ಗಣೇಶನ ನೋಡುವ ವೇಳೆ ರಶ್ಮಿಕಾ ಮಂದಣ್ಣ ದೇಹ ಕಾಣಿಸುವ ಬಟ್ಟೆ ಧರಿಸಿದ್ದೇ ತಪ್ಪಾಯ್ತು
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ ‘ಗುಡ್ಬೈ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಮಹಿಳಾ ಸೆಲೆಬ್ರಿಟಿಗಳು ಮನೆಯಿಂದ ಹೊರ ಬಿದ್ದರೆ ಸಾಕು, ಗ್ಲಾಮರ್ ಅವತಾರ ತಾಳಲು ಇಷ್ಟಪಡುತ್ತಾರೆ. ಸಿನಿಮಾ ಸೆಲೆಬ್ರಿಟಿ ಶೋ, ಟ್ರೇಲರ್ ಲಾಂಚ್, ಟೀಸರ್ ರಿಲೀಸ್ ಕಾರ್ಯಕ್ರಮಗಳಿಗೆ ಸಖತ್ ಬೋಲ್ಡ್ ಆಗಿ ಬರುವ ಅನೇಕ ನಟಿಯರು ಇದ್ದಾರೆ. ಆದರೆ, ಇದು ಎಲ್ಲ ಸಂದರ್ಭದಲ್ಲಿಯೂ ಜನರಿಗೆ ಇಷ್ಟ ಆಗುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋಗುವಾಗ ಟ್ರೆಡಿಷನಲ್ ಡ್ರೆಸ್ ಹಾಕಿ ಬಂದರೆ ಉತ್ತಮ. ಅಲ್ಲಿಯೂ ದೇಹ ಕಾಣಿಸುವ ಬಟ್ಟೆ ಧರಿಸಿದರೆ ಜನರು ಆಕ್ರೋಶಗೊಳ್ಳೋದು ಪಕ್ಕಾ. ಈಗ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಇದೇ ತಪ್ಪನ್ನು ಮಾಡಿದ್ದಾರೆ. ಇದರಿಂದ ಅವರು ಟೀಕೆ ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ ‘ಗುಡ್ಬೈ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗಿಯಾಗಿದ್ದರು. ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಟ್ರೇಲರ್ ಲಾಂಚ್ ಕಾರ್ಯಕ್ರಮದ ಬಳಿಕ ರಶ್ಮಿಕಾ ಮಂದಣ್ಣ ಅವರು ಅಲ್ಲಿಯೇ ಸಮೀಪದಲ್ಲಿ ಇರುವ ಗಣಪತಿ ದರ್ಶನಕ್ಕೆ ತೆರಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಅವರ ಉಡುಗೆ ನೋಡಿ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ದೇವರನ್ನು ನೋಡಲು ಈ ರೀತಿಯ ಬಟ್ಟೆ ಧರಿಸಿ ಬರುವುದು ಬೇಕಿತ್ತೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ‘ಗುಡ್ಬೈ’ ಟ್ರೇಲರ್ನಲ್ಲಿ ಹೇಗಿದೆ ರಶ್ಮಿಕಾ ಲುಕ್? ಮೂಡಿದೆ ಇನ್ನೊಂದು ಗೆಲುವಿನ ನಿರೀಕ್ಷೆ
ಅಮಿತಾಭ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅವರು ‘ಗುಡ್ಬೈ’ ಚಿತ್ರದಲ್ಲಿ ತಂದೆ ಮಗಳ ಪಾತ್ರ ಮಾಡಿದ್ದಾರೆ. ಕಥಾನಾಯಕಿ ರಶ್ಮಿಕಾ ತಾಯಿ ಏಕಾಏಕಿ ನಿಧನ ಹೊಂದುತ್ತಾಳೆ. ಆ ಬಳಿಕ ಆಗುವ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಟ್ರೇಲರ್ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಕ್ಟೋಬರ್ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದ ಬಗ್ಗೆ ರಶ್ಮಿಕಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಅವರು ಈ ರೀತಿಯ ವಿವಾದಕ್ಕೆ ಗುರಿಯಾಗಿರುವುದು ಫ್ಯಾನ್ಸ್ಗೆ ಬೇಸರ ತರಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.