Shehzada: ಹೀನಾಯ ಸ್ಥಿತಿಯಲ್ಲಿ ‘ಶೆಹಜಾದಾ’ ಕಲೆಕ್ಷನ್; ಶಿವರಾತ್ರಿ ಹಬ್ಬದಲ್ಲೂ ಕಾರ್ತಿಕ್ ಆರ್ಯನ್ಗೆ ನಿರಾಸೆ
Shehzada Collection | Kartik Aaryan: ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಉತ್ತಮ ಕಲೆಕ್ಷನ್ ಆಗುತ್ತದೆ. ಆದರೆ ‘ಶೆಹಜಾದಾ’ ಚಿತ್ರದ ವಿಚಾರದಲ್ಲಿ ಈ ಸೂತ್ರ ವರ್ಕೌಟ್ ಆಗಿಲ್ಲ.
ನಟ ಕಾರ್ತಿಕ್ ಆರ್ಯನ್ (Kartik Aaryan) ಅವರು ಈ ವರ್ಷ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಅವರು ನಟಿಸಿರುವ ‘ಶೆಹಜಾದಾ’ ಸಿನಿಮಾ ಫೆಬ್ರವರಿ 17ರಂದು ಬಿಡುಗಡೆ ಆಯಿತು. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಈ ಸಿನಿಮಾ ಸೋತಿದೆ. ಮೊದಲ ದಿನ ‘ಶೆಹಜಾದಾ’ (Shehzada Movie) ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹ ಆಗಿದ್ದು ಕೇವಲ 6 ಕೋಟಿ ರೂಪಾಯಿ. ಎರಡನೇ ದಿನ (ಫೆ.18) ಬರೀ 6.65 ಕೋಟಿ ರೂಪಾಯಿ ಕಲೆಕ್ಷನ್ (Shehzada Box Office Collection) ಆಗಿದೆ. ವೀಕೆಂಡ್ನಲ್ಲಿ ಇಷ್ಟು ಕಡಿಮೆ ಆದಾಯ ಬಂದರೆ ಸೋಮವಾರದ ಹೊತ್ತಿಗೆ ಈ ಸಿನಿಮಾ ಮಕಾಡೆ ಮಲಗುವುದು ಖಚಿತ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ಗೆ ಜೋಡಿಯಾಗಿ ಕೃತಿ ಸನೋನ್ ನಟಿಸಿದ್ದಾರೆ.
ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾದರೆ ಉತ್ತಮ ಕಲೆಕ್ಷನ್ ಆಗುತ್ತದೆ. ಅದೇ ಉದ್ದೇಶದಿಂದ ಶಿವರಾತ್ರಿ ಪ್ರಯುಕ್ತ ‘ಶೆಹಜಾದಾ’ ಸಿನಿಮಾವನ್ನು ತೆರೆ ಕಾಣಿಸಲಾಯಿತು. ಶನಿವಾರ (ಫೆ.18) ಹಬ್ಬ ಮತ್ತು ವೀಕೆಂಡ್ ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿಲ್ಲ. ಇದರಿಂದ ಕಾರ್ತಿಕ್ ಆರ್ಯನ್ ಅವರ ಚಿತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
‘ಶೆಹಜಾದಾ’ ಸೋಲಿಗೆ ಕಾರಣ ಏನು?
ಕಳೆದ ವರ್ಷ ಕಾರ್ತಿಕ್ ಆರ್ಯನ್ ಅವರು ‘ಭೂಲ್ ಭುಲಯ್ಯ 2’ ಸಿನಿಮಾ ಮಾಡಿ ಗೆದ್ದಿದ್ದರು. ಆದರೆ ಈ ವರ್ಷ ಆರಂಭದಲ್ಲೇ ಅವರು ಮುಗ್ಗರಿಸುವಂತಾಗಿದೆ. ಇದಕ್ಕೆ ಕಾರಣ ಆಗಿದ್ದು ರಿಮೇಕ್. ಹೌದು, ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರದ ಹಿಂದಿ ರಿಮೇಕ್ ಆಗಿ ‘ಶೆಹಜಾದಾ’ ಸಿನಿಮಾ ಮೂಡಿಬಂದಿದೆ. ಮೂಲ ಸಿನಿಮಾವನ್ನು ಜನರು ಈಗಾಗಲೇ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ನೋಡಿರುವುದರಿಂದ ಹಿಂದಿ ರಿಮೇಕ್ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸಿಲ್ಲ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್ ಆರ್ಯನ್ಗೆ ದುಂಬಾಲುಬಿದ್ದ ಲೇಡಿ ಫ್ಯಾನ್ಸ್; ವೈರಲ್ ಆಯ್ತು ವಿಡಿಯೋ
ಫೈಟ್ ಮಾಡಲು ಹೋಗಿ ಪೆಟ್ಟು ತಿಂದ ಕಾರ್ತಿಕ್ ಆರ್ಯನ್:
ನಟ ಕಾರ್ತಿಕ್ ಆರ್ಯನ್ ಅವರು ಈವರೆಗೂ ಲವರ್ ಬಾಯ್ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಶೆಹಜಾದಾ’ ಸಿನಿಮಾ ಮೂಲಕ ಅವರು ಆ್ಯಕ್ಷನ್ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಅವರು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಆದರೂ ಕೂಡ ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗಿಲ್ಲ. ಆ್ಯಕ್ಷನ್ ಹೀರೋ ಗೆಟಪ್ನಲ್ಲಿ ಅವರನ್ನು ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಹಾಗಾಗಿ ಫೈಟ್ ಮಾಡಲು ಹೋಗಿ ಅವರು ಪೆಟ್ಟು ತಿಂದಂತಾಗಿದೆ.
#Shehzada falls flat… Fails to register *major* growth/jump on Day 2, despite #MahaShivratri holiday… The journey ahead [weekdays] appears to be unsteady, since the trending over the weekend is lacklustre… Fri 6 cr, Sat 6.65 cr. Total: ₹ 12.65 cr [+/-]. #India biz. pic.twitter.com/971gnwXiDj
— taran adarsh (@taran_adarsh) February 19, 2023
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಇಂದಿಗೂ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಹಾಲಿವುಡ್ ಸಿನಿಮಾಗಳು ಕೂಡ ಬಿಡುಗಡೆಯಾಗಿ ಪೈಪೋಟಿ ನೀಡುತ್ತಿವೆ. ಈ ಎಲ್ಲ ಚಿತ್ರಗಳ ನಡುವೆ ಸ್ಪರ್ಧಿಸುವಲ್ಲಿ ‘ಶೆಹಜಾದಾ’ ಸಿನಿಮಾ ವಿಫಲವಾಗಿದೆ. ಈ ಚಿತ್ರಕ್ಕೆ ರೋಹಿತ್ ಧವನ್ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:51 pm, Sun, 19 February 23