AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mallika Sherawat: ‘ಮಧ್ಯರಾತ್ರಿ ಬಾ ಎನ್ನುತ್ತಾರೆ’; ಟಾಪ್​ ಹಿಂದಿ ಹೀರೋಗಳ ಮೇಲೆ ಮಲ್ಲಿಕಾ ಶೆರಾವತ್​ ಗಂಭೀರ ಆರೋಪ

Bollywood | Casting Couch: ‘ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ನೀವು ಹೋಗದಿದ್ದರೆ ಅವರ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ’ ಎಂದು ಮಲ್ಲಿಕಾ ಶೆರಾವತ್​ ಹೇಳಿದ್ದಾರೆ.

Mallika Sherawat: ‘ಮಧ್ಯರಾತ್ರಿ ಬಾ ಎನ್ನುತ್ತಾರೆ’; ಟಾಪ್​ ಹಿಂದಿ ಹೀರೋಗಳ ಮೇಲೆ ಮಲ್ಲಿಕಾ ಶೆರಾವತ್​ ಗಂಭೀರ ಆರೋಪ
ಮಲ್ಲಿಕಾ ಶೆರಾವತ್
TV9 Web
| Edited By: |

Updated on:Aug 02, 2022 | 8:24 AM

Share

ನಟಿ ಮಲ್ಲಿಕಾ ಶೆರಾವತ್​ (Mallika Sherawat) ಅವರು ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಅವರು ನಂತರ ತೆರೆಮರೆಗೆ ಸರಿದರು. ಆ ರೀತಿ ಆಗಿದ್ದಕ್ಕೆ ಕಾರಣ ಏನು ಎಂದು ಅವರು ಈಗ ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್​ ಕೌಚ್ (Casting Couch)​ ಪಿಡುಗಿನ ಬಗ್ಗೆ ಈಗಾಗಲೇ ಅನೇಕ ನಟಿಯರು ಮಾತನಾಡಿದ್ದಾರೆ. ಮಲ್ಲಿಕಾ ಶೆರಾವತ್​ ಅವರು ಇನ್ನಷ್ಟು ವಿವರಗಳನ್ನು ತೆರೆದಿಟ್ಟಿದ್ದಾರೆ. ಬಾಲಿವುಡ್​ನ (Bollywood) ಟಾಪ್​ ಹೀರೋಗಳ ಮೇಲೆ ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಯಾರ ಹೆಸರನ್ನೂ ಅವರು ಪ್ರತ್ಯೇಕವಾಗಿ ಹೇಳಿಲ್ಲ. ಮಲ್ಲಿಕಾ ಶೆರಾವತ್ ನೀಡಿದ ಬೋಲ್ಡ್​ ಹೇಳಿಕೆಯಿಂದಾಗಿ ಹೊಸ ಚರ್ಚೆ ಶುರುವಾಗಿದೆ. ಹಿಂದಿ ಚಿತ್ರರಂಗದ ಕರಾಳ ಮುಖವನ್ನು ಅವರು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬಣ್ಣದ ಲೋಕಕ್ಕೆ ಕಾಲಿಡುವಾಗಲೇ ಮಲ್ಲಿಕಾ ಶೆರಾವತ್​ ಅವರು ಬೋಲ್ಡ್​ ಪಾತ್ರಗಳನ್ನು ಮಾಡಿದ್ದರು. ಹಾಗೆಂದ ಮಾತ್ರಕ್ಕೆ ಅವರು ಎಲ್ಲ ವಿಚಾರದಲ್ಲೂ ರಾಜಿ ಆಗುತ್ತಾರೆ ಎಂದರ್ಥವಲ್ಲ. ‘ಟಾಪ್​ ಹೀರೋಗಳು ನನ್ನ ಜೊತೆ ಸಿನಿಮಾ ಮಾಡಲು ನಿರಾಕರಿಸಿದರು. ಯಾಕೆಂದರೆ ನಾನು ಅವರೊಂದಿಗೆ ರಾಜಿ ಆಗಲಿಲ್ಲ’ ಎಂದು ಮಲ್ಲಿಕಾ ಶೆರಾವತ್​ ಹೇಳಿದ್ದಾರೆ.

‘ಯಾವ ನಟಿಯನ್ನು ತಾವು ಕಂಟ್ರೋಲ್​ ಮಾಡಬಹುದು, ಯಾವ ನಟಿ ತಮ್ಮೊಂದಿಗೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ಹೀರೋಗಳು ಇಷ್ಟಪಡುತ್ತಾರೆ. ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ’ ಎಂದಿದ್ದಾರೆ ಮಲ್ಲಿಕಾ ಶೆರಾವತ್​.

ಇದನ್ನೂ ಓದಿ
Image
‘ಗೆಹರಾಯಿಯಾ ಚಿತ್ರದಲ್ಲಿ ದೀಪಿಕಾ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ’ ಮಲ್ಲಿಕಾ ಶೆರಾವತ್
Image
‘ಕೆಲವು ಹೆಂಗಸರ ಕಾಟ ತಾಳಲಾರದೆ ದೇಶ ಬಿಟ್ಟು ಹೋದೆ’: ಮಲ್ಲಿಕಾ ಶೆರಾವತ್​ ತೆರೆದಿಟ್ಟ ಕಹಿ ಸತ್ಯ
Image
‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ
Image
‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

‘ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ಆತನ ಜೊತೆ ನೀವು ಸಿನಿಮಾ ಮಾಡುತ್ತಿರುತ್ತೀರಿ. ಅವರದೇ ಸರ್ಕಲ್​ನಲ್ಲಿ ಇರುತ್ತೀರಿ. ಅವರ ಮಧ್ಯರಾತ್ರಿ ಕರೆದಾಗ ನೀವು ಹೋಗದಿದ್ದರೆ ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ’ ಎಂದು ಮಲ್ಲಿಕಾ ಶೆರಾವತ್​ ಹೇಳಿರುವುದು ಸೆನ್ಸೇಷನ್​ ಸೃಷ್ಟಿ ಮಾಡಿದೆ.

2002ರಲ್ಲಿ ಮಲ್ಲಿಕಾ ಶೆರಾವತ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿದ್ದು 2004ರ ‘ಮರ್ಡರ್​’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದರು.

Published On - 8:24 am, Tue, 2 August 22

Follow Us
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ