ಹತ್ತಲ್ಲ, ಇಪ್ಪತ್ತಲ್ಲ ಒಟ್ಟಿಗೆ 70 ಸಿನಿಮಾ ಸಹಿ ಮಾಡಿದ್ದ ಗೋವಿಂದ
ಗೋವಿಂದ ಚಿತ್ರರಂಗದಲ್ಲಿ ಪಡೆದ ಖ್ಯಾತಿ ಅಷ್ಟಿಷ್ಟಲ್ಲ. ಈ ಮೊದಲು ಗೋವಿಂದ ಅವರು ಈ ಬಗ್ಗೆ ಮಾತನಾಡಿದ್ದರು. ಗೋವಿಂದ ಅವರು ಚಿತ್ರರಂಗಕ್ಕೆ ಬಂದಾಗ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಅವರು ಒಟ್ಟಿಗೆ 70 ಸಿನಿಮಾಗೆ ಸಹಿ ಮಾಡಿದರು ಎನ್ನುವ ವದಂತಿ ಇತ್ತು. ಈ ಬಗ್ಗೆ ಅವರು ಮಾತನಾಡಿದ್ದರು.
ಬಾಲಿವುಡ್ ನಟ ಗೋವಿಂದ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇದ್ದಾರೆ. ಅವರು 1986ರಲ್ಲಿ ರಿಲೀಸ್ ಆದ ‘ಲವ್ 86’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ನಾಲ್ಕೇ ವರ್ಷಗಳಲ್ಲಿ 40 ಸಿನಿಮಾಗಳಲ್ಲಿ ನಟಿಸಿದ್ದರು. ಒಂದೇ ಸಲಕ್ಕೆ ಅವರ ಕೈಯಲ್ಲಿ ಬರೋಬ್ಬರಿ 70 ಸಿನಿಮಾಗಳು ಇದ್ದವು! ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದರು. ಒಂದೆರಡು ಸಿನಿಮಾ ಒಟ್ಟಿಗೆ ಸಹಿ ಮಾಡಿದರೆ ಅದು ಸಾಧನೆ ಎಂದುಕೊಳ್ಳುವ ಈ ಕಾಲದಲ್ಲಿ ಅವರು ಅಂದೇ ಈ ರೀತಿಯ ಸಾಧನೆ ಮಾಡಿದ್ದರು ಎಂಬುದು ವಿಶೇಷ.
ಈ ಮೊದಲು ಗೋವಿಂದ ಅವರು ಈ ಬಗ್ಗೆ ಮಾತನಾಡಿದ್ದರು. ಗೋವಿಂದ ಅವರು ಚಿತ್ರರಂಗಕ್ಕೆ ಬಂದಾಗ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಅವರು ಒಟ್ಟಿಗೆ 70 ಸಿನಿಮಾಗೆ ಸಹಿ ಮಾಡಿದರು ಎನ್ನುವ ವದಂತಿ ಇತ್ತು. ಈ ಬಗ್ಗೆ ಅವರು ಮಾತನಾಡಿದ್ದರು. ‘ನನ್ನ ಬಳಿ 70 ಸಿನಿಮಾಗಳು ಇದ್ದವು. ಇದು ನಿಜ. 8-19 ಸಿನಿಮಾಗಳು ಸೆಟ್ಟೇರಲೇ ಇಲ್ಲ. ಡೇಟ್ಸ್ ಕಾರಣಕ್ಕೆ ನಾನೇ 4-5 ಸಿನಿಮಾ ಮಾಡೋಕೆ ಆಗಿಲ್ಲ ಅವುಗಳನ್ನು ನಾನೇ ಕೈ ಬಿಟ್ಟಿದ್ದೆ’ ಎಂದು ಗೋವಿಂದ ಹೇಳಿದ್ರು.
ಗೋವಿಂದ ಅವರು ಒಪ್ಪಿಕೊಂಡ ಸಿನಿಮಾಗಳನ್ನು ಮಾಡಲು ಸಾಕಷ್ಟು ಪ್ರಯತ್ನ ಪಟ್ಟರು. ಒಂದೇ ದಿನ ಅವರು ಐದು ಸಿನಿಮಾಗಳನ್ನು ಶೂಟ್ ಮಾಡಿದ್ದು ಕೂಡ ಇದೆ. ‘ಇದು ನನ್ನ ಸಾಧನೆ ಅಲ್ಲ. ಅದು ಅದಾಗೇ ಆಯಿತು’ ಎಂದಿದ್ದರು. ‘ಲವ್ 86’ ಚಿತ್ರದಲ್ಲಿ ರೊಮ್ಯಾಂಟಿಕ್ ಕಾಮಿಡಿ ಪಾತ್ರವನ್ನು ಮಾಡಿದ್ದರು ಗೋವಿಂದ. ಅವರು ಡ್ಯಾನ್ಸ್ ಕೂಡ ಉತ್ತಮವಾಗಿ ಮಾಡುತ್ತಿದ್ದರು. ನಂತರ ಅವರು ಹಲವು ರೀತಿಯ ಪಾತ್ರಗಳನ್ನು ಒಪ್ಪಿಕೊಂಡರು.
ಇದನ್ನೂ ಓದಿ: ಮೂಢನಂಬಿಕೆಯಿಂದ ಬಾಲಿವುಡ್ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?
ಇತ್ತೀಚೆಗೆ ಗೋವಿಂದ ಅವರು ಸುದ್ದಿ ಆಗಿದ್ದರು. ಅಕ್ಟೋಬರ್ 1ರಂದು ಅವರು ಕಾಲಿಗೆ ಗುಂಡು ಹಾರಿಸಿಕೊಂಡಿದ್ದರು. ಅವರು ಕೋಲ್ಕತ್ತಾ ಹೊರಡುವವರಿದ್ದರು. ಈ ವೇಳೆ ಗನ್ನಿಂದ ಕೈ ತಪ್ಪಿ ಗುಂಡು ಹಾರಿದ್ದಾಗಿ ವರದಿ ಆಗಿತ್ತು. ಆದರೆ, ಈ ಕಥೆಯನ್ನು ಒಪ್ಪಲು ಪೊಲೀಸರು ಸಿದ್ಧರಿಲ್ಲ. ಅವರ ಕಾಲಿಗೆ 8-10 ಸ್ಟಿಚ್ಗಳನ್ನು ಹಾಕಲಾಗಿದೆ. ಸದ್ಯ ಅವರು ವಿಶ್ರಾಂತಿಯಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.