‘ಮಾಧುರಿ ದೀಕ್ಷಿತ್ ಅಶ್ಲೀಲ ಡಾನ್ಸ್ ಮಾಡಿ ಪ್ರಶಸ್ತಿ ಪಡೆದರು’: ವಿವಾದದಲ್ಲಿ ಸಿಲುಕಿದ ಜಾನ್ವಿ ಕಪೂರ್

ಮಾಧುರಿ ದೀಕ್ಷಿತ್ ಮತ್ತು ಶ್ರೀದೇವಿ ಅವರ ನಡುವೆ ಹೋಲಿಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿದೆ. ಅಶ್ಲೀಲ ಡಾನ್ಸ್ ಮಾಡಿ ಮಾಧುರಿ ದೀಕ್ಷಿತ್ ಅವರು ಫಿಲ್ಮ್​ ಫೇರ್ ಅವಾರ್ಡ್ ಪಡೆದರು ಎಂದು ಈ ಪೋಸ್ಟ್​ನಲ್ಲಿ ಹೇಳಲಾಗಿದೆ. ಅದನ್ನು ಜಾನ್ವಿ ಕಪೂರ್ ಲೈಕ್ ಮಾಡಿದ್ದರಿಂದ ವಿವಾದ ಶುರುವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಮಾಧುರಿ ದೀಕ್ಷಿತ್ ಅಶ್ಲೀಲ ಡಾನ್ಸ್ ಮಾಡಿ ಪ್ರಶಸ್ತಿ ಪಡೆದರು’: ವಿವಾದದಲ್ಲಿ ಸಿಲುಕಿದ ಜಾನ್ವಿ ಕಪೂರ್
Anil Kapoor, Madhuri Dixit, Janhvi Kapoor

Updated on: May 30, 2025 | 7:27 PM

ನಟಿ ಜಾನ್ವಿ ಕಪೂರ್ (Janhvi Kapoor) ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಕಾನ್ ಚಿತ್ರೋತ್ಸವಕ್ಕೆ ಹೋಗಿ ಬಂದರು. ‘ಪರಮ್ ಸುಂದರಿ’ ಸಿನಿಮಾದ ಕೆಲಸಗಳಲ್ಲಿ ಕೂಡ ಅವರು ತೊಡಗಿಕೊಂಡಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಜಾನ್ವಿ ಕಪೂರ್ ಸುದ್ದಿ ಆಗುತ್ತಾರೆ. ಆದರೆ ಈಗ ಒಂದು ನೆಗೆಟಿವ್ ಕಾರಣದಿಂದ ಜಾನ್ವಿ ಕಪೂರ್ ಅವರು ಸುದ್ದಿ ಆಗಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಅಶ್ಲೀಲ ಡ್ಯಾನ್ಸ್ ಮಾಡಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು ಎಂಬ ಅಭಿಪ್ರಾಯಕ್ಕೆ ಜಾನ್ವಿ ಕಪೂರ್ ಸಹಮತ ಸೂಚಿಸಿದ್ದಾರೆ. ಇದರಿಂದ ವಿವಾದ ಸೃಷ್ಟಿ ಆಗಿದೆ.

ಹಾಗಂತ ಜಾನ್ವಿ ಕಪೂರ್ ಅವರು ನೇರವಾಗಿ ಈ ಅಭಿಪ್ರಾಯ ತಿಳಿಸಿಲ್ಲ. ಆಗಿದ್ದೇನೆಂದರೆ, ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಅದರಲ್ಲಿ ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಅವರನ್ನು ಹೋಲಿಕೆ ಮಾಡಿ ಕೆಲವು ಸಾಲುಗಳನ್ನು ಬರೆಯಲಾಗಿದೆ. ಅದನ್ನು ಜಾನ್ವಿ ಕಪೂರ್ ಅವರು ಲೈಕ್ ಮಾಡಿದ್ದಾರೆ. ಅಲ್ಲಿಂದ ವಿವಾದ ಶುರುವಾಯಿತು.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ಬೇಟ’ ಸಿನಿಮಾದ ‘ಧಕ್ ಧಕ್..’ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಅಶ್ಲೀಲ ಡ್ಯಾನ್ಸ್ ಮಾಡಿದರು. ಅದಕ್ಕೆ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ಆದರೆ ‘ಕುದಾ ಗವಾ’ ಸಿನಿಮಾದಲ್ಲಿ ಶ್ರೀದೇವಿ ದ್ವಿಪಾತ್ರ ಮಾಡಿದರು. ಉತ್ತಮವಾಗಿ ನಟಿಸಿದರು. ಆದರೂ ಕೂಡ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಗಲಿಲ್ಲ ಎಂದು ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆಯಲಾಗಿದೆ. ಇದನ್ನು ಜಾನ್ವಿ ಕಪೂರ್ ಲೈಕ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್​ಗೆ ಲೈಕ್ ಮಾಡಿದರೆ ನಮ್ಮ ಸಹಮತ ಇದೆ ಎಂದರ್ಥ. ಹಾಗಾಗಿ ಜಾನ್ವಿ ಕಪೂರ್ ಲೈಕ್ ಮಾಡಿರುವುದನ್ನು ಕೆಲವರು ಖಂಡಿಸಿದ್ದಾರೆ. ಶ್ರೀದೇವಿಯನ್ನು ಹೊಗಳಿದ್ದರಲ್ಲಿ ತಪ್ಪಿಲ್ಲ. ಆದರೆ ಮಾಧುರಿ ದೀಕ್ಷಿತ್ ಅವರದ್ದು ಅಶ್ಲೀಲ ಡ್ಯಾನ್ಸ್ ಎಂದು ಹೇಳಿದ್ದು ಸರಿಯಲ್ಲ ಎಂದು ಜನರು ಟೀಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೂರೂವರೆ ಲಕ್ಷ ಬೆಲೆಯ ಗೌನ್ ಧರಿಸಿ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಜಾನ್ವಿ ಕಪೂರ್

ಮಾಧುರಿ ದೀಕ್ಷಿತ್ ಅವರು ಅತ್ಯುತ್ತಮ ಡ್ಯಾನ್ಸರ್. ಹಲವು ಸೂಪರ್ ಹಿಟ್ ಹಾಡುಗಳಲ್ಲಿ ಅವರು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಆದರೆ ವೈರಲ್ ಆಗಿರುವ ಸೋಶಿಯಲ್ ಮೀಡಿಯಾ ಪೋಸ್ಟ್​ನಿಂದಾಗಿ ಮಾಧುರಿ ದೀಕ್ಷಿತ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಬಗ್ಗೆ ಜಾನ್ವಿ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.