ಮಾಜಿ ಕ್ರಿಕೆಟರ್ ಜೊತೆ ಮಲೈಕಾ ಅರೋರಾ ಡೇಟಿಂಗ್? ಮತ್ತೆ ಮೂಡಿತು ಅನುಮಾನ

ಮಲೈಕಾ ಅರೋರಾ ಅವರು ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ವೀಕ್ಷಿಸಿದ್ದರು. ಮಾಜಿ ಶ್ರೀಲಂಕಾ ಕ್ರಿಕೆಟರ್ ಕುಮಾರ ಸಂಗಕ್ಕರ್ ಕೂಡ ಆ ಪಂದ್ಯದಲ್ಲಿದ್ದರು. ಇದರಿಂದಾಗಿ ಇಬ್ಬರ ನಡುವೆ ಸಂಬಂಧ ಇದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ.

ಮಾಜಿ ಕ್ರಿಕೆಟರ್ ಜೊತೆ ಮಲೈಕಾ ಅರೋರಾ ಡೇಟಿಂಗ್? ಮತ್ತೆ ಮೂಡಿತು ಅನುಮಾನ
ಕುಮಾರ್ ಸಂಗಕ್ಕರ್​-ಮಲೈಕಾ
Updated By: ರಾಜೇಶ್ ದುಗ್ಗುಮನೆ

Updated on: Mar 31, 2025 | 11:03 AM

ನಟಿ ಮಲೈಕಾ ಅರೋರಾ (Malaika Arora) ಅವರಿಗೆ ಈಗ ವಯಸ್ಸು 50 ದಾಟಿದೆ. ಆದರೆ, ಈ ವಯಸ್ಸಿನಲ್ಲೂ ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿ ಆಗುತ್ತಾರೆ. ಅವರ ಹೆಸರು ಹಲವರ ಜೊತೆ ತಳುಕು ಹಾಕಿಕೊಂಡಿದ್ದು ಗೊತ್ತೇ ಇದೆ. ಈಗ ಮಲೈಕಾ ಅರೋರಾ ಅವರ ಹೆಸರು ಮಾಜಿ ಶ್ರೀಲಂಕಾ ಕ್ರಿಕೆಟರ್ ಕುಮಾರ ಸಂಗಕ್ಕರ್ ಜೊತೆ ತಳುಕು ಹಾಕಿಕೊಂಡಿದೆ ಅನ್ನೋದು ವಿಶೇಷ. ಇದಕ್ಕೆ ಕಾರಣವೂ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಾ ಇವೆ.

ಮಾರ್ಚ್ 30ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್ ಪಂದ್ಯವು ಗುವಾಹಟಿಯ ಸ್ಟೇಡಿಯಂನಲ್ಲಿ ನಡೆದಿದೆ. ಸಾಮಾನ್ಯವಾಗಿ ಮುಂಬೈನಲ್ಲಿ ಪಂದ್ಯ ಆದಾಗ ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿ ಹಾಕುವುದು ಸಾಮಾನ್ಯ. ಆದರೆ, ಗುವಾಹಟಿಗೆ ಮಲೈಕಾ ಅವರು ಆಗಮಿಸಿದ್ದು ಏಕೆ ಎನ್ನುವ ಪ್ರಶ್ನೆಯು ಅನೇಕರಲ್ಲಿ ಮೂಡಿದೆ. ಎಲ್ಲರೂ ಮಲೈಕಾ ಹಾಗೂ ಕುಮಾರ್ ಸಂಗಕ್ಕರ್​ ಮಧ್ಯೆ ಏನೋ ನಡೆಯುತ್ತಿದೆ ಎಂಬ ಸುದ್ದಿಯನ್ನು ಹರಿಬಿಟ್ಟಿದ್ದಾರೆ.

ಇದನ್ನೂ ಓದಿ
ಸೆಲೆಬ್ರಿಟಿಗಳ ಮನೆಯ ಕಸದಬುಟ್ಟಿಯಲ್ಲಿ ಸಿಕ್ಕಿದ್ದೇನು?
ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲವೇ ಇಲ್ಲ ಎಂದ ಖ್ಯಾತ ನಿರ್ಮಾಪಕ
ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸುವ ಸಮಸ್ಯೆಗಳೇನು?
ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’

ಕುಮಾರ್ ಸಂಗಕ್ಕರ್ ಅವರು ರಾಜಸ್ಥಾನ್ ರಾಯಲ್ಸ್​ನ ಮಾಜಿ ಕೋಚ್. ಹೀಗಾಗಿ, ಅವರು ಆರ್​ಆರ್​ ತಂಡವನ್ನು ಬೆಂಬಲಿಸಿದ್ದಾರೆ. ಮಲೈಕಾ ಕೂಡ ರಾಜಸ್ಥಾನವನ್ನು ಬೆಂಬಲಿಸಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಚಾರದ ಬಗ್ಗೆ ಅಭಿಮಾನಿಗಳು ತನಿಖೆ ಆರಂಭಿಸುತ್ತಿದ್ದಾರೆ. ‘ನೀವು ಡೇಟ್ ಮಾಡುತ್ತಿದ್ದೀರಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಸಂಗಕ್ಕರ್ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಹಲವು ಸೀಸನ್​ಗೆ ಕೋಚ್​ ಆಗಿದ್ದರು. ಈಗ ರಾಹುಲ್ ದ್ರಾವಿಡ್​ ಅವರು ಆರ್​ಆರ್​ನ ಕೋಚ ಆಗಿದ್ದಾರೆ ಅನ್ನೋದು ವಿಶೇಷ. ರಾಜಸ್ಥಾನ್ ತಂಡವು ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದು, ಮಲೈಕಾ ಖುಷಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮತ್ತೊಂದು ಹೊಸ ಬ್ಯುಸಿನೆಸ್​ಗೆ ಕೈ ಹಾಕಿದ ಬೆಡಗಿ ಮಲೈಕಾ ಅರೋರಾ

ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಮಲೈಕಾಗಿಂತ ಅರ್ಜುನ್ ಅವರು ವಯಸ್ಸಿನಲ್ಲಿ ತುಂಬಾನೇ ಸಣ್ಣವರು. ಆದಾಗ್ಯೂ ಇವರ ಪ್ರೇಮಕ್ಕೆ ತೊಂದರೆ ಉಂಟಾಗಿರಲಿಲ್ಲ. ಅರ್ಜುನ್ ಕಪೂರ್ ಅವರು ಸಾಕಷ್ಟು ಟ್ರೋಲ್ ಆದರು. ಕೊನೆಗೆ ಇವರ ಮಧ್ಯೆ ಬ್ರೇಕಪ್ ಆಗಿದೆ. ಇವರು ಈಗ ಬೇರೆ ಬೇರೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:02 am, Mon, 31 March 25