ಕಂಗನಾಗೆ ಹೊಡೆದಿದ್ದಕ್ಕೆ ಬಾಲಿವುಡ್ ಮಂದಿಗೆ ಖುಷಿ ಆಗಿದ್ಯಾ? ಪ್ರತಿಕ್ರಿಯಿಸಿದ ನಟಿ

‘ಪ್ರೀತಿಯ ಚಿತ್ರರಂಗದವರೇ, ನನ್ನ ಮೇಲೆ ವಿಮಾನ ನಿಲ್ದಾಣದಲ್ಲಿ ದಾಳಿ ಆಗಿದ್ದಕ್ಕೆ ನೀವೆಲ್ಲ ಸಂಭ್ರಮ ಆಚರಿಸುತ್ತಿರಬಹುದು ಮತ್ತು ನೀವೆಲ್ಲ ಸಂಪೂರ್ಣ ಮೌನವಾಗಿದ್ದೀರಿ’ ಎಂದು ಹೇಳಿದ್ದಾರೆ ನಟಿ ಕಂಗನಾ ರಣಾವತ್​. ‘ಮುಂದೆ ನಿಮಗೂ ಈ ರೀತಿ ಆಗಬಹುದು’ ಎಂದು ಕೂಡ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ ನಂತರದಲ್ಲಿ ಇದನ್ನು ಅವರು ಡಿಲೀಟ್​ ಮಾಡಿದ್ದಾರೆ.

ಕಂಗನಾಗೆ ಹೊಡೆದಿದ್ದಕ್ಕೆ ಬಾಲಿವುಡ್ ಮಂದಿಗೆ ಖುಷಿ ಆಗಿದ್ಯಾ? ಪ್ರತಿಕ್ರಿಯಿಸಿದ ನಟಿ
ಕಂಗನಾ ರಣಾವತ್​
Follow us
|

Updated on: Jun 07, 2024 | 9:57 PM

ನಟಿ, ನೂತನ ಸಂಸದೆ ಕಂಗನಾ ರಣಾವತ್​ (Kangana Ranaut) ಅವರು ಒಂದಿಲ್ಲಾ ಒಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. 2020ರಲ್ಲಿ ಅವರು ಪಂಜಾಬ್​ ರೈತರ ಚಳುವಳಿ ಬಗ್ಗೆ ನೀಡಿದ್ದ ಹೇಳಿಕೆಯಿಂದ ವಿವಾದ ಹುಟ್ಟಿಕೊಂಡಿತ್ತು. ‘ಈ ಹೋರಾಟಗಾರರು 100 ರೂಪಾಯಿಗೆ ಬರುತ್ತಾರೆ’ ಎಂಬ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್ (Kulwinder Kaur)​ ಅವರು ಗುರುವಾರ (ಜೂನ್​ 6) ಕಂಗನಾರ ಕೆನ್ನೆಗೆ ಬಾರಿಸಿದ್ದು ದೊಡ್ಡ ಸುದ್ದಿ ಆಯಿತು. ಆ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್​ (Bollywood) ಸೆಲೆಬ್ರಿಟಿಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಅದು ಕಂಗನಾ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

ಹಿಂದಿ ಚಿತ್ರರಂಗದಲ್ಲಿ ಕಂಗನಾ ರಣಾವತ್​ ಅವರು ಬಂಡಾಯ ಎದ್ದು ಹಲವು ವರ್ಷ ಕಳೆದಿದೆ. ಅನೇಕ ಸೆಲೆಬ್ರಿಟಿಗಳ ವಿರುದ್ಧ ಅವರು ಆಗಾಗ ಕಿಡಿಕಾರುತ್ತಾರೆ. ಕರಣ್​ ಜೋಹರ್​, ಆಲಿಯಾ ಭಟ್, ರಣಬೀರ್​ ಕಪೂರ್​ ಮುಂತಾದವರ ವಿರುದ್ಧ ಅವರು ಸಿಡುಕುತ್ತಾರೆ. ಈಗ ಕಂಗನಾ ರಣಾವತ್​ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ್ದನ್ನು ಬಿ-ಟೌನ್​ ಮಂದಿ ಸೆಲೆಬ್ರೇಟ್​ ಮಾಡುತ್ತಿರಬಹುದಾ? ಕಂಗನಾಗೆ ಆ ರೀತಿ ಅನಿಸಿದೆ.

ಈ ಕುರಿತು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕಂಗನಾ ರಣಾವತ್​ ಅವರು ಬರೆದುಕೊಂಡಿದ್ದರು. ಆದರೆ ಕೂಡಲೇ ಅದನ್ನು ಡಿಲೀಟ್​ ಕೂಡ ಮಾಡಿದ್ದಾರೆ. ‘ಪ್ರೀತಿಯ ಚಿತ್ರರಂಗದವರೇ, ನನ್ನ ಮೇಲೆ ವಿಮಾನ ನಿಲ್ದಾಣದಲ್ಲಿ ದಾಳಿ ಆಗಿದ್ದಕ್ಕೆ ನೀವೆಲ್ಲ ಸಂಭ್ರಮಿಸುತ್ತಿರಬಹುದು. ನೀವೆಲ್ಲ ಸಂಪೂರ್ಣ ಮೌನವಾಗಿದ್ದೀರಿ’ ಎಂದು ಹೇಳಿರುವ ಕಂಗನಾ ಅವರು ‘ಮುಂದೆ ನಿಮಗೂ ಈ ರೀತಿ ಆಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್​ ದದ್ಲಾನಿ

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ರಫಾ ಹತ್ಯಾಕಾಂಡವನ್ನು ಖಂಡಿಸಿ ‘All Eyes On Rafah’ (ರಫಾ ಮೇಲೆ ಎಲ್ಲರ ಕಣ್ಣು) ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ವಿಚಾರವನ್ನು ಕಂಗನಾ ರಣಾವತ್​ ಅವರು ಈಗ ಟೀಕಿಸಿದ್ದಾರೆ. ‘ರಫಾ ಮೇಲೆ ಎಲ್ಲರ ಕಣ್ಣು ಎನ್ನುವ ಗ್ಯಾಂಗ್​ನವರೇ.. ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಈ ರೀತಿ ಆಗಬಹುದು. ಇನ್ನೊಬ್ಬರ ಮೇಲೆ ಆಗುವ ಭಯೋತ್ಪಾದಕ ದಾಳಿಯನ್ನು ನೀವು ಬೆಂಬಲಿಸಿದರೆ ನಿಮ್ಮ ಮೇಲೂ ಹಾಗೆಯೇ ಆಗುತ್ತದೆ. ಆ ದಿನಕ್ಕಾಗಿ ಸಿದ್ಧರಾಗಿರಿ’ ಎಂದು ಕಂಗನಾ ಅವರು ಪೋಸ್ಟ್​ ಮಾಡಿದ್ದರು. ನಂತರ ಡಿಲೀಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌
ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಡಿಕೆ ಶಿವಕುಮಾರ್‌