AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಕೋಟಿ ಆಸ್ತಿ ಇದ್ದರೂ ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್; ಕಾಮಿಡಿಯನ್ ಸರಳತೆಗೆ ಫ್ಯಾನ್ಸ್ ಫಿದಾ

ಜನಪ್ರಿಯ ಹಾಸ್ಯನಟ ಸುನೀಲ್ ಗ್ರೋವರ್ ಇತ್ತೀಚೆಗೆ ಗಂಗಾ ಆರತಿಯ ಬಳಿಕ ನದಿ ತೀರದಲ್ಲಿ ಸಾಮಾನ್ಯರಂತೆ ನಿದ್ರಿಸಿ ಸುದ್ದಿಯಲ್ಲಿದ್ದಾರೆ. 25 ಕೋಟಿ ಒಡೆಯನಾಗಿದ್ದರೂ ಅವರ ಈ ಸರಳತೆ ಮತ್ತು ಆಧ್ಯಾತ್ಮಿಕ ಜೀವನದ ವಿಡಿಯೋ ವೈರಲ್ ಆಗಿದೆ. 'ತಾರೆ ಜಮೀನ್ ಪರ್' ಎಂದು ಬರೆದು ಹಂಚಿಕೊಂಡ ಈ ಕ್ಷಣಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಪಿಲ್ ಶರ್ಮಾ ಶೋನಲ್ಲಿ ಬ್ಯುಸಿಯಾಗಿರುವ ಸುನೀಲ್ ಗ್ರೋವರ್ ತಮ್ಮ ವಿನಮ್ರತೆಯಿಂದ ಕೋಟ್ಯಂತರ ಹೃದಯ ಗೆದ್ದಿದ್ದಾರೆ.

ಕೋಟಿ ಕೋಟಿ ಆಸ್ತಿ ಇದ್ದರೂ ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್; ಕಾಮಿಡಿಯನ್ ಸರಳತೆಗೆ ಫ್ಯಾನ್ಸ್ ಫಿದಾ
ಸುನಿಲ್ ಗ್ರೋವರ್ Image Credit source: Sunil Grover Instagram
ರಾಜೇಶ್ ದುಗ್ಗುಮನೆ
|

Updated on: Jun 19, 2026 | 7:03 AM

Share

ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ಕೋಟ್ಯಂತರ ವೀಕ್ಷಕರನ್ನು ನಗಿಸುವ ಜನಪ್ರಿಯ ನಟ ಮತ್ತು ಕಾಮೆಡಿಯನ್ ಸುನೀಲ್ ಗ್ರೋವರ್ (Sunil Grover) ಇತ್ತೀಚೆಗೆ ತಮ್ಮ ಆಧ್ಯಾತ್ಮಿಕ ಮತ್ತು ಸರಳ ಜೀವನದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸುನೀಲ್ ಗ್ರೋವರ್ ಇತ್ತೀಚೆಗೆ ಗಂಗಾ ಆರತಿಯನ್ನು ವೀಕ್ಷಿಸಿದ್ದಾರೆ. ಆ ಬಳಿಕ ಭಕ್ತಿ ಮತ್ತು ಪ್ರಶಾಂತತೆಯ ಕ್ಷಣಗಳನ್ನು ಆನಂದಿಸಿದ್ದಾರೆ. ನದಿ ತೀರದಲ್ಲೇ ಅವರು ನಿದ್ರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದೀಪಗಳ ಬೆಳಕು, ಮಂತ್ರಘೋಷಗಳ ನಡುವೆ ಮುಳುಗಿದ್ದ ಅವರು, ಯಾವುದೇ ಸ್ಟಾರ್ ಗಿಮಿಕ್ ಇಲ್ಲದೆ ಗಂಗಾ ನದಿಯ ತಟದ ಮೇಲೆ ಸಾಮಾನ್ಯರಂತೆ ಮಲಗಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಅವರು ‘ತಾರೆ ಜಮೀನ್ ಪರ್’ (ನೆಲದ ಮೇಲಿನ ನಕ್ಷತ್ರಗಳು) ಎಂದು ಬರೆದುಕೊಂಡಿದ್ದಾರೆ.

25 ಕೋಟಿ ಒಡೆಯನ ಅಪರೂಪದ ಸರಳತೆ!

ಮಾಧ್ಯಮಗಳ ವರದಿಗಳ ಪ್ರಕಾರ, ಸುನೀಲ್ ಗ್ರೋವರ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 25 ಕೋಟಿ ರೂಪಾಯಿ. ಒಂದು ಕಾಲದಲ್ಲಿ ದಿನಕ್ಕೆ ಕೇವಲ 500 ರೂಪಾಯಿ ದುಡಿಯುತ್ತಿದ್ದ ಸುನೀಲ್, ಇಂದು ಭಾರತದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಸಂಭಾವನೆ ಪಡೆಯುವ ಕಾಮೆಡಿಯನ್‌ಗಳಲ್ಲಿ ಒಬ್ಬರಾಗಿದ್ದಾರೆ. ಇಷ್ಟೊಂದು ಯಶಸ್ಸು ಮತ್ತು ಹಣವಿದ್ದರೂ, ಅವರು ಯಾವುದೇ ಐಷಾರಾಮಿ ಹಮ್ಮು-ಬಿಮ್ಮುಗಳಿಲ್ಲದೆ ನದಿಯ ಘಾಟ್‌ನಲ್ಲಿ ಸಾಧು-ಸಂತರೊಂದಿಗೆ ನೆಲದ ಮೇಲೆ ಮಲಗಿರುವುದು ಅಭಿಮಾನಿಗಳ ಹೃದಯ ಗೆದ್ದಿದೆ.

ಅಭಿಮಾನಿಗಳ ಮೆಚ್ಚುಗೆ: ಸುನೀಲ್ ಅವರ ಈ ಅಪರೂಪದ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಸರ್?’, ‘ನಿಮ್ಮ ಈ ಸರಳತೆಯೇ ನಿಮ್ಮನ್ನು ಅಪ್ರತಿಮ ಕಲಾವಿದನನ್ನಾಗಿ ಮಾಡಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ?

ಕೆಲಸದ ವಿಷಯಕ್ಕೆ ಬರೋದಾದರೆ ಸುನೀಲ್ ಗ್ರೋವರ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಬ್ಯುಸಿ ಇದ್ದಾರೆ. ಹಲವು ವರ್ಷಗಳ ಬಳಿಕ ಅವರು ಕಪಿಲ್ ಶರ್ಮಾ ಜೊತೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?