ಮಾಡಿದ್ದು ಒಂದೇ ಸಿನಿಮಾ ಆದರೂ ಅತಿ ಹೆಚ್ಚು ಟ್ಯಾಕ್ಸ್ ಪೇ ಮಾಡಿದ ನಟಿ ಕರೀನಾ
ಭಾರತದಲ್ಲಿ ವರ್ಷಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸಿನಿಮಾ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ನಟಿಯರಲ್ಲಿ ಮೊದಲ ಸ್ಥಾನದಲ್ಲಿರುವುದು ಕರೀನಾ ಕಪೂರ್. ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡಿದರೂ ಸಹ ಕರೀನಾ ಆದಾಯ ಬಹಳ ಹೆಚ್ಚಿದೆ.
ನಟಿ ಕರೀನಾ ಕಪೂರ್ ಅವರು ಮದುವೆ ಹಾಗೂ ಮಕ್ಕಳಾದ ಬಳಿಕ ಚಿತ್ರರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರು ಬಿಸ್ನೆಸ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಬಿಸ್ನೆಸ್ಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ. ಅವರು ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.
ಮೊದಲು ನಟಿಯರು ಕೇವಲ ನಟನೆಯ ಬಗ್ಗೆ ಮಾತ್ರ ಗಮನ ಹರಿಸುತ್ತಾ ಇದ್ದರು. ಆದರೆ, ಈಗ ಕಾಲ ಹಾಗಿಲ್ಲ. ನಟಿಯರು ಬದಲಾಗಿದ್ದಾರೆ. ಕೆಲವೇ ಸಿನಿಮಾ ಮಾಡಿದರೂ ಉದ್ಯಮದತ್ತ ಸಾಕಷ್ಟು ಗಮನ ಹರಿಸುತ್ತಾರೆ. ಅವರು ಸಿನಿಮಾಗಳ ಜೊತೆಗೆ ಉದ್ಯಮದಲ್ಲೂ ಹೆಸರು ಮಾಡುತ್ತಿದ್ದಾರೆ. ಅನೇಕ ಹೀರೋಯಿನ್ಗಳು ತಮ್ಮದೇ ಬ್ರ್ಯಾಂಡ್ ಹೊಂದಿದ್ದಾರೆ.
ಇದನ್ನೂ ಓದಿ:ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?
ಕರೀನಾ ಕಪೂರ್ ಅವರು 20 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಅವರಿಗೆ ಸಿನಿಮಾಗಳ ಜೊತೆಗೆ ಬ್ರ್ಯಾಂಡ್ಗಳ ಪ್ರಚಾರ, ಬಿಸ್ನೆಸ್ ಹಾಗೂ ರಿಯಲ್ ಎಸ್ಟೇಟ್ ಬಿಸ್ನೆಸ್ ಮೂಲಕ ಹಣ ಮಾಡುತ್ತಾ ಇದ್ದಾರೆ. ಅವರು ಖ್ಯಾತ ನಟ ಸೈಫ್ ಅಲಿ ಖಾನ್ ಅವರನ್ನು ಮದುವೆ ಆದ ಬಳಿಕ ಉದ್ಯಮ ವಿಸ್ತರಿಸಿಕೊಂಡಿದ್ದಾರೆ.
ಕರೀನಾ ಬಳಿಕ ಇರೋದು ಕಿಯಾರಾ ಅಡ್ವಾಣಿ. ಕಿಯಾರಾ ಅಡ್ವಾಣಿ ಅವರು ಬಾಲಿವುಡ್ನ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು ಈ ಬಾರಿ 12 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಅವರು ‘ಗೇಮ್ ಚೇಂಜರ್’ ರೀತಿಯ ಸಿನಿಮಾ ಮಾಡುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಕತ್ರಿನಾ ಕೈಫ್ ಇದ್ದಾರೆ. ಅವರು 11 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ.
ಶಾರುಖ್ ಖಾನ್ ಅವರು ಟ್ಯಾಕ್ಸ್ ಪೇಯರ್ ಹೀರೋಗಳ ಸ್ಥಾನದಲ್ಲಿ ಮೊದಲಿದ್ದಾರೆ. ಅವರು ಬರೋಬ್ಬರಿ 92 ಕೋಟಿ ರೂಪಾಯಿ ಟ್ಯಾಕ್ಸ್ ಪಾವತಿ ಮಾಡಿದ್ದಾರೆ. ಆ ಬಳಿಕ ಇರೋದು ಸಲ್ಮಾನ್ ಖಾನ್. ಅವರು 75 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ