AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರ ಜನಪ್ರಿಯತೆ ಹೆಚ್ಚಾಗಿದೆ. ಒಂದು ಮುಖ್ಯ ಪಾತ್ರ ಮಾಡಿರುವ ರಾಕೇಶ್ ಬೇಡಿ ಅವರಿಗೆ ಒಂದು ಕೋಟಿ ರೂಪಾಯಿ ಬೋಸನ್ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು
Rakesh Bedi
ಮದನ್​ ಕುಮಾರ್​
|

Updated on: Apr 23, 2026 | 9:19 PM

Share

ಹಿಂದಿ ಚಿತ್ರರಂಗದ ಇತ್ತೀಚಿನ ಬ್ಲಾಕ್‌ಬಸ್ಟರ್ ಚಿತ್ರಗಳಾದ ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ (Dhurandhar 2) ಯಶಸ್ಸು ಇಡೀ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದೆ. ಈ ಪೈಕಿ ಹಿರಿಯ ನಟ ರಾಕೇಶ್ ಬೇಡಿ ಅವರ ನಟನೆಗೆ ಫಿದಾ ಆಗಿರುವ ನಿರ್ಮಾಪಕರು, ಅವರಿಗೆ ನಿಗದಿ ಆಗಿದ್ದ ಸಂಭಾವನೆಗಿಂತಲೂ ಹೆಚ್ಚಿನ ಮೊತ್ತವನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇದರಿಂದಾಗಿ ರಾಕೇಶ್ ಬೇಡಿ (Rakesh Bedi) ಅವರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಬೋನಸ್ ಸಿಕ್ಕಂತೆ ಆಗಿದೆ.

ರಣವೀರ್ ಸಿಂಗ್ ನಾಯಕರಾಗಿ ನಟಿಸಿರುವ ಈ ಸ್ಪೈ ಥ್ರಿಲ್ಲರ್ ಸರಣಿಯಲ್ಲಿ ರಾಕೇಶ್ ಬೇಡಿ ಅವರು ಪಾಕಿಸ್ತಾನದ ಚಾಣಾಕ್ಷ ರಾಜಕಾರಣಿ ಜಮೀಲ್ ಜಮಾಲಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಮತ್ತು ಗಂಭೀರ ನಟನೆಯ ಮಿಶ್ರಣ ಪ್ರೇಕ್ಷಕರಿಗೆ ಇಷ್ಟವಾಗಿದೆ. ವಿಶೇಷವೆಂದರೆ, ಅವರ ಸಂಭಾಷಣೆಗಳು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್‌ ಮೂಲಕ ಭಾರಿ ವೈರಲ್ ಆಗಿವೆ. ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.

‘ಬಾಲಿವುಡ್ ಹಂಗಾಮಾ’ ವರದಿಯ ಪ್ರಕಾರ, ರಾಕೇಶ್ ಬೇಡಿ ಅವರಿಗೆ ‘ಧುರಂಧರ್’ ಮತ್ತು ಅದರ ಸೀಕ್ವೆಲ್‌ಗಾಗಿ ಒಟ್ಟು 50 ಲಕ್ಷ ರೂಪಾಯಿ ಸಂಭಾವನೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ಮಾಪಕ ಲೋಕೇಶ್ ಧರ್ ಅವರು ರಾಕೇಶ್ ಬೇಡಿ ಅವರಿಗೆ 1 ಕೋಟಿ ರೂಪಾಯಿಗಳ ಹೆಚ್ಚುವರಿ ಚೆಕ್ ಹಸ್ತಾಂತರಿಸಿದ್ದಾರೆ. ಅಂದರೆ, ಅವರು ಪಡೆದ ಸಂಭಾವನೆಗಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ಬೋನಸ್ ರೂಪದಲ್ಲಿ ನೀಡಲಾಗಿದೆ.

‘ಜಮೀಲ್ ಜಮಾಲಿ ಪಾತ್ರವನ್ನು ರಾಕೇಶ್ ಬೇಡಿ ಅವರು ಜೀವಿಸಿದ್ದಾರೆ. ಅವರ ಪರಿಶ್ರಮ ಮತ್ತು ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಕಂಡು ನಿರ್ಮಾಪಕರು ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಆಗಿದೆ. ಆದಿತ್ಯ ಧರ್ ಅವರು ಕೇವಲ ಯಶಸ್ವಿ ನಿರ್ದೇಶಕ ಮಾತ್ರವಲ್ಲದೆ, ಉದಾರ ಮನಸ್ಸಿನ ನಿರ್ಮಾಪಕರೂ ಹೌದು ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?

‘ಜಿಯೋ ಸ್ಟುಡಿಯೋಸ್’ ಮತ್ತು ‘B62 ಸ್ಟುಡಿಯೋಸ್’ ಜಂಟಿಯಾಗಿ ನಿರ್ಮಾಣ ಮಾಡಿದ ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್ ಮುಂತಾದ ಘಟಾನುಘಟಿ ನಟರು ಕಾಣಿಸಿಕೊಂಡಿದ್ದರು. ಇದರ ಸೀಕ್ವೆಲ್ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡೂ ಸಿನಿಮಾಗಳಿಂದ ವಿಶ್ವಾದ್ಯಂತ 3 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us