ಅನುಷ್ಕಾಗೆ ಪ್ರಪೋಸ್ ಮಾಡಿದ್ರಾ ರಣಬೀರ್ ಕಪೂರ್?
Ranbir Kapoor-Anushka Sharma: ರಣ್ಬೀರ್ ಕಪೂರ್, ಆಲಿಯಾ ಭಟ್ ಜೊತೆ ವಿವಾಹವಾಗಿ ಆರಾಮವಾಗಿದ್ದಾರೆ. ಅಂತೆಯೇ ಅನುಷ್ಕಾ ಶರ್ಮಾ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಧರ್ಮಪತ್ನಿ, ಇಬ್ಬರು ಮಕ್ಕಳ ತಾಯಿಯೂ ಹೌದು. ಅಂದಹಾಗೆ ಅನುಷ್ಕಾ ಶರ್ಮಾ ಮತ್ತು ರಣ್ಬೀರ್ ಕಪೂರ್ ಆಪ್ತ ಗೆಳೆಯರು. ರಣ್ಬೀರ್ ಕಪೂರ್ ಒಮ್ಮೆ ಅನುಷ್ಕಾ ಶರ್ಮಾಗೆ ಪ್ರೊಪೋಸ್ ಸಹ ಮಾಡಿದ್ದರಂತೆ.

ಅನುಷ್ಕಾ ಶರ್ಮಾ ಹಾಗೂ ರಣಬೀರ್ ಕಪೂರ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಅವರು ಈ ಮೊದಲು ‘ಏ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2016ರಲ್ಲಿ. ಅಂದರೆ ಚಿತ್ರ ಬಿಡುಗಡೆ ಆಗಿ 9 ವರ್ಷಗಳೇ ಕಳೆದು ಹೋಗಿವೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ರಣಬೀರ್ ಕಪೂರ್ ಅವರು ಈ ಮೊದಲು ಅನುಷ್ಕಾಗೆ ಪ್ರಪೋಸ್ ಮಾಡಿದ್ದರಂತೆ.
ರಣಬೀರ್ ಕಪೂರ್ ಅವರು ಆಲಿಯಾ ಭಟ್ನ ವಿವಾಹ ಆಗಿದ್ದಾರೆ. ಅದೇ ರೀತಿ ಅನುಷ್ಕಾ ಶರ್ಮಾ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ಮದುವೆ ಆಗಿ ಸುಖವಾಗಿದ್ದಾರೆ. ರಣಬೀರ್ ಕಪೂರ್ ಅವರು ಈ ಮೊದಲು ಸಾಕಷ್ಟು ನಟಿಯರ ಜೊತೆ ಆಪ್ತತೆ ಹೊಂದಿದ್ದರು. ಅನೇಕರ ಜೊತೆ ಅವರು ಡೇಟಿಂಗ್ ಮಾಡಿದ ಉದಾಹರಣೆ ಇದೆ. ಈ ಮೊದಲು ಮಾತನಾಡಿದ್ದ ಅನುಷ್ಕಾ ಶರ್ಮಾ ಅವರು, ‘ನನಗೆ ಬಾಯ್ಸ್ ಫ್ರೆಂಡ್ಸ್ ಜಾಸ್ತಿ’ ಎಂದು ಹೇಳಿದ್ದರು. ಇದಕ್ಕೆ ರಣಬೀರ್ ಉತ್ತರಿಸಿದ್ದರು.
View this post on Instagram
‘ನಾನು ಇವರ ಜೊತೆ ಸಮಯ ಕಳೆದಿದ್ದೇನೆ. ಯಾರಿಗೆ ಇವರ ಜೊತೆ ಒಳ್ಳೆಯ ಗೆಳೆತನ ಬೆಳೆಯುತ್ತದೆಯೋ ಅವರಿಗೆ ಪ್ರೀತಿ ಉಂಟಾಗುತ್ತದೆ. ಆದರೆ, ಅನುಷ್ಕಾ ಆ ರೀತಿ ಏನೂ ಇಲ್ಲ, ಗೆಳೆತನ ಮಾತ್ರ ಎನ್ನುತ್ತಾರೆ. ಈ ರೀತಿ ಹೇಳಿದ ವ್ಯಕ್ತಿಯ ಸರ್ನೇಮ್ ಕಪೂರ್’ ಎಂದಿದ್ದರು ರಣಬೀರ್. ಈ ವಿಚಾರ ಕೇಳಿದ ಬಳಿಕ ಅನೇಕರಿಗೆ ರಣಬೀರ್ ಕಪೂರ್ಗೂ ಅನುಷ್ಕಾ ಮೇಲೆ ಪ್ರೀತಿ ಮೂಡಿತ್ತೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ
ರಣಬೀರ್ ಕಪೂರ್ ಅವರು ಸಾಲು ಸಾಲು ಹಿಟ್ ಕಂಡಿದ್ದಾರೆ. ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಅವರು ರಾಮಾಯಣ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಾ ಇದ್ದಾರೆ. ಇತ್ತ ಅನುಷ್ಕಾ ಶರ್ಮಾ ಅವರು ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ