AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮದೇ ಮೂತ್ರ ಕುಡಿದು ‘ಇದು ಅಮೃತ, ಔಷಧಿ’ ಎಂದ ನಟಿ ಅನು ಅಗರ್​ವಾಲ್

ಮೂತ್ರ ಕುಡಿದರೆ ಸಾಕಷ್ಟು ಉಪಯೋಗ ಇದೆ ಎಂದು ನಟಿ ಅನು ಅಗರ್​ವಾಲ್ ಅವರು ಹೇಳಿದ್ದಾರೆ. ಇದು ತಮ್ಮ ಸ್ವಂತ ಅನುಭವಕ್ಕೆ ಬಂದಿದೆ ಎಂದು ಕೂಡ ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ನಟ ಪರೇಶ್ ರಾವಲ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು.

ತಮ್ಮದೇ ಮೂತ್ರ ಕುಡಿದು ‘ಇದು ಅಮೃತ, ಔಷಧಿ’ ಎಂದ ನಟಿ ಅನು ಅಗರ್​ವಾಲ್
Anu Aggarwal
ಮದನ್​ ಕುಮಾರ್​
|

Updated on: May 02, 2025 | 8:35 PM

Share

ಕೆಲವೇ ದಿನಗಳ ಹಿಂದೆ ನಟ ಪರೇಶ್ ರಾವಲ್ (Paresh Rawal) ಅವರು ನೀಡಿದ ಒಂದು ಹೇಳಿಕೆ ಸಖತ್ ಸುದ್ದಿ ಆಗಿತ್ತು. ಮೊಣಕಾಲಿನ ನೋವು ನಿವಾರಣೆಗೆ ಪರೇಶ್ ರಾವಲ್ ಅವರು ತಮ್ಮದೇ ಮೂತ್ರ (Urine) ಕುಡಿದಿದ್ದಾಗಿ ತಿಳಿಸಿದ್ದರು. ಈಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್​ನ ಹಿರಿಯ ನಟಿ ಅನು ಅಗರ್​ವಾಲ್ (Anu Aggarwal) ಅವರು ಮಾತನಾಡಿದ್ದಾರೆ. ‘ನಾನು ಕೂಡ ಮೂತ್ರ ಕುಡಿದಿದ್ದೇನೆ’ ಎಂದು ಅನು ಅಗರ್​​ವಾಲ್ ಅವರು ಹೇಳಿದ್ದಾರೆ. ಅಲ್ಲದೇ, ಮೂತ್ರವನ್ನು ಅಮೃತ, ಔಷಧಿ ಎಂದೆಲ್ಲ ಬಣ್ಣಿಸಿದ್ದಾರೆ. ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಅನು ಅಗರ್​​ವಾಲ್ ಅವರು ಒಂದು ಕಾರ್ಯಕ್ರಮದಲ್ಲಿ ಭಾಗಿಯಾದರು. ಮುಂಬೈನಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಆಶಿಕಿ’, ‘ಖಳ ನಾಯಿಕಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಆದರೆ ಮೂತ್ರ ಕುಡಿಯುವ ಬಗ್ಗೆ ಸಂದರ್ಶನದಲ್ಲಿ ಮಾತನಾಡಿ ಮತ್ತೆ ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ
Image
ಮಮ್ಮುಟಿ ಮೇಲೆ ಗಂಭೀರ ಆರೋಪ ಮಾಡಿದ ನಟ ಪರೇಶ್ ರಾವಲ್
Image
ಅವನು ಗೆಳೆಯನಲ್ಲ, ಸಹೋದ್ಯೋಗಿ; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?
Image
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್
Image
ಖ್ಯಾತ ಹಾಸ್ಯ ನಟ ಪರೇಶ್​ ರಾವಲ್​ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?

‘ತುಂಬಾ ಜನರಿಗೆ ಇದು ಗೊತ್ತಿಲ್ಲ. ಅದೇನು ಅಜ್ಞಾನವೋ ಅಥವಾ ಮಾಹಿತಿ ಕೊರತೆಯೋ ಗೊತ್ತಿಲ್ಲ. ಮೂತ್ರ ಕುಡಿಯುವುದು ಯೋಗದಲ್ಲಿ ಒಂದು ಅಭ್ಯಾಸ. ನಾನು ಅದನ್ನು ಸ್ವತಃ ಅಭ್ಯಾಸ ಮಾಡಿದ್ದೇನೆ. ನಾನು ಪ್ರಯತ್ನಿಸಿದ್ದೇನೆ. ಅದು ತುಂಬ ಮುಖ್ಯ ಕೂಡ’ ಎಂದು ಅನು ಅಗರ್ವಾಲ್ ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರಿಗೆ ವಿಚಿತ್ರ ಎನಿಸಿದೆ.

‘ಒಂದು ನೆನಪಿಡಬೇಕಾದ ಮುಖ್ಯವಾದ ವಿಷಯ ಏನೆಂದರೆ, ಪೂರ್ತಿ ಮೂತ್ರವನ್ನು ಕುಡಿಯಬೇಕಿಲ್ಲ. ಅದರಲ್ಲಿನ ನಿರ್ದಿಷ್ಟ ಭಾಗವನ್ನು ಕುಡಿಯಬೇಕು. ಆ ಭಾಗವನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ. ವಯಸ್ಸಾಗದಂತೆ ಅದು ತಡೆಯುತ್ತದೆ. ಚರ್ಮ ಸುಕ್ಕಾಗುವುದಿಲ್ಲ. ಅದು ನಿಜಕ್ಕೂ ಅದ್ಭುತ. ಕೇವಲ ಆರೋಗ್ಯಕ್ಕಾಗಿ ಅಲ್ಲ, ಉತ್ತಮವಾದ ಜೀವನಕ್ಕೂ ಅದು ಅನುಕೂಲಕರ. ನಾನು ವೈಯಕ್ತಿಯವಾಗಿ ಅದರ ಅನುಭವ ಪಡೆದಿದ್ದೇನೆ’ ಎಂದಿದ್ದಾರೆ ಅನು ಅಗರ್​ವಾಲ್.

ಇದನ್ನೂ ಓದಿ: ‘ಅವನು ಗೆಳೆಯನಲ್ಲ, ಸಹೋದ್ಯೋಗಿ ಅಷ್ಟೇ’; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?

ಇಂಥ ವಿಷಯ ಹೇಳಿದ್ದಕ್ಕೆ ವೈಜ್ಞಾನಿಕ ಪುರಾವೆ ಇದೆಯಾ ಎಂದು ಅನು ಅಗರ್​​ವಾಲ್ ಅವರಿಗೆ ಕೇಳಲಾಗಿದೆ. ಅದಕ್ಕೆ ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ‘ವಿಜ್ಞಾನ ಎಷ್ಟು ಹಳೆಯದು? 200 ವರ್ಷ ಇರಬಹುದಾ? ಆದರೆ ಯೋಗ 10 ಸಾವಿರ ವರ್ಷಗಳಿಂದ ಇದೆ. ಹಾಗಾಗಿ ನೀವು ಯಾರ ಮಾತು ಕೇಳುತ್ತೀರಿ? ನಾನು ಇದನ್ನು ಬೆಂಬಲಿಸುತ್ತೇನೆ’ ಎಂದು ಅನು ಅಗರ್ವಾಲ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.