ಕರಣ್​ ಜೋಹರ್​ ಅದ್ದೂರಿ ಬರ್ತ್​ಡೇ ಪಾರ್ಟಿಗೆ ಕನ್ನಡದ ಸೆಲೆಬ್ರಿಟಿಗಳಿಗೂ ಆಹ್ವಾನ; ಬದಲಾಯ್ತು ಕಾಲ

ಮೇ 25ರಂದು ಕರಣ್​ ಜೋಹರ್​ ಅವರ ಹುಟ್ಟುಹಬ್ಬ. ಈ ಬಾರಿ ಅವರು 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನು ಪಾರ್ಟಿಗೆ ಆಹ್ವಾನಿಸಲಿದ್ದಾರೆ.

ಕರಣ್​ ಜೋಹರ್​ ಅದ್ದೂರಿ ಬರ್ತ್​ಡೇ ಪಾರ್ಟಿಗೆ ಕನ್ನಡದ ಸೆಲೆಬ್ರಿಟಿಗಳಿಗೂ ಆಹ್ವಾನ; ಬದಲಾಯ್ತು ಕಾಲ
ಕರಣ್ ಜೋಹರ್, ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on:May 17, 2022 | 7:55 AM

ನಿರ್ಮಾಪಕ ಕಮ್​ ನಿರ್ದೇಶಕ ಕರಣ್​ ಜೋಹರ್​ (Karan Johar) ಅವರ ಖ್ಯಾತಿ ದೊಡ್ಡದು. ಹಲವಾರು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ಅವರು ತುಂಬ ಪ್ರಭಾವಿ ವ್ಯಕ್ತಿ ಎಂಬುದರಲ್ಲಿ ಅನುಮಾನವೇ ಬೇಡ. ನಿರೂಪಕನಾಗಿಯೂ ಅವರು ಫೇಮಸ್​. ಹಿಂದಿ ಚಿತ್ರರಂಗದಲ್ಲಿ ಅನೇಕರನ್ನು ಲಾಂಚ್​ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮದೇ ‘ಧರ್ಮ ಪ್ರೊಡಕ್ಷನ್ಸ್​’ ನಿರ್ಮಾಣ ಸಂಸ್ಥೆ ಮೂಲಕ ಗಮನಾರ್ಹ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅದ್ದೂರಿತನಕ್ಕೆ ಅವರು ಹೆಸರುವಾಸಿ. ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್​ ಲೈಫ್​ನಲ್ಲಿಯೂ ಅವರದ್ದು ವರ್ಣರಂಜಿತ ವ್ಯಕಿತ್ವ. ಐಷಾರಾಮಿ ಜೀವನ ಸಾಗಿಸುವ ಕರಣ್​ ಜೋಹರ್​ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು (Karan Johar Birthday) ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಬಾಲಿವುಡ್​ನ ಅನೇಕ ಸ್ಟಾರ್​ ನಟ-ನಟಿಯರನ್ನು, ತಂತ್ರಜ್ಞರನ್ನು ಕರೆದು ಅವರು ಪಾರ್ಟಿ ಮಾಡುತ್ತಾರೆ. ಹಲವು ಬಗೆಯಲ್ಲಿ ಆ ಪಾರ್ಟಿಯ ಸುದ್ದಿಗಳು ವೈರಲ್​ ಆಗುತ್ತವೆ. ಮೇ 25ರಂದು ಅವರಿಗೆ ಜನ್ಮದಿನ ಸಂಭ್ರಮ. ಕರಣ್​ ಜೋಹರ್​ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಈ ಬಾರಿ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರಿಗೂ ಆಹ್ವಾನ ನೀಡಲಾಗುವುದು ಎಂಬ ಸುದ್ದಿ ಹರಡಿದೆ. ಅಲ್ಲದೇ ದಕ್ಷಿಣ ಭಾರತದ ಇನ್ನೂ ಅನೇಕ ಸ್ಟಾರ್​ಗಳನ್ನು ಕರಣ್​ ಜೋಹರ್​ ಆಹ್ವಾನಿಸಲಿದ್ದಾರೆ ಎನ್ನಲಾಗಿದೆ.

ಈವರೆಗೂ ಕೇವಲ ಬಾಲಿವುಡ್​ ಮೇಲೆ ಗಮನ ಹರಿಸುತ್ತಿದ್ದ ಕರಣ್​ ಜೋಹರ್​ ಅವರು ಈಗ ದಕ್ಷಿಣ ಭಾರತದ ಚಿತ್ರರಂಗದ ಮೇಲೂ ಒಂದು ಕಣ್ಣಿಟ್ಟಿದ್ದಾರೆ. ಬಾಕ್ಸ್​ ಆಫೀಸ್​ ದೃಷ್ಟಿಯಿಂದ ಈಗ ಕಾಲ ಬದಲಾಗಿದೆ. ಸೌತ್​ ಇಂಡಿಯನ್​ ಸಿನಿಮಾಗಳು ಹಿಂದಿ ಚಿತ್ರಗಳನ್ನು ಮೀರಿಸಿ ಕಲೆಕ್ಷನ್​ ಮಾಡುತ್ತಿವೆ. ಅದಕ್ಕೆ ‘ಕೆಜಿಎಫ್​ 2’, ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳೇ ಸಾಕ್ಷಿ. ಹಾಗಾಗಿ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಜೊತೆಗೆ ಕರಣ್​ ಜೋಹರ್​ ಅವರು ಸ್ನೇಹದ ಹಸ್ತ ಚಾಚಿದ್ದಾರೆ.

ಸೌತ್​ ಸೆಲೆಬ್ರಿಟಿಗಳ ಜೊತೆಗೆ ಕರಣ್​ ಜೋಹರ್​ ಅವರಿಗೆ ಒಡನಾಟ ಹೆಚ್ಚುತ್ತಿದೆ. ತಮ್ಮ ‘ಧರ್ಮ ಪ್ರೊಡಕ್ಷನ್’​ ಮೂಲಕ ದಕ್ಷಿಣದ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡುತ್ತಿದ್ದಾರೆ. ವಿಜಯ್​ ದೇವರಕೊಂಡ ನಟಿಸುತ್ತಿರುವ ‘ಲೈಗರ್​’ ಚಿತ್ರಕ್ಕೆ ಕರಣ್​ ಜೋಹರ್​ ಅವರೇ ನಿರ್ಮಾಪಕರು. ಇನ್ನು, ‘ಕೆಜಿಎಫ್​ 2’ ತಂಡದ ಜೊತೆಗೂ ಅವರು ತುಂಬ ಆಪ್ತತೆ ಬೆಳೆಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮದ ನಿರೂಪಣೆ ಮಾಡಲು ಅವರು ಬೆಂಗಳೂರಿಗೆ ಬಂದಿದ್ದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಹೀಗೆ ದಕ್ಷಿಣದ ಸೆಲೆಬ್ರಿಟಿಗಳ ಸ್ನೇಹ ಸಂಪಾದಿಸಿರುವ ಕರಣ್​ ಜೋಹರ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಯಶ್​, ವಿಜಯ್​ ದೇವರಕೊಂಡ, ಜ್ಯೂ. ಎನ್​ಟಿಆರ್​, ಪ್ರಶಾಂತ್​ ನೀಲ್​ ಸೇರಿದಂತೆ ಅನೇಕರು ಆಹ್ವಾನಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ
Image
ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !
Image
ಶಾರುಖ್​ ಖಾನ್​-ಕಾಜೋಲ್​ ಮತ್ತೆ ಜೋಡಿ; ಈ ಬಾರಿ ಕೂಡ ಕರಣ್​ ಜೋಹರ್ ರೂವಾರಿ
Image
Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?
Image
ಮನಸಾರೆ ದಕ್ಷಿಣ ಭಾರತದ ಸಿನಿಮಾ ಹೊಗಳಿದ ಕರಣ್​ ಜೋಹರ್​; ಸ್ಕ್ರೀನ್​ಶಾಟ್​ ಹಂಚಿಕೊಂಡ ನಟ

ಕರಣ್​ ಜೋಹರ್​ ಅವರಿಗೆ ಈ ಬಾರಿಯ ಹುಟ್ಟುಹಬ್ಬ ಹೆಚ್ಚು ವಿಶೇಷ ಆಗಿರಲಿದೆ. ಯಾಕೆಂದರೆ ಅವರು 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದ್ದರಿಂದ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಪಾರ್ಟಿ ನೀಡಲು ಅವರು ತೀರ್ಮಾನಿಸಿದ್ದಾರೆ. ಈ ಪಾರ್ಟಿಯಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತದೆ ಎಂದೆಲ್ಲ ಬಿ-ಟೌನ್​ ಗಲ್ಲಿಯಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಅಂತಿಮವಾಗಿ ಯಾರೆಲ್ಲ ಈ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:55 am, Tue, 17 May 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ