
ಆಗಸ್ಟ್ 14ರಂದು ‘ವಾರ್ 2’ (War 2) ಸಿನಿಮಾ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಸಖತ್ ಉತ್ಸಾಹದಲ್ಲಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ (Hrithik Roshan) ಅವರು ತೆರೆ ಹಂಚಿಕೊಂಡಿದ್ದಾರೆ. ಆ ಕಾರಣದಿಂದ ಹೈಪ್ ಹೆಚ್ಚಾಗಿದೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ನಿರ್ಮಾಪಕರಿಗೆ ಲಾಭ ಆಗಬೇಕು ಎಂದರೆ ಚಿತ್ರಕ್ಕೆ ಸಿಕ್ಕಾಪಟ್ಟೆ ಕಲೆಕ್ಷನ್ ಆಗಲೇಬೇಕು. ಮೊದಲ ದಿನ ‘ವಾರ್ 2’ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ (War 2 Box Office Collection) ಮಾಡಬಹುದು ಎಂಬುದರ ಲೆಕ್ಕಾಚಾರ ನಡೆಯುತ್ತಿದೆ. ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಇಂಥ ಹೈವೋಲ್ಟೇಜ್ ಸಿನಿಮಾಗಳು ಮೊದಲ ದಿನವೇ 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತವೆ. ‘ವಾರ್ 2’ ಸಿನಿಮಾದ ವಿಚಾರದಲ್ಲಿಯೂ ಅದೇ ರೀತಿ ಊಹಿಸಲಾಗಿತ್ತು. ಆದರೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಮಾಣವನ್ನು ಗಮನಿಸಿದರೆ ಈ ಸಿನಿಮಾಗೆ ಕೊಂಚ ಹಿನ್ನಡೆ ಆಗುವ ಸೂಚನೆ ಕಾಣುತ್ತಿದೆ. ಆದರೂ ಚಿತ್ರತಂಡಕ್ಕೆ ಭರವಸೆ ಕಡಿಮೆ ಆಗಿಲ್ಲ.
‘ವಾರ್ 2’ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಟಿಕೆಟ್ ಬುಕ್ಕಿಂಗ್ ಆಗದೇ ಇರುವುದರಿಂದ ಮೊದಲ ದಿನ ಈ ಸಿನಿಮಾ 35 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿ ಇರುವುದರಿಂದ ಅಷ್ಟರಲ್ಲಿ ಅಡ್ವಾನ್ಸ್ ಬುಕಿಂಗ್ ಗಣನೀಯವಾಗಿ ಹೆಚ್ಚಿದರೆ ಓಪನಿಂಗ್ ಕಲೆಕ್ಷನ್ ಏರಿಕೆ ಕಾಣಲಿದೆ.
ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ. ತೆಲುಗು ವರ್ಷನ್ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕೌತುಕ ಎಲ್ಲರಿಗೂ ಇದೆ. ಒಂದು ವೇಳೆ ಮೊದಲ ದಿನ ಉತ್ತಮ ವಿಮರ್ಶೆ ಸಿಕ್ಕರೆ ಶುಕ್ರವಾರ, ಶನಿವಾರ, ಭಾನುವಾರ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ‘ವಾರ್ 2’ ಅಖಾಡಕ್ಕೆ ಬಾಬಿ ಡಿಯೋಲ್ ಎಂಟ್ರಿ; ಮುಖ್ಯ ವಿಲನ್ ಇವರೇನಾ?
ಅಂದಹಾಗೆ, ‘ವಾರ್ 2’ ಸಿನಿಮಾಗೆ ಕೊಂಚ ಹಿನ್ನಡೆ ಆಗಲು ಕಾರಣ ಆಗಿರುವುದು ‘ಕೂಲಿ’ ಸಿನಿಮಾದ ಪೈಪೋಟಿ. ಹೌದು, ಆಗಸ್ಟ್ 14ರಂದೇ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಚಿತ್ರದಲ್ಲಿ ಬಹುತಾರಾಗಣ ಇದೆ. ದಕ್ಷಿಣ ಭಾರತದ ಪ್ರೇಕ್ಷಕರು ಆ ಸಿನಿಮಾಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಟಿಕೆಟ್ ಬುಕಿಂಗ್ನಲ್ಲಿ ‘ವಾರ್ 2’ ಚಿತ್ರವನ್ನು ‘ಕೂಲಿ’ ಹಿಂದಿಕ್ಕಿದೆ. ಆಮಿರ್ ಖಾನ್, ನಾಗಾರ್ಜುನ ಮುಂತಾದವರು ‘ಕೂಲಿ’ ಸಿನಿಮಾದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.