ಮಕ್ಕಳ ಫೈಟ್ ತಡೆದ ಜಾನಿ ಲಿವರ್; ವಿಡಿಯೋ ವೈರಲ್
ಜಾನಿ ಲಿವರ್ ಅವರ ಇಬ್ಬರು ಮಕ್ಕಳು ಈ ವಿಡಿಯೋದಲ್ಲಿದ್ದಾರೆ. ಜ್ಯಾಮಿ ಮತ್ತು ಜೆಸ್ಸೆ ಲಿವರ್ ಇಬ್ಬರೂ ಕಿತ್ತಾಡುತ್ತಿರುತ್ತಾರೆ. ಇವರ ಮಧ್ಯೆ ಜಾನಿ ಎಂಟ್ರಿ ಆಗುತ್ತದೆ.
ಜಾನಿ ಲಿವರ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಹಾಸ್ಯ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಅವ ಪಾತ್ರ ತೆರೆಮೇಲೆ ಕಾಣಿಸಿಕೊಂಡರೆ ಸಾಕು ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಸಾಕಷ್ಟು ಸ್ಟಾರ್ ನಟರ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈಗಲೂ ಹಿಂದಿ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಸಿನಿಮಾ ಜತೆಗೆ ಹಾಯಾಗಿ ಕುಟುಂಬದ ಜತೆಗೂ ಜಾನಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಜಾನಿ ಲಿವರ್ ಅವರು ಮಕ್ಕಳ ನಡುವೆ ನಡೆದ ಫೈಟ್ ತಪ್ಪಿಸಿದ್ದಾರೆ. ಇದರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ಫನ್ನಿ ಆಗಿದೆ.
ಜಾನಿ ಲಿವರ್ ಅವರ ಇಬ್ಬರು ಮಕ್ಕಳು ಈ ವಿಡಿಯೋದಲ್ಲಿದ್ದಾರೆ. ಜ್ಯಾಮಿ ಮತ್ತು ಜೆಸ್ಸೆ ಲಿವರ್ ಇಬ್ಬರೂ ಕಿತ್ತಾಡುತ್ತಿರುತ್ತಾರೆ. ಇವರ ಮಧ್ಯೆ ಜಾನಿ ಎಂಟ್ರಿ ಆಗುತ್ತದೆ. ಆಗ ಪ್ರಸಾರವಾಗುವ ‘ಇನ್ ಡಾ ಗೆಟ್ಟೋ..’ ಹಾಡಿಗೆ ಇವರು ಡ್ಯಾನ್ಸ್ ಮಾಡುತ್ತಾರೆ. ಆ ಮೂಲಕ ಫೈಟ್ ತಪ್ಪಿಸುತ್ತಾರೆ.
ಈ ಹಾಡು ಬರೋಬ್ಬರಿ 12 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಅಲ್ಲದೆ, ಲಕ್ಷಾಂತರ ಲೈಕ್ಸ್ ಪಡೆದುಕೊಂಡಿದೆ. ಈ ರೀಲ್ಸ್ಅನ್ನು ಸಾಕಷ್ಟು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ‘ಜಾನಿ ಸರ್ ಯಾವಾಗಲೂ ರಾಕಿಂಗ್’, ‘ಸೂಪರ್ಬ್’, ‘ನೀವು ಅದ್ಭುತ’, ‘ಅಪ್ಪ-ಮಕ್ಕಳು ಈ ರೀತಿ ಇರಬೇಕು’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
1982ರಲ್ಲಿ ತೆರೆಗೆ ಬಂದ ‘ದರ್ದ್ ಕಾ ರಿಷ್ತಾ’ ಸಿನಿಮಾ ಮೂಲಕ ಜಾನಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಾದ ನಂತರ ಅವರಿಗೆ ಬೇಡಿಕೆ ಹೆಚ್ಚಿತು. ಪೋಷಕ ಹಾಗೂ ಕಾಮಿಡಿ ಪಾತ್ರಗಳಲ್ಲಿ ನಟಿಸೋಕೆ ಅವಕಾಶಗಳು ಹರಿದು ಬಂದವು. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಜಾನಿ ನಟಿಸಿದ್ದಾರೆ. ಈ ವರ್ಷ ಒಟಿಟಿಯಲ್ಲಿ ತೆರೆಗೆ ಬಂದ ‘ಹಂಗಾಮಾ 2’ ಸಿನಿಮಾದಲ್ಲಿ ಜಾನಿ ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ಸು ಕಂಡಿಲ್ಲ. ಇದಲ್ಲದೆ, ‘ಹೌಸ್ಫುಲ್’ ಮೊದಲಾದ ಸೀರಿಸ್ಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್ ನಟರ ಸಂಭಾವನೆ 75 ಕೋಟಿ