‘ಮಲ್ಲಿಕಾ ಕೆಟ್ಟ ಕಿಸ್ಸರ್’: ಹೀಗೆ ಹೇಳಿದ್ರು ಇಮ್ರಾನ್ ಹಶ್ಮಿ
Mallika Sherawat: ಮಲ್ಲಿಕಾ ಶೆರಾವತ್ ಜೊತೆ ‘ಮರ್ಡರ್’ ಸಿನಿಮಾದಲ್ಲಿ ಬಲು ರೊಮ್ಯಾಂಟಿಕ್ ಆಗಿ ನಟಿಸಿದ್ದ ಇಮ್ರಾನ್ ಹಶ್ಮಿ, ಟಾಕ್ ಶೋ ಒಂದರಲ್ಲಿ ಮಲ್ಲಿಕಾ ಶೆರಾವತ್ ಬಹಳ ಕೆಟ್ಟ ಕಿಸ್ಸರ್ ಎಂದಿದ್ದರು.
ಇಮ್ರಾನ್ ಹಷ್ಮಿ ಹಾಗೂ ಮಲ್ಲಿಕಾ ಶೆರಾವತ್ ‘ಮರ್ಡರ್’ ಸಿನಿಮಾದಲ್ಲಿ ನಟಿಸಿ ರಾತ್ರೋ ರಾತ್ರಿ ಸೆನ್ಸೇಷನ್ ಸೃಷ್ಟಿ ಮಾಡಿದರು. ಈ ಚಿತ್ರ ಬಂದಿದ್ದು 2004ರಲ್ಲಿ. ಅಂದಿನ ಕಾಲಕಕ್ಕೆ ಮಡಿವಂತಿಕೆ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದರು. ಆಗಿನ ಕಾಲದಲ್ಲೂ ಜನರು ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದು ಈ ಸಿನಿಮಾ. ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಖ್ಯಾತಿ ಕೊಟ್ಟಿದ್ದು ಇದೇ ಚಿತ್ರ. ಆದರೆ ಈ ಸಿನಿಮಾ ಬಳಿಕ ಇಮ್ರಾನ್ ಹಾಗೂ ಮಲ್ಲಿಕಾ ಕಿತ್ತಾಡಿಕೊಂಡಿದ್ದರು.
ಇಮ್ರಾನ್ ಹಾಗೂ ಮಲ್ಲಿಕಾ ‘ಮರ್ಡರ್’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡರು. ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆದರು. ಬಾಲಿವುಡ್ನ ಟಾಪ್ ರೇಟೆಡ್ ಜೋಡಿ ಎನ್ನುವ ಖ್ಯಾತಿ ಇವರಿಗೆ ಸಿಕ್ಕಿತು. ಆದರೆ. ಇವರ ಮಧ್ಯೆ ಸಾಕಷ್ಟು ಕಿರಿಕ್ ಆಯಿತು. ಒಬ್ಬರ ಮೇಲೆ ಒಬ್ಬರು ಬೈದುಕೊಳ್ಳೋಕೆ ಆರಂಭಿಸಿದರು.
ಇಮ್ರಾನ್ ಹಶ್ಮಿ ಅವರು ಮಲ್ಲಿಕಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಆ ಹೇಳಿಕೆ ಬಗ್ಗೆ ಅವರು ನಂತರ ಮರುಗಿದ್ದರು. ‘ಕಾಫಿ ವಿತ್ ಕರಣ್’ ಶೋನಲ್ಲಿ ಇಮ್ರಾನ್ ಮಾತನಾಡಿದ್ದರು. ‘ತೆರೆ ಮೇಲೆ ಮಾಡಿದ ಅತ್ಯುತ್ತಮ ಹಾಗೂ ಅತೀ ಕೆಟ್ಟ ಕಿಸ್ ಬಗ್ಗೆ ಹೇಳಿ’ ಎಂದು ಇಮ್ರಾನ್ ಹಷ್ಮಿಗೆ ಕೇಳಲಾಯಿತು. ಈ ವೇಳೆ ಮಲ್ಲಿಕಾ ಶೆರಾವತ್ಗೆ ಅತಿ ಕೆಟ್ಟ ಕಿಸ್ಸರ್ ಎಂದು ಹೇಳಿದರೆ, ಜಾಕ್ವೆಲಿನ್ ಉತ್ತಮ ಕಿಸ್ಸರ್ ಎಂದಿದ್ದರು ಅವರು.
ಇದನ್ನೂ ಓದಿ:ದಕ್ಷಿಣದ ನಿರ್ದೇಶಕರಿಗೆ ನನ್ನ ದೇಹದ ಆ ಭಾಗ ಎಂದರೆ ಬಲು ಇಷ್ಟ: ಮಲ್ಲಿಕಾ ಶೆರಾವತ್
ಮಲ್ಲಿಕಾ ಶೆರಾವತ್ ಬೆಡ್ರೂಂನಲ್ಲಿ ಏನು ಕಾಣುತ್ತದೆ ಎಂದು ಕೇಳಿದಾಗ ಇಮ್ರಾನ್ ನಕ್ಕಿದ್ದರು. ‘ಹಾಲಿವುಡ್‌ನಲ್ಲಿ ಯಶಸ್ವಿಯಾಗಲು ಈಡಿಯಟ್ಸ್ ಗೈಡ್’ ಎಂದು ಉತ್ತರಿಸಿದ್ದರು. ಇದು ಮಲ್ಲಿಕಾ ಕೋಪಕ್ಕೆ ಕಾರಣ ಆಯಿತು. ಇಬ್ಬರ ಮಧ್ಯೆ ಶೀಥಲ ಸಮರಕ್ಕೆ ಇದು ಕಾರಣ ಆಯಿತು. ‘ನಾನು ಹಿಸ್ ಚಿತ್ರದಲ್ಲಿ ಹಾವಿಗೆ ಕಿಸ್ ಮಾಡಿದ್ದೆ. ಅದು ಇಮ್ರಾನ್ ಹಷ್ಮಿ ಜೊತೆ ಮಾಡಿದ ಕಿಸ್ಗಿಂತ ಉತ್ತಮವಾಗಿತ್ತು’ ಎಂದು ನಕ್ಕಿದ್ದರು.
‘ಅವಾರಾಪನ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾ ಶೆರಾವತ್ ಬಗ್ಗೆ ಇಮ್ರಾನ್ ಹಶ್ಮಿ ಮಾತನಾಡಿದ್ದರು. ಆಗ ಅವರು ಮಲ್ಲಿಕಾ ಶೆರಾವತ್ನ ದ್ವೇಷಿಸುವುದಾಗಿ ಹೇಳಿಕೊಂಡಿದ್ದರು. ಈ ರೀತಿ ಇಬ್ಬರ ಮಧ್ಯೆ ಸಾಕಷ್ಟು ಕಿರಿಕ್ಗಳು ಆಗಿವೆ.
ಮಲ್ಲಿಕಾ ಶೆರಾವತ್ ಅವರಿಗೆ ಇಂದು (ಅಕ್ಟೋಬರ್ 24) ಜನ್ಮದಿನ. ಅವರು ಬಾಲಿವುಡ್ನ ತೊರೆದಿದ್ದಾರೆ. ಇಲ್ಲಿ ಅವರನ್ನು ಅವಮಾನಿಸುವ ಕೆಲಸ ಆಯಿತಂತೆ. ಈ ಕಾರಣದಿಂದಲೇ ಅವರು ಚಿತ್ರರಂಗದಿಂದ ದೂರ ಇರಬೇಕಾಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ