‘ಉರ್ಫಿ ಜಾವೇದ್​ಗೆ ಕೆಟ್ಟ ಟೇಸ್ಟ್​ ಇದೆ’; ಓಪನ್ ಆಗಿ ಹೇಳಿದ ನಟ ರಣಬೀರ್ ಕಪೂರ್

|

Updated on: Mar 20, 2023 | 9:47 AM

ರಣಬೀರ್ ಕಪೂರ್ ಅವರಿಗೆ ಫನ್​ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಮುಖನ ಮರೆ ಮಾಡಿರಲಾಗುತ್ತದೆ. ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದರು.

‘ಉರ್ಫಿ ಜಾವೇದ್​ಗೆ ಕೆಟ್ಟ ಟೇಸ್ಟ್​ ಇದೆ’; ಓಪನ್ ಆಗಿ ಹೇಳಿದ ನಟ ರಣಬೀರ್ ಕಪೂರ್
ಉರ್ಫಿ
Follow us on

ನಟಿ ಉರ್ಫಿ ಜಾವೇದ್ (Urfi Javed) ಹಾವಳಿ ಮಿತಿಮೀರಿದೆ. ಅವರು ಹಾಕುವ ಬಟ್ಟೆಯ ನೋಡಿ ಅನೇಕರು ಅಸಹ್ಯಪಟ್ಟುಕೊಳ್ಳುತ್ತಾರೆ. ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ, ಉರ್ಫಿ ಮಾತ್ರ ಈ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಅವರು ನಿತ್ಯ ಚಿತ್ರ ವಿಚಿತ್ರ ಬಟ್ಟೆ ಹಾಕುವುದನ್ನು ಮುಂದುವರಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಿದೆ. ಈಗ ರಣಬೀರ್ ಕಪೂರ್ (Ranabir Kapoor) ಅವರು ಉರ್ಫಿಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕೆ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಉರ್ಫಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಣಬೀರ್ ಕಪೂರ್ ಅವರು ಕರೀನಾ ಕಪೂರ್ ಶೋಗೆ ಬಂದಿದ್ದರು. ಈ ವೇಳೆ ಅವರಿಗೆ ಫನ್​ಗೇಮ್ ನೀಡಲಾಯಿತು. ಕೆಲ ಸೆಲೆಬ್ರಿಟಿಗಳ ಫೋಟೋನ ತೋರಿಸಲಾಗುತ್ತದೆ. ಅಲ್ಲಿ ಸೆಲೆಬ್ರಿಟಿ ಮುಖನ ಮರೆ ಮಾಡಿರಲಾಗುತ್ತದೆ. ಅವರ ದೇಹ ಹಾಗೂ ಬಟ್ಟೆ ನೋಡಿ ಆ ಸೆಲೆಬ್ರಿಟಿ ಯಾರು ಎಂದು ಗುರುತಿಸಬೇಕು. ರಣಬೀರ್ ಕಪೂರ್ ಅವರು ಉರ್ಫಿನ ಗುರುತಿಸಿದರು.

ಇದನ್ನೂ ಓದಿ: Urfi Javed: ಕುತ್ತಿಗೆ ತನಕ ಪ್ಯಾಂಟ್​ ಧರಿಸಿ ಬಂದ ಉರ್ಫಿ ಜಾವೇದ್​; ವಿಚಿತ್ರ ಅವತಾರದ ಫೋಟೋ ವೈರಲ್​

‘ನಾನು ಉರ್ಫಿ ಜಾವೇದ್ ಅವರ ಅಭಿಮಾನಿ ಅಲ್ಲ’ ಎಂದು ರಣಬೀರ್ ಹೇಳಿದ್ದಾರೆ. ಅವರ ಬಗ್ಗೆ ಒಂದು ಮಾತಿನಲ್ಲಿ ಉತ್ತರ ನೀಡುವಂತೆ ಕೇಳಲಾಯಿತು. ಇದಕ್ಕೆ ‘ಬ್ಯಾಡ್ ಟೇಸ್ಟ್​’ ಎಂದು ಕರೆದರು ರಣಬೀರ್. ಇನ್ನು ಪ್ರಿಯಾಂಕಾ ಚೋಪ್ರಾ ಅವರ ಫೋಟೋ ತೋರಿಸಲಾಯಿತು. ಈ ವೇಳೆ ಅವರ ಡ್ರೆಸ್ಸಿಂಗ್​ ಸೆನ್ಸ್​​ನ ರಣಬೀರ್ ಹೊಗಳಿದರು.

ಇದನ್ನೂ ಓದಿ:Urfi Javed: ‘ಇಂಥ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಅಂತ ಹಿಂದೂಗಳು ಮನೆ ಕೊಡಲ್ಲ’: ಉರ್ಫಿ

ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಹಿಂದಿ ಒಟಿಟಿ’ ಮೂಲಕ ಜನಪ್ರಿಯತೆ ಪಡೆದರು. ಅವರ ಖ್ಯಾತಿ ಹೆಚ್ಚಿದ್ದು ಇದೇ ಶೋನಿಂದ. ಈ ಶೋನಲ್ಲಿ ಕಸದ ಚೀಲದಿಂದ ದೇಹವನ್ನು ಮುಚ್ಚಿಕೊಂಡಿದ್ದರು. ಅಲ್ಲಿ ಅವರು ಫೇಮಸ್ ಆದ ಬಳಿಕ ಹೊರಗೂ ಇದನ್ನೇ ಮುಂದುವರಿಸಿದರು. ಈಗ ನಟನೆ ಬಿಟ್ಟು ಸಂಪೂರ್ಣವಾಗಿ ಇದೇ ರೀತಿಯ ಕೆಲಸ ಮಾಡುತ್ತಿದ್ದಾರೆ. ಸ್ಟಾರ್​ ನಟನೋರ್ವ ಉರ್ಫಿ ಜಾವೇದ್ ಬಗ್ಗೆ ಕಮೆಂಟ್ ಮಾಡಿದ್ದು ಇದೇ ಮೊದಲು.

ಇದನ್ನೂ ಓದಿ: Ranbir Kapoor: ‘ಅನಿಮಲ್​’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ರಗಡ್​ ಅವತಾರದಲ್ಲಿ ರಣಬೀರ್​ ಕಪೂರ್​

ರಣಬೀರ್ ಕಪೂರ್ ಅವರು ವರ್ಷದ ಆರಂಭದಲ್ಲೇ ಯಶಸ್ಸು ಕಂಡಿದ್ದಾರೆ. ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದಿಂದ ರಣಬೀರ್ ಯಶಸ್ಸು ಹೆಚ್ಚಿದೆ. ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಒಟ್ಟಾಗಿ ನಟಿಸುತ್ತಿರುವ ‘ಅನಿಮಲ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವರ್ಷವೇ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Mon, 20 March 23