‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು.

‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ
ಶಾರುಖ್ ಖಾನ್
Follow us
|

Updated on: Sep 06, 2024 | 12:09 PM

ಶಾರುಖ್ ಖಾನ್ ಹಾಗೂ ಸರ್ಕಾರದ ಮಧ್ಯೆ ಒಳ್ಳೆಯ ಸಂಬಂಧ ಇದೆ. ಅವರು ಸರ್ಕಾರದ ವಿರುದ್ಧ ಮಾತನಾಡಿದವರಲ್ಲ. ವಿವಾದಗಳಿಂದ ಅವರು ಸದಾ ದೂರ ಇರಲು ಬಯಸುತ್ತಾರೆ. ಆದರೆ, ಈ ಮೊದಲು ಹಾಗೆ ಇರಲಿಲ್ಲ. ಶಾರುಖ್ ಖಾನ್ ಅವರು ಆಗಾಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಅವರಿಂದಾಗಿ ಕೆಲವರು ತೊಂದರೆ ಅನುಭವಿಸಬೇಕಾಗಿ ಬಂದಿತ್ತು.

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು. ಆದರೆ, ಅವರು ಭಾರತದಲ್ಲಿ ಕೆಲಸ ಮಾಡಿದ್ದು ಟೂರಿಸ್ಟ್ ವೀಸಾದಲ್ಲಿ.

ವಿಶಾಲ್ ಪಂಜಾಬಿ ಅವರು ಪಶ್ಚಿಮ ಆಫ್ರಿಕಾದ ಘಾನಾದವರು. ಅವರು ಈಗ ಭಾರತದ ನಾಗರಿಕತ್ವ ಪಡೆದಿದ್ದಾರೆ. ಆದರೆ, ಮೊದಲು ಅವರು ಅಲ್ಲಿಯ ಪ್ರಜೆ ಆಗಿದ್ದರು. ‘ಶಾರುಖ್ ಖಾನ್ ಅವರು ಅತ್ಯುತ್ತಮ ಕಲಾವಿದ. ಅವರು ಒಳ್ಳೆಯ ಮೆಂಟರ್. ಅವರ ನೆರಳಲ್ಲಿ ನಾನು ಬೆಳೆದೆ. 10 ವರ್ಷ ಅವರಿಂದ ಹಲವು ವಿಚಾರ ಕಲಿತೆ’ ಎಂದಿದ್ದಾರೆ ಅವರು.

‘2007ರಲ್ಲಿ ನಾನು ಬಾಲಿವುಡ್ ಸಿನಿಮಾ ಮಾಡಬೇಕಿತ್ತು. ಜೋಯಾ ಅಖ್ತರ್ ಜೊತೆ ಸೇರಿ ಸ್ಕ್ರಿಪ್ಟ್ ಮಾಡಿದೆ. ಅವರು ದೊಡ್ಡ ನಿರ್ದೇಶಕಿ ಈಗ. ಆಗ ನಾವು ಮೊದಲ ಸಿನಿಮಾ ಮಾಡಲು ಕಷ್ಟಪಡುತ್ತಿದ್ದೆವು. ಆಗಿನ್ನೂ ಪ್ರಿಯಾಂಕಾ ಹಾಗೂ ಶಾರುಖ್ ಖಾನ್ ನಮ್ಮ ಸಿನಿಮಾಗೆ (ಡಾನ್) ಓಕೆ ಎಂದಿರಲಿಲ್ಲ. ಆಗ ನಾನು ಟೂರಿಸ್ಟ್ ವಿಸಾದಲ್ಲಿ ಇದ್ದೆ. ನಾನು ಟೂರಿಸ್ಟ್ ವಿಸಾದಲ್ಲಿ ಕೆಲಸ ಮಾಡಿರೋ ಹಾಗಿರಲಿಲ್ಲ. ಅದು ನಿಜಕ್ಕೂ ಸ್ಟುಪಿಡ್ ಆಗಿತ್ತು. ಇದು ಇಂಡಿಯಾ ಅವರು ಸಮಸ್ಯೆ ಬಗೆಹರಿಸ್ತಾರೆ ಎಂದುಕೊಂಡೆ’ ಎಂದಿದ್ದಾರೆ ಅವರು.

‘ನಾನು ಅಪಾರವಾದ ನೋವನ್ನು ಅನುಭವಿಸಿದ್ದೇನೆ. ವಿಸಾ ಇಲ್ಲದೆ ನಾನು ಗಡೀಪಾರು ಆಗಿದ್ದೆ. ಯಾರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಶಾರುಖ್ ಅವರೊಂದಿಗೆ ಕೆಲಸ ಮಾಡಿರುವುದು ನನ್ನ ಪ್ರಕರಣವನ್ನು ಇನ್ನಷ್ಟು ಹದಗೆಡಿಸಿತು. ಅವರು ಸರ್ಕಾರದ ರೇಡಾರ್​ನಲ್ಲಿ ಇದ್ದರು. ಸರ್ಕಾರಗಳು ಅವರ ಮೇಲೆ ಯಾವುದೇ ದಯೆ ತೋರುತ್ತಿಲ್ಲ. ಅದು ಅವರ ಧರ್ಮಕ್ಕೆ ಸಂಬಂಧಿಸಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಹೊರತಲು ಅವರು ಪ್ರಯತ್ನಿಸಿದರು’ ಎಂದಿದ್ದಾರೆ ವಿಶಾಲ್.

ಇದನ್ನೂ ಓದಿ: ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?

‘26/11 ಮುಂಬೈ ದಾಳಿಯ ನಂತರ ಸರ್ಕಾರ ರಾತ್ರೋರಾತ್ರಿ ಬದಲಾಯಿತು. ಶಾರುಖ್‌ಗೆ ದಯೆ ತೋರಿದ ಜನರು ಅಧಿಕಾರಕ್ಕೆ ಬಂದರು. ಪ್ರಬಲ ವ್ಯಕ್ತಿಗಳ ಕೆಲವು ಬಲವಾದ ಶಿಫಾರಸುಗಳ ಆಧಾರದ ಮೇಲೆ, ನನ್ನ ಗಡೀಪಾರು ಹಿಂತೆಗೆದುಕೊಳ್ಳಲಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?