AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವಿಮಾನದಲ್ಲಿ ಕ್ಯಾಲಿಫೋರ್ನಿಯಾಗೆ ಹೊರಟ ಯಶ್ ಮತ್ತು ರಣಬೀರ್ ಕಪೂರ್

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಭರ್ಜರಿ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 24ರಂದು ಟ್ರೇಲರ್ ಲಾಂಚ್ ಆಗಲಿದೆ. ಇದಕ್ಕೂ ಮುನ್ನ ಚಿತ್ರದ ವಿಶೇಷ ಝಲಕ್ ಪ್ರದರ್ಶಿಸಲು ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಣಬೀರ್ ಕಪೂರ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ಗೆ ತೆರಳಿದ್ದಾರೆ.

ಒಂದೇ ವಿಮಾನದಲ್ಲಿ ಕ್ಯಾಲಿಫೋರ್ನಿಯಾಗೆ ಹೊರಟ ಯಶ್  ಮತ್ತು ರಣಬೀರ್ ಕಪೂರ್
ರಣಬೀರ್​-ಯಶ್
ರಾಜೇಶ್ ದುಗ್ಗುಮನೆ
|

Updated on:Jul 24, 2026 | 7:34 AM

Share

ಮುಖ್ಯಾಂಶಗಳು

  • ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ
  • ಕ್ಯಾಲಿಫೋರ್ನಿಯಾಗೆ ಹಾರಿದ ಯಶ್-ರಣಬೀರ್ ಕಪೂರ್
  • ಜುಲೈ 24ಕ್ಕೆ ಅದ್ದೂರಿ ಟ್ರೇಲರ್ ಬಿಡುಗಡೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Movie) ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈಗ ಚಿತ್ರತಂಡ ಭರ್ಜರಿ ಟ್ರೇಲರ್ ಲಾಂಚ್ ಮಾಡಲು ರೆಡಿಯಾಗಿದೆ. ಜುಲೈ 24ರಂದು ಚಿತ್ರದ ಅದ್ದೂರಿ ಟ್ರೇಲರ್ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ ಈವೆಂಟ್ ಅಟೆಂಡ್ ಮಾಡಲು ಯಶ್ ಹಾಗೂ ರಣಬೀರ್ ಕಪೂರ್ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈನಿಂದ ಹೊರಟ ಸ್ಟಾರ್ ನಟರು

ಬುಧವಾರ (ಜುಲೈ 22) ಮುಂಜಾನೆ ರಣಬೀರ್ ಕಪೂರ್ ಮತ್ತು ಯಶ್ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಸ್ಟಾರ್ ನಟರು ಕ್ಯಾಲಿಫೋರ್ನಿಯಾಗೆ ತೆರಳುತ್ತಿದ್ದಾರೆ. ಅಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಲಿದ್ದಾರೆ. ಟ್ರೇಲರ್ ರಿಲೀಸ್ ಆಗುವ ಮುನ್ನವೇ ಈ ವೇದಿಕೆಯಲ್ಲಿ ಸಿನಿಮಾದ ದೃಶ್ಯಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಬಿಗ್ ಸ್ಟೇಜ್‌ನಲ್ಲಿ ‘ರಾಮಾಯಣ’ ಗ್ಲಿಂಪ್ಸ್

ನಟರ ಜೊತೆಗೆ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಈ ಕಾರ್ಯಕ್ರಮದಲ್ಲಿ ಜಂಟಿಯಾಗಲಿದ್ದಾರೆ. ಜುಲೈ 23ರಂದು ಅಲ್ಲಿನ ಬಾಲ್‌ರೂಮ್ 20ರಲ್ಲಿ ರಾಮಾಯಣ ಚಿತ್ರದ ಪ್ಯಾನಲ್ ಡಿಸ್ಕಷನ್ ನಡೆಯಲಿದೆ. ಇದು ಬರೋಬ್ಬರಿ 4,800 ಆಸನಗಳ ಸಾಮರ್ಥ್ಯ ಹೊಂದಿರುವ ಬೃಹತ್ ವೇದಿಕೆಯಾಗಿದೆ.ಇಲ್ಲಿ ಭಾಗವಹಿಸುವ ಪ್ರೇಕ್ಷಕರಿಗೆ ಸಿನಿಮಾದ ಮೊದಲ ಝಲಕ್ ನೋಡುವ ಸುವರ್ಣಾವಕಾಶ ಸಿಗಲಿದೆ. ಈ ವರ್ಷದ ಕಾಮಿಕ್ ಕಾನ್‌ನಲ್ಲಿ ಭಾರತದ ಪರವಾಗಿ ನಡೆಯುತ್ತಿರುವ ಅತಿ ದೊಡ್ಡ ಪ್ರೆಸೆಂಟೇಷನ್ ಇದಾಗಿದೆ.

ಇದನ್ನೂ ಓದಿ: ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಎಂಟ್ರಿ; ಇಲ್ಲಿದೆ ‘ರಾಮಾಯಣ’ ಕಲಾವಿದರ ಫುಲ್ ಲಿಸ್ಟ್

ದೀಪಾವಳಿಗೆ ಸಿನಿಮಾ ರಿಲೀಸ್

‘ರಾಮಾಯಣ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ರವಿ ದುಬೆ ಮತ್ತು ಕುನಾಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ ಈ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸಗಳನ್ನು ಮಾಡುತ್ತಿದೆ. 2026ರ ದೀಪಾವಳಿ ಹಬ್ಬಕ್ಕೆ ಸಿನಿಮಾ ಥಿಯೇಟರ್‌ಗಳಿಗೆ ಬರಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ? ಉತ್ತರ: ದೀಪಾವಳಿ

ಪ್ರಶ್ನೆ: ಯಶ್ ಪಾತ್ರವೇನು? ಉತ್ತರ: ರಾವಣನ ಪಾತ್ರ

ಪ್ರಶ್ನೆ: ರಾಮಾಯಣ ಬಜೆಟ್ ಎಷ್ಟು ಉತ್ತರ: 4000 ಕೋಟಿ ರೂಪಾಯಿ

Published On - 10:55 am, Wed, 22 July 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ