ಒಂದೇ ದಿನದಲ್ಲಿ ವಿಶ್ವಾದ್ಯಂತ 129 ಕೋಟಿ ರೂಪಾಯಿ ಬಾಚಿಕೊಂಡ ‘ಜವಾನ್​’ ಸಿನಿಮಾ

‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ಗೌರಿ ಖಾನ್​ ಅವರು ‘ಜವಾನ್​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗುತ್ತಿದೆ. ಭಾರತದಲ್ಲಿ ಮೊದಲ ದಿನ 75 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ವಿದೇಶಿ ಕಲೆಕ್ಷನ್​ ಕೂಡ ಸೇರಿಸಿದರೆ ಒಟ್ಟು 129.6 ಕೋಟಿ ರೂಪಾಯಿ ಸಂಗ್ರಹ ಆದಂತಾಗಿದೆ.

ಒಂದೇ ದಿನದಲ್ಲಿ ವಿಶ್ವಾದ್ಯಂತ 129 ಕೋಟಿ ರೂಪಾಯಿ ಬಾಚಿಕೊಂಡ ‘ಜವಾನ್​’ ಸಿನಿಮಾ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Sep 08, 2023 | 7:08 PM

ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ‘ಜವಾನ್​’ ಸಿನಿಮಾ (Jawan Movie) ಸೂಪರ್​ ಹಿಟ್​ ಆಗಲಿದೆ ಎಂದು ಅನೇಕರು ಊಹಿಸಿದ್ದರು. ಆ ಊಹೆ ನಿಜವಾಗಿದೆ. ಮೊದಲ ದಿನವೇ ಈ ಸಿನಿಮಾ ಅಬ್ಬರಿಸಿದೆ. ಶಾರುಖ್​ ಖಾನ್​ (Shah Rukh Khan) ಅವರ ಹವಾ ಏನು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಕೂಡ ಈ ಚಿತ್ರ ಅತ್ಯುತ್ತಮವಾಗಿ ಕಲೆಕ್ಷನ್​ ಮಾಡಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಜವಾನ್​’ ಸಿನಿಮಾಗೆ ಮೊದಲ ದಿನವೇ ಬರೋಬ್ಬರಿ 129.6 ಕೋಟಿ ರೂಪಾಯಿ ಕಲೆಕ್ಷನ್​ (Jawan Box Office Collection) ಆಗಿದೆ. ಈ ಖುಷಿಯ ಸಮಾಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಇದರಿಂದ ಶಾರುಖ್​ ಖಾನ್​ ಅಭಿಮಾನಿಗಳಿಗೆ ಸಖತ್​ ಖುಷಿ ಆಗಿದೆ. ಮುಂಬರುವ ದಿನಗಳಲ್ಲಿ ಕೂಡ ‘ಜವಾನ್​’ ಸಿನಿಮಾ ಅತ್ಯುತ್ತಮವಾಗಿ ಕಲೆಕ್ಷನ್​ ಮಾಡುವ ಸಾಧ್ಯತೆ ದಟ್ಟವಾಗಿದೆ.

‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ಗೌರಿ ಖಾನ್​ ಅವರು ‘ಜವಾನ್​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗುತ್ತಿದೆ. ಭಾರತದಲ್ಲಿ ಮೊದಲ ದಿನ 75 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ವಿದೇಶಿ ಕಲೆಕ್ಷನ್​ ಕೂಡ ಸೇರಿಸಿದರೆ ಒಟ್ಟು 129.6 ಕೋಟಿ ರೂಪಾಯಿ ಸಂಗ್ರಹ ಆದಂತಾಗಿದೆ. ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ನ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಕಲೆಕ್ಷನ್​ ಲೆಕ್ಕಾಚಾರವನ್ನು ಹಂಚಿಕೊಳ್ಳಲಾಗಿದೆ.

‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಪೋಸ್ಟ್​:

ಕಾಲಿವುಡ್​ ಡೈರೆಕ್ಟರ್​ ಅಟ್ಲಿ ಅವರು ‘ಜವಾನ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಬಾಲಿವುಡ್​ ಸಿನಿಮಾ. ಬಿ-ಟೌನ್​ಗೆ ಕಾಲಿಟ್ಟ ಚೊಚ್ಚಲ ಪ್ರಯತ್ನದಲ್ಲೇ ಶಾರುಖ್​ ಖಾನ್​ಗೆ ನಿರ್ದೇಶನ ಮಾಡುವ ಅವಕಾಶ ಅಟ್ಲಿ ಅವರಿಗೆ ಸಿಕ್ಕಿದ್ದು ವಿಶೇಷ. ಆ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅಭಿಮಾನಿಗಳಿಗೆ ಇಷ್ಟ ಆಗುವಂತಹ ರೀತಿಯಲ್ಲಿ ‘ಜವಾನ್​’ ಸಿನಿಮಾವನ್ನು ಅಟ್ಲಿ ಕಟ್ಟಿಕೊಟ್ಟಿದ್ದಾರೆ. ಫಸ್ಟ್ ಡೇ ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ವಿಮರ್ಶಕರು ಕೂಡ ಭೇಷ್​ ಎಂದಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದ ಜಯಭೇರಿಯ ಹಿಂದಿರುವ ಮೋಡಿಗಾರ ಅಟ್ಲಿ

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಜವಾನ್​’ ಸಿನಿಮಾ ಬಿಡುಗಡೆ ಆಯಿತು. ಅದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಯಿತು. ಇನ್ನು, ವೀಕೆಂಡ್​ನಲ್ಲಿ ಕೂಡ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣಲಿದೆ. ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿಗೆ ಕೂಡ ಡಬ್​ ಆಗಿ ಬಿಡುಗಡೆ ಆಗಿರುವ ಈ ಸಿನಿಮಾಗೆ ದಕ್ಷಿಣ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸೌತ್​ ಸ್ಟಾರ್​ಗಳಾದ ನಯನತಾರಾ, ವಿಜಯ್​ ಸೇತುಪತಿ, ಪ್ರಿಯಾಮಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ-ಶಾರುಖ್​ ಖಾನ್ ಅವರ ಕಾಂಬಿನೇಷನ್​ಗೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.