ನಟ ಕಾರ್ತಿಕ್ ಆರ್ಯನ್ (Kartik Aryan) ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಅವರು ಈಗ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿ ಬಾಲಿವುಡ್ನಲ್ಲಿ(Bollywood) ಭದ್ರವಾಗಿ ನೆಲೆಯೂರಿದ್ದಾರೆ. ಬಾಲಿವುಡ್ನ ಪ್ರಭಾವಿ ಗ್ಯಾಂಗ್ ಕಾರ್ತಿಕ್ ಆರ್ಯನ್ ಅವರನ್ನು ಮಟ್ಟ ಹಾಕಲು ಪ್ಲ್ಯಾನ್ ರೂಪಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ರೀತಿ ಆಗಿಲ್ಲ. ಕಾರ್ತಿಕ್ ಆರ್ಯನ್ ಅವರು ದಿನಕಳೆದಂತೆ ಮತ್ತಷ್ಟು ಶೈನ್ ಆಗುತ್ತಿದ್ದಾರೆ. ಕೆಲವರು ಅವರನ್ನು ‘ರಿಪ್ಲೇಸಿಂಗ್ ಸ್ಟಾರ್’ ಎಂದು ಕರೆದಿದ್ದಾರೆ.
ಕಾರ್ತಿಕ್ ಆರ್ಯನ್ ಅವರ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ವರ್ಷ ಬಾಲಿವುಡ್ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿದ ಬೆರಳೆಣಿಕೆ ಸಿನಿಮಾಗಳ ಪೈಕಿ ಇದು ಕೂಡ ಒಂದು. ಇದು ಕಾರ್ತಿಕ್ ಪಾಲಿಗೆ ತುಂಬಾನೇ ವಿಶೇಷ. ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ನಟಿಸಿದ್ದರು. ‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಅಕ್ಷಯ್ ಜಾಗವನ್ನು ಕಾರ್ತಿಕ್ ಆರ್ಯನ್ ತುಂಬಿದ್ದರು. ‘ಹೇರಾ ಫೇರಿ 3’ ಚಿತ್ರದಲ್ಲಿ ಅಕ್ಷಯ್ ಬದಲು ಕಾರ್ತಿಕ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಕಾರ್ತಿಕ್ ಆರ್ಯನ್ ಬಗ್ಗೆ ಸಾಕಷ್ಟು ಮೀಮ್ಗಳು ಹರಿದಾಡುತ್ತಿವೆ. ಅವರು ರಿಪ್ಲೇಸಿಂಗ್ ಸ್ಟಾರ್ ಎಂದು ಕೆಲವರು ಕೊಂಕು ತೆಗೆದಿದ್ದಾರೆ. ‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ಟಾಮ್ ಕ್ರೂಸ್ ಅವರ ಬದಲಿಗೆ ಕಾರ್ತಿಕ್ ಆರ್ಯನ್ ನಟಿಸಬಹುದು ಎನ್ನುವ ಮೀಮ್ ಇದೆ. ಈ ವಿಚಾರಕ್ಕೆ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಈ ವಿಚಾರದಲ್ಲಿ ಬೇಸರ ಇಲ್ಲವಂತೆ.
ಇದನ್ನೂ ಓದಿ: ‘ಭೂಲ್ ಭುಲಯ್ಯ 2’ ಚಿತ್ರ ಗೆಲ್ಲಿಸಿದ ಕಾರ್ತಿಕ್ ಆರ್ಯನ್ಗೆ ನಾಲ್ಕು ಕೋಟಿ ರೂಪಾಯಿ ಕಾರ್ ಗಿಫ್ಟ್
‘ಹಲವರು ನನಗೆ ಅದನ್ನು (ಮೀಮ್) ಕಳುಹಿಸಿದ್ದರು. ನನಗೆ ಅದು ಫನ್ನಿ ಅನಿಸಿತು. ನಾನು ಅದನ್ನು ಎಂಜಾಯ್ ಮಾಡಿದೆ. ನಿರ್ಲಕ್ಷ್ಯಕ್ಕೆ ಒಳಗಾಗುವುದಕ್ಕಿಂತ ಇದು ಉತ್ತಮ. ನಾನು ಯಾವಾಗಲೂ ನಿರ್ಲಕ್ಷ್ಯಕ್ಕೆ ಒಳಗಾದೆ. ಆ ಬಗ್ಗೆ ನನಗೆ ಭಯ ಇತ್ತು. ಆದರೆ, ಈಗ ಅದು ಕಷ್ಟ. ನಾನು ಖುಷಿಯಿಂದ ಇದ್ದೇನೆ. ಆ ಭಯ ಇನ್ನೆಂದಿಗೂ ಬರುವುದಿಲ್ಲ. ಹಲವು ಘಟನೆಗಳು ನನ್ನ ಜೀವನದಲ್ಲಿ ನಡೆಯುತ್ತಿವೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಕಾರ್ತಿಕ್.