಂದಿದ್ದಾರೆ ಪ್ರಿಯಾಂಕಾ ತಾಯಿ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಕಮ್ ಬ್ಯಾಕ್ ಯಾವಾಗ? ಯಾವ ಸಿನಿಮಾ ಮೂಲಕ ಎಂಟ್ರಿ
ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಚಿತ್ರರಂಗದ ತೊರೆದರು ಎನ್ನಲಾಗಿತ್ತು. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಮಹೇಶ್ ಬಾಬು ಹಾಗೂ ರಾಜಮೌಳಿ ಚಿತ್ರದಲ್ಲಿ ಅವರು ನಾಯಕಿ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Thu, 6 March 25