KL Rahul Marriage: ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ತಯಾರಿ ನಿಜವೇ? ಸುನೀಲ್​ ಶೆಟ್ಟಿ ನೀಡಿದ ನೇರ ಉತ್ತರ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Jul 13, 2022 | 7:18 AM

KL Rahul Athiya Shetty Marriage: ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

KL Rahul Marriage: ಕೆಎಲ್​ ರಾಹುಲ್-ಆಥಿಯಾ ಶೆಟ್ಟಿ ಮದುವೆ ತಯಾರಿ ನಿಜವೇ? ಸುನೀಲ್​ ಶೆಟ್ಟಿ ನೀಡಿದ ನೇರ ಉತ್ತರ ಇಲ್ಲಿದೆ..
ಕೆಎಲ್ ರಾಹುಲ್, ಆಥಿಯಾ ಶೆಟ್ಟಿ, ಸುನೀಲ್ ಶೆಟ್ಟಿ
Follow us on

ಸಿನಿಮಾ ಕ್ಷೇತ್ರದವರು ಕ್ರಿಕೆಟ್​ ಆಟಗಾರರನ್ನು ಮದುವೆ ಆದ ಹಲವು ಉದಾಹರಣೆಗಳಿವೆ. ಅದೇ ಹಾದಿಯಲ್ಲಿ ಕೆಎಲ್​ ರಾಹುಲ್​ (KL Rahul) ಹಾಗೂ ಆಥಿಯಾ ಶೆಟ್ಟಿ ಸಾಗುತ್ತಿದ್ದಾರೆ ಎಂಬ ಮಾತು ಬಹಳ ದಿನಗಳಿಂದಲೂ ಕೇಳಿಬರುತ್ತಲೇ ಇದೆ. ಸ್ಟಾರ್​ ಕ್ರಿಕೆಟಿಗ ಕೆಎಲ್​ ರಾಹುಲ್​ ಅವರು ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ (Athiya Shetty) ಜೊತೆ ಹಲವು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಶೀಘ್ರದಲ್ಲೇ ಹಸೆ ಮಣೆ ಏರುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿ ಕೇಳಿಬರುತ್ತಿದೆ. ಅದಕ್ಕೆ ಆಥಿಯಾ ಶೆಟ್ಟಿ ತಂದೆ ಸುನೀಲ್​ ಶೆಟ್ಟಿ (Suniel Shetty) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಹರಿದಾಡುತ್ತಿರುವ ಅಂತೆ-ಕಂತೆಗಳಿಗೆ ಅವರು ಪೂರ್ಣವಿರಾಮ ಇಟ್ಟಿದ್ದಾರೆ.

ಯಾವಾಗ ಆಥಿಯಾ ಶೆಟ್ಟಿ ಹಾಗೂ ಕೆಎಲ್​ ರಾಹುಲ್​ ಅವರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರೋ ಆಗಿನಿಂದಲೇ ಇಬ್ಬರ ಮದುವೆ ಬಗ್ಗೆ ಕುಟುಂಬದವರಿಗೆ ಪ್ರಶ್ನೆ ಎದುರಾಗಲು ಶುರುವಾಯಿತು. ಈ ಕುರಿತು ಸುನೀಲ್​ ಶೆಟ್ಟಿ ಅನೇಕ ಸಲ ಪ್ರತಿಕ್ರಿಯೆ ನೀಡಿದ್ದುಂಟು. ಇತ್ತೀಚಿನ ದಿನಗಳಲ್ಲಿ ಮದುವೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸುನೀಲ್​ ಶೆಟ್ಟಿ ಅವರು ಹೋದಲ್ಲಿ ಬಂದಲ್ಲಿ ಈ ಬಗ್ಗೆಯೇ ಪ್ರಶ್ನೆ ಎದುರಾಗುತ್ತಿದೆ. ಇತ್ತೀಚೆಗೆ ಅವರು ‘ರೇಡಿಯೋ ಮಿರ್ಚಿ’ಗೆ ಪ್ರತಿಕ್ರಿಯೆ ನೀಡಿದ್ದು, ‘ಇಲ್ಲ.. ಸದ್ಯಕ್ಕೆ ಮದುವೆ ಬಗ್ಗೆ ಏನೂ ಪ್ಲ್ಯಾನ್​ ಆಗಿಲ್ಲ’ ಎಂದು ಹೇಳಿದ್ದಾರೆ.

‘ಯಾವಾಗ ಮದುವೆ ಆಗಬೇಕು ಎಂಬುದು ಆಥಿಯಾ ಆಯ್ಕೆಗೆ ಬಿಟ್ಟ ವಿಚಾರ’ ಎಂದು ಈ ಹಿಂದೆ ಕೂಡ ಸುನೀಲ್​ ಶೆಟ್ಟಿ ಹೇಳಿದ್ದರು. ಆಥಿಯಾ ಶೆಟ್ಟಿ ಸಹೋದರ ಅಹಾನ್​ ಶೆಟ್ಟಿ ಅವರಿಗೂ ಈ ಮೊದಲು ಇಂಥದ್ದೇ ಪ್ರಶ್ನೆ ಕೇಳಲಾಗಿತ್ತು. ‘ಮದುವೆ ತಯಾರಿ ನಡೆದಿಲ್ಲ. ವಿವಾಹ ಸಮಾರಂಭವೇ ನಡೆಯುತ್ತಿಲ್ಲ ಎಂದಮೇಲೆ ನಾವು ದಿನಾಂಕದ ಬಗ್ಗೆ ಏನು ಹೇಳಲು ಸಾಧ್ಯ. ಇದೆಲ್ಲ ಬರೀ ಗಾಸಿಪ್ ಅಷ್ಟೇ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
ಸುನೀಲ್​ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್​ ತೆಗೆದುಕೊಂಡ ಸ್ಟಾರ್​ ನಟ
ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ
ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ
ಕೆ.ಎಲ್​. ರಾಹುಲ್​ ಹಾಗೂ ಅಥಿಯಾ ಜೋಡಿ ನೋಡಿ ಸುನೀಲ್​ ಶೆಟ್ಟಿ ಹೇಳಿದ್ದೇನು?

ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಅವರ ಜೊತೆ ಆಥಿಯಾ ಶೆಟ್ಟಿ ಕೂಡ ಪ್ರಯಾಣ ಬೆಳೆಸಿದ್ದರು. ಇಬ್ಬರ ನಡುವೆ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದಷ್ಟು ಬೇಗ ಈ ಜೋಡಿ ಹಸೆಮಣೆ ಏರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.