AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಿಯೇಟರ್​​​ನಲ್ಲಿ 65ದಿನ ಪೂರೈಸಿದ ‘ಧುರಂಧರ್ 2’; ಒಟ್ಟೂ ಗಳಿಕೆ ಎಷ್ಟು?

ರಣವೀರ್ ಸಿಂಗ್ ಅವರ ‘ಧುರಂಧರ್ 2’ ಚಿತ್ರ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಆ್ಯಕ್ಷನ್ ಎಂಟರ್‌ಟೈನರ್ ಜಾಗತಿಕವಾಗಿ 1,799.09 ಕೋಟಿ ರೂಪಾಯಿ ಗಳಿಸಿ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಪಾಕಿಸ್ತಾನ ಮತ್ತು ಸೌದಿ ದೇಶಗಳಲ್ಲಿ ನಿಷೇಧಿತವಾಗಿದ್ದರೂ, ವಿಶ್ವಾದ್ಯಂತ ಹವಾ ಸೃಷ್ಟಿಸಿದೆ. ಇದೀಗ ಜೂನ್ 4 ರಂದು ಹಾಟ್‌ಸ್ಟಾರ್‌ನಲ್ಲಿ ಇದರ OTT ಬಿಡುಗಡೆ ದಿನಾಂಕ ಅಧಿಕೃತವಾಗಿದೆ.

ಥಿಯೇಟರ್​​​ನಲ್ಲಿ 65ದಿನ ಪೂರೈಸಿದ ‘ಧುರಂಧರ್ 2’; ಒಟ್ಟೂ ಗಳಿಕೆ ಎಷ್ಟು?
ಧುರಂಧರ್ 2
ರಾಜೇಶ್ ದುಗ್ಗುಮನೆ
|

Updated on: May 22, 2026 | 3:06 PM

Share

ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರ ಯಶಸ್ವಿಯಾಗಿ 65 ದಿನಗಳನ್ನು ಪೂರೈಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡ ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಮಂದಿರಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗಿದೆ.

‘ಧುರಂಧರ್ 2’ ಈವರೆಗೆ ದೇಶಾದ್ಯಂತ ಒಟ್ಟು 5,24,278 ಶೋಗಳು ಪ್ರದರ್ಶನ ಕಂಡಿವೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 1,799.09 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದು ಭಾರತ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ. ಭಾರತೀಯ ಚಿತ್ರಮಂದಿರಗಳಿಂದಲೇ ಈ ಸಿನಿಮಾ 1,372 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ 1,146 ಕೋಟಿ ರೂಪಾಯಿ ಆಗಿದೆ.

ಕೇವಲ ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಚಿತ್ರದ ಹವಾ ಜೋರಾಗಿದ್ದು, ಬರೋಬ್ಬರಿ 426 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಅನಿವಾಸಿ ಭಾರತೀಯರ ಮನ ಗೆದ್ದಿದೆ. ವಿಶೇಷ ಎಂದರೆ, ಪಾಕಿಸ್ತಾನ, ಸೌದಿ ರಾಷ್ಟ್ರಗಳಲ್ಲಿ ಈ ಸಿನಿಮಾ ಬ್ಯಾನ್ ಆಗಿತ್ತು. ಆದಾಗ್ಯೂ ಈ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಒಟಿಟಿ (OTT) ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ಹೊರಬಿದ್ದಿದೆ. ಇದೇ ಜೂನ್ 4 ರಂದು ‘ಧುರಂಧರ್ 2’ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಮತ್ತೊಮ್ಮೆ ಈ ಹೈ-ವೋಲ್ಟೇಜ್ ಸಿನಿಮಾವನ್ನು ಮನೆಯಲ್ಲೇ ಕುಳಿತು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಸಂಭ್ರಮ ತಂದಿದೆ. ದೃಶ್ಯ ವೈಭವ ಹಾಗೂ ತಾರಾಗಣದ ಅದ್ಭುತ ನಟನೆಯಿಂದಾಗಿ ಈ ಚಿತ್ರವು 2026ರ ಅತ್ಯಂತ ಯಶಸ್ವಿ ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ
ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ