ಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ? ವ್ಯಕ್ತವಾಯ್ತು ಟೀಕೆ

ಸಾರ್ಥಕ್ ಎಂಬುವರು ಗೌರಿ ಖಾನ್ ಅವರ ಟೋರಿ ರೆಸ್ಟೋರೆಂಟ್‌ನಲ್ಲಿ ನಕಲಿ ಪನ್ನೀರ್ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಅಯೋಡಿನ್ ಪರೀಕ್ಷೆ ನಡೆಸಿ, ಪನ್ನೀರ್ ನಕಲಿ ಎಂದು ತೋರಿಸಿದ್ದಾರೆ. ಆದರೆ, ರೆಸ್ಟೋರೆಂಟ್ ಇದನ್ನು ತಳ್ಳಿಹಾಕಿದೆ. ಈ ವಿಡಿಯೋ ವೈರಲ್ ಆಗಿದ್ದು, ಟೋರಿ ರೆಸ್ಟೋರೆಂಟ್‌ನ ಖ್ಯಾತಿಗೆ ಧಕ್ಕೆ ತಂದಿದೆ.

ಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ? ವ್ಯಕ್ತವಾಯ್ತು ಟೀಕೆ
ಗೌರಿ ಖಾನ್

Updated on: Apr 18, 2025 | 11:58 AM

ನಟ ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ (Gouri Khan) ಅವರು ಹಲವು ರೀತಿಯ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನ್ ಮಾಡುತ್ತಾರೆ. ಅವರು ರೆಸ್ಟೋರೆಂಟ್ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ‘ಟೋರಿ’ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ. ಸಾವಿರಾರು ರೂಪಾಯಿ ಬಿಲ್ ಹಾಕುವ ಈ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ಮಾಡುತ್ತಿರುವ ಆರೋಪ ಎದುರಾಗಿದೆ.

ಸಾರ್ಥಕ್ ಹೆಸರಿನ ವ್ಯಕ್ತಿ ಇತ್ತೀಚೆಗೆ ಐಷಾರಾಮಿ ಹೋಟೆಲ್​ಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಆಯೋಡಿನ್ ಟಿಂಚರ್​ನ ಪನೀರ್ ಮೇಲೆ ಹಾಕಿ ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಟಿಂಚರ್ ಬಿದ್ದ ಪನೀರ್ ಅದೇ ಕಲರ್ ಉಳಿಸಿಕೊಂಡರೆ ಅದು ನಿಜವಾದ ಪನ್ನೀರ್ ಎಂದರ್ಥ. ಆದರೆ, ಪನೀರ್ ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ನಕಲಿ ಪನೀರ್ ಎಂದರ್ಥ ಎಂಬುದು ಸಾರ್ಥಕ್ ಮಾತು.

ಇದನ್ನೂ ಓದಿ
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ
ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?
ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಸಿನಿಮಾ

ಸಾರ್ಥಕ್ ಅವರು ಮೊದಲು ವಿರಾಟ್ ಕೊಹ್ಲಿ ಒಡೆತನದ ಹೋಟೆಲ್​ಗೆ ತೆರಳಿದ್ದಾರೆ. ಆ ಬಳಿಕ ಶಿಲ್ಪಾ ಶೆಟ್ಟಿ, ಬಾಬಿ ಡಿಯೋಲ್ ಒಡೆತನದ ರೆಸ್ಟೋರೆಂಟ್​ಗಳಲ್ಲೂ ಪನ್ನೀರ್​ನ ಪರಿಶೀಲಿಸಿದ್ದಾರೆ. ಇಲ್ಲಿ ಒರಿಜಿನಲ್ ಪನೀರ್ ಸಿಕ್ಕಿದೆ. ಆದರೆ, ಗೌರಿ ಖಾನ್ ಒಡೆತನದ ಟೋರಿ ರೆಸ್ಟೋರೆಂಟ್​ನಲ್ಲಿ ನಕಲಿ ಅಥವಾ ಕಳಪೆ ಗುಣಪಟ್ಟದ ಪನ್ನೀರ್ ಸಿಕ್ಕಿದೆ. ಏಕೆಂದರೆ ಪನ್ನೀರ್ ಮೇಲೆ ಆಯೋಡಿನ್ ಟಿಂಚರ್ ಹಾಕುತ್ತಿದ್ದಂತೆ ಅದು ಬಣ್ಣ ಬದಲಿಸಿದೆ.

‘ಅಯೋಡಿನ್ ಪರೀಕ್ಷೆಯು ಪನೀರ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಅವರಿಗೆ ನೀಡಿದ ಆಹಾರವು ಸೋಯಾ ಆಧಾರಿತ ಪದಾರ್ಥಗಳನ್ನು ಹೊಂದಿತ್ತು. ಹೀಗಾಗಿ, ಟಿಂಚರ್ ಆ ರೀತಿ ಪ್ರತಿಕ್ರಿಯಿಸಿದೆ. ಇದು ನಿರೀಕ್ಷಿತವಾದದ್ದು. ನಾವು ಇಲ್ಲಿ ನಕಲಿ ಪನ್ನೀರ್ ಬಳಕೆ ಮಾಡಿಲ್ಲ’ ಎಂದು ಟೋರಿ ರೆಸ್ಟೋರೆಂಟ್ ಹೇಳಿದೆ.

ಇದನ್ನೂ ಓದಿ: ಪತ್ನಿಯ ಸಂಭಾವನೆ ಬಗ್ಗೆ ತಮಾಷೆ ಮಾಡಿದ ಶಾರುಖ್ ಖಾನ್, ಅಷ್ಟಕ್ಕೂ ಗೌರಿ ಖಾನ್ ಸಂಭಾವನೆ ಎಷ್ಟು?

ಸಾರ್ಥಕ್ ಅವರು ಈ ಪರೀಕ್ಷೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ನೇರವಾಗಿ ಟೋರಿ ಬಿಸ್ನೆಸ್ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಗೌರಿ ಖಾನ್ ಅವರು ಇವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮುಂದೆ ಆಲೋಚಿಸಿದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.