ಮತ್ತೊಂದು ಮಲ್ಟಿಸ್ಟಾರರ್​ನಲ್ಲಿ ರಾಮ್ ಚರಣ್, ಈ ಬಾರಿ ಬಾಲಿವುಡ್ ನಟನೊಟ್ಟಿಗೆ ‘ನಾಟು-ನಾಟು’

Ram Charan: ಆರ್​ಆರ್​ಆರ್ ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸಿ ಗ್ಲೋಬಲ್ ಸ್ಟಾರ್ ಆದ ರಾಮ್ ಚರಣ್ ಈಗ ಮತ್ತೊಂದು ಮಲ್ಟಿಸ್ಟಾರರ್​​ಗೆ ಕೈ ಹಾಕಿದ್ದಾರೆ. ಸಿನಿಮಾದಲ್ಲಿ ಅವರು ಬಾಲಿವುಡ್ ನಟ-ನಟಿಯರ ಜೊತೆ ಕೈ ಜೋಡಿಸಿದ್ದಾರೆ.

ಮತ್ತೊಂದು ಮಲ್ಟಿಸ್ಟಾರರ್​ನಲ್ಲಿ ರಾಮ್ ಚರಣ್, ಈ ಬಾರಿ ಬಾಲಿವುಡ್ ನಟನೊಟ್ಟಿಗೆ 'ನಾಟು-ನಾಟು'
ರಾಮ್ ಚರಣ್
Follow us
ಮಂಜುನಾಥ ಸಿ.
|

Updated on: Jul 02, 2023 | 10:05 PM

ಆರ್​ಆರ್​ಆರ್ (RRR) ಸಿನಿಮಾ ಮೂಲಕ ರಾಮ್ ಚರಣ್ ತೇಜ (Ram Charan Teja) ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆರ್​ಆರ್​ಆರ್ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ (Jr NTR) ಅವರ ಜೋಡಿಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆರ್​ಆರ್​ಆರ್​ ಸಿನಿಮಾ ಮೂಲಕ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಅಂಥಹಾ ದೊಡ್ಡ ಸ್ಟಾರ್​ ನಟರನ್ನು ಒಟ್ಟಿಗೆ ಕರೆತಂದು ಯಾರೊಬ್ಬರ ಅಭಿಮಾನಿಗಳಿಗೂ ನೋವಾಗದಂತೆ ಸಿನಿಮಾ ಮಾಡಬಹುದು ಎಂದು ರಾಜಮೌಳಿ ತೋರಿಸಿಕೊಟ್ಟಿದ್ದು, ಇದೀಗ ಹಲವು ಚಿತ್ರರಂಗಗಳಲ್ಲಿ ಮಲ್ಟಿಸ್ಟಾರರ್ (Multistarrer) ಸಿನಿಮಾಗಳು ತೆರೆಗೆ ಏರುತ್ತಿವೆ. ಇದರ ನಡುವೆ ಸ್ವತಃ ರಾಮ್​ ಚರಣ್ ಹೊಸ ಮಲ್ಟಿಸ್ಟಾರರ್ ಸಿನಿಮಾಕ್ಕೆ ಕೈ ಹಾಕಿದ್ದು ಈ ಬಾರಿ ಅವರಿಗೆ ಬಾಲಿವುಡ್​ ನಟರೊಬ್ಬರು ಸಾಥ್ ನೀಡಿದ್ದಾರೆ.

ಗ್ಲೋಬಲ್ ಸ್ಟಾರ್ ಆಗಿರುವ ರಾಮ್ ಚರಣ್ ಇದೀಗ ಮತ್ತೊಮ್ಮೆ ಬಾಲಿವುಡ್​ಗೆ ಹೋಗುತ್ತಿದ್ದು, ಬಾಲಿವುಡ್​ನ ಸ್ಟಾರ್ ನಟನೊಟ್ಟಿಗೆ ಮಲ್ಟಿಸ್ಟಾರರ್ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ನಟ ರಣ್ವೀರ್ ಸಿಂಗ್ ಹಾಗೂ ರಾಮ್ ಚರಣ್ ಒಟ್ಟಿಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಭಾರಿ ಬಜೆಟ್​ನ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ನಿರ್ಮಿಸಲಾಗುತ್ತಿದೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಪತ್ನಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಅವರ ಜೊತೆಗೆ ನಟಿ ತ್ರಿಶಾ ಸಹ ಸಿನಿಮಾದ ನಾಯಕಿಯಾಗಿರಲಿದ್ದಾರೆ ಎನ್ನಲಾಗುತ್ತಿದೆ.

ಈ ಸಿನಿಮಾದ ಕುರಿತಾಗಿ ಸಣ್ಣ ವಿಡಿಯೋ ಸಹ ಈಗಾಗಲೇ ಬಿಡುಗಡೆ ಆಗಿದೆ. ವಿಡಿಯೋದಲ್ಲಿ ದೀಪಿಕಾ ಪಡುಕೋನೆ, ಪೊಲೀಸರ ಬಳಿ ಪತಿ ಕಳೆದು ಹೋಗಿರುವ ಬಗ್ಗೆ ದೂರು ನೀಡುತ್ತಿರುತ್ತಾಳೆ. ರಣ್ವೀರ್ ಸಿಂಗ್ ಯಾರೋ ದುಷ್ಟನನ್ನು ಫಾಲೋ ಮಾಡುತ್ತಾ ಹೋಗುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ ಸರಣಿಯ ಚೆಲ್ಲಮ್ ಸರ್, ಕಂಟ್ರೋಲ್ ರೂಂನಲ್ಲಿದ್ದು ಏಜೆಂಟ್​ ಅನ್ನು ಮಿಷನ್​ಗೆ ಕಳಿಸುತ್ತಿದ್ದಾರೆ. ರಾಮ್ ಚರಣ್ ಹಳದಿ ಬಣ್ಣದ ಶರ್ಟ್ ತೊಟ್ಟು ಯಾವುದೋ ಸಣ್ಣ ಗಲ್ಲಿಯೊಳಗೆ ಜನರ ಮಧ್ಯೆ ಯಾರನ್ನೋ ಹಿಡಿಯಲು ಓಡುತ್ತಿದ್ದಾರೆ. ನಟಿ ತ್ರಿಷಾ, ಪೊಲೀಸ್ ಠಾಣೆಗೆ ಬಂದಿದ್ದು ಪೊಲೀಸರ ಮಧ್ಯೆ ದಿಕ್ಕೇ ತೋಚದಂತಾಗಿದ್ದಾರೆ. ಕೊನೆಯಲ್ಲಿ ರಣ್ವೀರ್ ವ್ಯಕ್ತಿಯೊಬ್ಬನ ಕೊರಳು ಪಟ್ಟಿ ಹಿಡಿದು ಸತ್ಯ ಹೇಳುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ:ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟ ರಾಮ್ ಚರಣ್-ಉಪಾಸನಾ: ಹೆಸರಿನ ಅರ್ಥವೇನು?

ಈ ನಾಲ್ಕು ಸ್ಟಾರ್ ನಟ-ನಟಿಯರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಕ್ಕಾಗಿ ಒಂದಾಗಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಹೆಸರು ಶೋ ಮೀ ದಿ ಸೀಕ್ರೆಟ್ ಎಂದಾಗಿದೆ. ಆದರೆ ಇನ್ನು ಕೆಲವರು ಇದು ಸಿನಿಮಾ ಅಲ್ಲ ಬದಲಿಗೆ ಜಾಹೀರಾತು ಮಾತ್ರವೇ ಎಂದು ಸಹ ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೆ ಮಾಹಿತಿ ಹೊರಬೀಳಬೇಕಿದೆ. ಪ್ರಸ್ತುತ ವಿಡಿಯೋವನ್ನು ರಣ್ವೀರ್ ಸಿಂಗ್ ಸೇರಿದಂತೆ ಇನ್ನು ಕೆಲವರು ಹಂಚಿಕೊಂಡಿದ್ದಾರೆ.

ರಣ್ವೀರ್ ಸಿಂಗ್ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕರಣ್ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಆಲಿಯಾ ಭಟ್ ಈ ಸಿನಿಮಾದ ನಾಯಕಿ. ಇನ್ನು ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿ ರಾಮ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ದೀಪಿಕಾ ಪಡುಕೋಣೆ, ಹೃತಿಕ್ ಜೊತೆ ಫೈಟರ್, ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತ್ರಿಷಾ, ವಿಜಯ್ ಜೊತೆ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲವು ತೆಲುಗು ಹಾಗೂ ತಮಿಳು ಸಿನಿಮಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್