‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದಿಂದ ಆದ ನಷ್ಟ ಎಷ್ಟು? ಸಂಭಾವನೆ ಬಿಟ್ಟುಕೊಟ್ಟ ಆಮಿರ್ ಖಾನ್

ಈ ಚಿತ್ರದಲ್ಲಿ ಆಮಿರ್ ಖಾನ್ ಕೂಡ ಹಣ ಹೂಡಿದ್ದಾರೆ. ಈ ಕಾರಣದಿಂದ ಸಿನಿಮಾಗೆ ಅವರು ಸಂಭಾವನೆ ಪಡೆದುಕೊಂಡಿಲ್ಲ ಎಂದು ವರದಿ ಆಗಿದೆ.

‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದಿಂದ ಆದ ನಷ್ಟ ಎಷ್ಟು? ಸಂಭಾವನೆ ಬಿಟ್ಟುಕೊಟ್ಟ ಆಮಿರ್ ಖಾನ್
ಆಮಿರ್​-ಕರೀನಾ
TV9kannada Web Team

| Edited By: Rajesh Duggumane

Aug 16, 2022 | 2:44 PM

ವಿಮರ್ಶೆಯಲ್ಲಿ ಸೋತ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡೋದು ತೀರಾನೇ ಅಪರೂಪ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ (Laal Singh Chaddha) ವಿಮರ್ಶೆಯಲ್ಲಿ ಸೋತಿದೆ. ಮೇಲಿಂದ, ಸಿನಿಮಾಗೆ ಬ್ಯಾನ್ ಬಿಸಿ ತಟ್ಟಿದೆ. ಆಮಿರ್​ ಖಾನ್ (Aamir Khan)​ ಸಿನಿಮಾ ಮೊದಲ ವಾರಾಂತ್ಯಕ್ಕೆ ಕೇವಲ 37 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸೋಲಿನ ಸೂಚನೆ ಕೊಟ್ಟಿದೆ. ಈಗ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಳ್ಳುತ್ತಿವೆ. ವಿತರಕರು ನಷ್ಟ ಭರಿಸುವಂತೆ ಬೇಡಿಕೆ ಇಡುತ್ತಿದ್ದಾರೆ ಎಂದು ವರದಿ ಆಗಿತ್ತು. ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.

ಆಮಿರ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ 300+ ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಮಾಯಿ ಮಾಡುತ್ತಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಕೂಡ ಸೋಲುವ ಹಂತದಲ್ಲಿದೆ. ಈ ಸಿನಿಮಾ ಹಂಚಿಕೆ ಹಕ್ಕು ಪಡೆದವರು ಈಗ ನಿರ್ಮಾಪಕರ ಮನೆ ಬಾಗಿಲಿಗೆ ಬಂದು ನಷ್ಟ ಭರಿಸುವಂತೆ ಆಗ್ರಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದನ್ನು ನಿರ್ಮಾಪಕರು ಅಲ್ಲಗಳೆದಿದ್ದಾರೆ.

‘ಲಾಲ್​ ಸಿಂಗ್ ಚಡ್ಡಾ’ Viacom 18 ಪ್ರೊಡಕ್ಷನ್​ ಅಡಿಯಲ್ಲಿ ಮೂಡಿ ಬಂದಿದೆ. ಇದರ ಮುಖ್ಯಸ್ಥ ಅಜಿತ್ ಅಂಧರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಹೊರಗಿನ ಯಾರೊಬ್ಬರೂ ಈ ಚಿತ್ರವನ್ನು ಹಂಚಿಕೆ ಮಾಡಿಲ್ಲ. Viacom 18 ಸಿನಿಮಾ ಹಂಚಿಕೆ ಮಾಡಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ನಷ್ಟ ಉಂಟಾಗಿಲ್ಲ’ ಎಂದಿದ್ದಾರೆ ಅಜಿತ್.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗೆ 180 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕೊವಿಡ್​ನಿಂದ ಸಿನಿಮಾದ ಬಜೆಟ್​ ಹೆಚ್ಚಿದೆ. ಈ ಚಿತ್ರದ ಕಲೆಕ್ಷನ್​ 50 ಕೋಟಿ ರೂಪಾಯಿ ಒಳಗಿದೆ. ಚಿತ್ರದ ಒಟ್ಟೂ ಬಿಸ್ನೆಸ್​ 100 ಕೋಟಿ ರೂಪಾಯಿಗೂ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ಈ ಕಾರಣದಿಂದ ಚಿತ್ರ 80 ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ; ಸ್ಟಾರ್​ಗಳ ಪ್ರತಿಕ್ರಿಯೆ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್

ಇದನ್ನೂ ಓದಿ

ಈ ಚಿತ್ರದಲ್ಲಿ ಆಮಿರ್ ಖಾನ್ ಕೂಡ ಹಣ ಹೂಡಿದ್ದಾರೆ. ಈ ಕಾರಣದಿಂದ ಸಿನಿಮಾಗೆ ಅವರು ಸಂಭಾವನೆ ಪಡೆದುಕೊಂಡಿಲ್ಲ ಎಂದು ವರದಿ ಆಗಿದೆ. ಈಗ ಸೋತ ಕಾರಣದಿಂದ ಅವರು ಮತ್ತಷ್ಟು ಚಿಂತೆಗೆ ಒಳಗಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada