AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಬರ್ ಕೊಡಿ, ಕಾಲ್ ಮಾಡ್ತೀನಿ’; ಲಾರೆನ್ಸ್ ಬಿಷ್ಣೋಯ್​ಗೆ ಸಲ್ಲು ಮಾಜಿ ಗೆಳತಿಯ ಸವಾಲ್

ಲಾರೆನ್ಸ್ ಬಿಷ್ಣೋಯ್ ಓರ್ವ ಗ್ಯಾಂಗ್​ಸ್ಟರ್​. ಆತ ಜೈಲಿನಲ್ಲಿದ್ದುಕೊಂಡೇ ಎಲ್ಲವನ್ನೂ ಪ್ಲ್ಯಾನ್ ಮಾಡುತ್ತಿದ್ದಾನೆ. ಆತ ಸಲ್ಮಾನ್ ಖಾನ್​ನ ಮುಗಿಸುವ ಆಲೋನಚೆಯಲ್ಲಿ ಇದ್ದಾನೆ. ಇದು ಸೋಮಿಗೆ ಇಷ್ಟ ಆಗಿಲ್ಲ. ಅವರು ಲಾರೆನ್ಸ್ ಬಿಷ್ಣೋಯ್​ನ ಫೋಟೋ ಹಂಚಿಕೊಂಡು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.  

‘ನಂಬರ್ ಕೊಡಿ, ಕಾಲ್ ಮಾಡ್ತೀನಿ’; ಲಾರೆನ್ಸ್ ಬಿಷ್ಣೋಯ್​ಗೆ ಸಲ್ಲು ಮಾಜಿ ಗೆಳತಿಯ ಸವಾಲ್
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Oct 17, 2024 | 1:06 PM

Share

ಸೋಮಿ ಅಲಿ ಅವರು ಸಲ್ಮಾನ್ ಖಾನ್ ಜೊತೆ ಒಂದು ಕಾಲದಲ್ಲಿ ಡೇಟ್ ಮಾಡಿದ್ದರು. ಆದರೆ ಇವರ ಸಂಬಂಧ ಮದುವೆವರೆಗೆ ಹೋಗಲಿಲ್ಲ. ಆದರೆ, ಸಲ್ಮಾನ್ ಖಾನ್ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಈಗ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್​ಗೆ ಸೋಮಿ ಅಲಿ ಅವರು ಓಪನ್ ಚಾಲೆಂಜ್ ಹಾಕಿದ್ದಾರೆ. ‘ನಿಮ್ಮ ಮೊಬೈಲ್ ಸಂಖ್ಯೆ ಕೊಡಿ, ವಿಡಿಯೋ ಕಾಲ್ ಮಾಡ್ತೀನಿ’ ಎಂದಿದ್ದಾರೆ ಅವರು.

ಲಾರೆನ್ಸ್ ಬಿಷ್ಣೋಯ್ ಓರ್ವ ಗ್ಯಾಂಗ್​ಸ್ಟರ್​. ಆತ ಜೈಲಿನಲ್ಲಿದ್ದುಕೊಂಡೇ ಎಲ್ಲವನ್ನೂ ಪ್ಲ್ಯಾನ್ ಮಾಡುತ್ತಿದ್ದಾನೆ. ಆತ ಸಲ್ಮಾನ್ ಖಾನ್​ನ ಮುಗಿಸುವ ಆಲೋನಚೆಯಲ್ಲಿ ಇದ್ದಾನೆ. ಇದು ಸೋಮಿಗೆ ಇಷ್ಟ ಆಗಿಲ್ಲ. ಅವರು ಲಾರೆನ್ಸ್ ಬಿಷ್ಣೋಯ್​ನ ಫೋಟೋ ಹಂಚಿಕೊಂಡು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

‘ಇದು ಲಾರೆನ್ಸ್ ಬಿಷ್ಣೋಯ್​ಗೆ ನೇರ ಸಂದೇಶ. ಸಹೋದರ ಲಾರೆನ್ಸ್ ಅವರೇ, ನೀವು ಜೈಲಿನಲ್ಲಿ ಇದ್ದುಕೊಂಡೇ ಜೂಮ್ ಕಾಲ್ ಮಾಡುತ್ತಿದ್ದೀರಿ ಎಂದು ಗೊತ್ತಾಯಿತು. ನಾನು ನಿಮ್ಮ ಜೊತೆ ಮಾತನಾಡಬೇಕು. ಇದನ್ನು ಮಾಡಲು ಹೇಗೆ ಸಾಧ್ಯ’ ಎಂದು ಸೋಮಿ ಪ್ರಶ್ನೆ ಮಾಡಿದ್ದಾರೆ.

‘ಇಡೀ ವಿಶ್ವದಲ್ಲಿ ರಾಜಸ್ಥಾನ ನನ್ನ ಫೇವರಿಟ್ ಜಾಗ. ನಾನು ನಿಮ್ಮ ದೇವಸ್ಥಾನಕ್ಕೆ ಪೂಜೆ ಮಾಡಲು ಬರಬೇಕು. ಮೊದಲು ಜೂಮ್​ ಕಾಲ್​ನಲ್ಲಿ ಮಾತನಾಡೋಣ. ಪೂಜೆಯ ಬಳಿಕ ಮತ್ತಷ್ಟು ಮಾತಾಡೋಣ. ಈ ಮಾತುಕತೆಯಿಂದ ನಿಮಗೆ ಲಾಭ ಇದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಹಂಚಿಕೊಂಡರೆ ಅದರಿಂದ ಉಪಕಾರವಾಗುತ್ತದೆ, ಧನ್ಯವಾದಗಳು’ ಎಂದಿದ್ದಾರೆ ಅವರು.

View this post on Instagram

A post shared by Somy Ali (@realsomyali)

ಎನ್​ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಯಿತು. ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದೆ. ಸಲ್ಮಾನ್ ಖಾನ್​ಗೆ ಆಪ್ತವಾಗಿರುವ ಕಾರಣಕ್ಕೆ ಬಾಬಾ ಅವರನ್ನು ಹತ್ಯೆ ಮಾಡಲಾಗಿದೆ. ಇದರಿಂದ ಅವರಿಗೆ ಭಯ ಹೆಚ್ಚಿದೆ.

ಇದನ್ನೂ ಓದಿ: ‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್​ಜಿವಿ

ಸಲ್ಮಾನ್ ಖಾನ್ ಅವರ ಪರವಾಗಿ ಸೋಮಿ ಮಾತನಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಅವರು ಸಲ್ಮಾನ್ ಖಾನ್ ಪರವಾಗಿ ಕ್ಷಮೆ ಕೇಳಿದ್ದರು. ಆದರೆ, ಈ ಕ್ಷಮೆಯನ್ನು ಬಿಷ್ಣೋಯ್ ಗ್ಯಾಂಗ್​ನವರು ಒಪ್ಪಿಕೊಂಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.