ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ಗೆ ಬೆದರಿಕೆವೊಡ್ಡಿದ್ದು ಕೂಡ ಓರ್ವ ನಟ; ಬಯಲಾಯ್ತು ಶಾಕಿಂಗ್ ವಿಚಾರ

ಮನ್ವಿಂದರ್ ವಿರುದ್ಧ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 28ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ಗೆ ಬೆದರಿಕೆವೊಡ್ಡಿದ್ದು ಕೂಡ ಓರ್ವ ನಟ; ಬಯಲಾಯ್ತು ಶಾಕಿಂಗ್ ವಿಚಾರ
ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ಗೆ ಬೆದರಿಕೆವೊಡ್ಡಿದ್ದು ಕೂಡ ಓರ್ವ ನಟ
Updated By: ರಾಜೇಶ್ ದುಗ್ಗುಮನೆ

Updated on: Jul 26, 2022 | 6:03 PM

ಕತ್ರಿನಾ ಕೈಫ್ (Katrina Kaif)  ಹಾಗೂ ವಿಕ್ಕಿ ಕೌಶಲ್​ಗೆ (Vicky Kaushal) ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಜುಲೈ 25ರಂದು ಅರೆಸ್ಟ್ ಮಾಡಲಾಗಿದೆ. ಬೆದರಿಕೆ ಹಾಕಿದ ವ್ಯಕ್ತಿ ಯಾರು ಎಂಬ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು. ಈಗ ಆ ವಿಚಾರ ರಿವೀಲ್ ಆಗಿದೆ. ಈ ರೀತಿ ಕಿಡಿಗೇಡಿತನ ಮಾಡಿದ ವ್ಯಕ್ತಿಯ ಹೆಸರು ಮನ್ವಿಂದರ್ ಸಿಂಗ್. ಅವರು ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ವೃತ್ತಿಜೀವನದ ಆರಂಭದಲ್ಲೇ ಕಪ್ಪುಚುಕ್ಕೆ ಬಿದ್ದಿದೆ.

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಮದುವೆ ಆಗಿ ಹಲವು ತಿಂಗಳು ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಮಧ್ಯೆ ದಂಪತಿಗೆ ಬೆದರಿಕೆ ಬಂದಿದ್ದು ಸಾಕಷ್ಟು ಆತಂಕ ಮೂಡಿಸಿತ್ತು. ಈ ಬೆನ್ನಲ್ಲೇ ದಂಪತಿಗಳು ಪೊಲೀಸ್ ಠಾಣೆಗೆ ದೂರು ನೀಡಿದರು. ಈ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿ, ಮನ್ವಿಂದರ್ ಅವರನ್ನು ಬಂಧಿಸಿದ್ದಾರೆ.

ಮನ್ವಿಂದರ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅಚ್ಚರಿ ಎಂದರೆ ಮನ್ವಿಂದರ್ ಅವರು ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ. ಮನ್ವಿಂದರ್​ಗೆ ಕತ್ರಿನಾ ಕೈಫ್ ಅವರನ್ನು ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಕತ್ರಿನಾ ಜತೆ ನಿಂತಿರುವ ರೀತಿಯಲ್ಲಿ ಫೋಟೋಗಳನ್ನು ಎಡಿಟ್ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಕಳೆದ ಕೆಲ ತಿಂಗಳಿಂದ ಕತ್ರಿನಾಗೆ ಮನ್ವಿಂದರ್ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು. ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನು ಕತ್ರಿನಾ ಕೈಫ್ ನಿರ್ಲಕ್ಷ್ಯ ಮಾಡಿದ್ದರು. ಆದರೆ, ಯಾವಾಗ ಕೊಲೆ ಬೆದರಿಕೆ ಬಂತೋ ಆಗ ಅಲರ್ಟ್​ ಆಗಿದ್ದಾರೆ.

ಇದನ್ನೂ ಓದಿ
Katrina Kaif: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಕೊಲೆ ಬೆದರಿಕೆ; ಕೇಸ್​ ದಾಖಲಿಸಿ ತನಿಖೆ ಆರಂಭಿಸಿದ ಮುಂಬೈ ಪೊಲೀಸರು
Swara Bhaskar: ಸಲ್ಮಾನ್​ ಖಾನ್​ ಬಳಿಕ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ; ಸಾವರ್ಕರ್​ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಪ್ರಕರಣ; ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆ
‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ

ಮನ್ವಿಂದರ್ ವಿರುದ್ಧ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 28ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಪೊಲೀಸರು ಸದ್ಯ ಮನ್ವಿಂದರ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?

ಕತ್ರಿನಾ ಕೈಫ್ ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದರು. ವಿಕ್ಕಿ ಕೌಶಲ್ ಹಾಗೂ ಕುಟುಂಬದ ಜತೆ ವಿದೇಶಕ್ಕೆ ಹಾರಿದ್ದರು. ಮಾಲ್ಡೀವ್ಸ್​ನಲ್ಲಿ ಹಾಯಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಕತ್ರಿನಾ ಅವರು ಶೇರ್ ಮಾಡಿಕೊಂಡಿದ್ದರು.