AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ?

Reliance Jio Studios: ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.

ಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ?
Jio Studios
ಮಂಜುನಾಥ ಸಿ.
|

Updated on: Feb 03, 2026 | 3:26 PM

Share

ಮುಖೇಶ್ ಅಂಬಾನಿ (Mukesh Ambani) ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರು. ಅವರ ಒಡೆತನದ ರಿಲಯನ್ಸ್ ಮತ್ತು ಜಿಯೋ ದೇಶ ಮತ್ತು ವಿದೇಶಗಳಲ್ಲಿ ಹಲವಾರು ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಕೊಂಡಿದೆ. ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.

ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

ಗುಣೀತ್ ಮೋಂಗಾ ಕಪೂರ್ ಮತ್ತು ಅಚಿನ್ ಜೈನ್ ಪ್ರಾರಂಭಿಸಿದ ಸಿಖ್ಯಾ ಎಂಟರ್‌ಟೈನ್‌ಮೆಂಟ್, ಕಳೆದ ದಶಕದಲ್ಲಿ, ವಿಶ್ವ ವೇದಿಕೆಯಲ್ಲಿ ಭಾರತೀಯ ಕಥೆಗಳನ್ನು ಹೇಗೆ ಹೇಳಬಹುದು ಮತ್ತು ಅದರ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸಿಖ್ಯಾ ನಿರ್ಮಾಣ ಸಂಸ್ಥೆಯು ಆಸ್ಕರ್ ಪ್ರಶಸ್ತಿ ಗೆದ್ದಿರುವ ಜೊತೆಗೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ.

ಇದನ್ನೂ ಓದಿ:ಈಗ ಹೇಗಾಗಿದ್ದಾರೆ ನೋಡಿ ‘ಮಿಲನ’ ಸಿನಿಮಾ ನಟಿ ಪಾರ್ವತಿ; ಹೊಸ ಫೋಟೋಸ್ ವೈರಲ್

ಸಿಖ್ಯ ಎಂಟರ್ಟೈನ್​​ಮೆಂಟ್​ ಸಂಸ್ಥೆಯು ಎರಡು ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ ಆಗಿದೆ. 2018 ರಲ್ಲಿ ಸಿಖ್ಯ ನಿರ್ಮಿಸಿದ್ದ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಡಾಕ್ಯುಮೆಂಟರಿ ಶಾರ್ಟ್​​ಗೆ ಆಸ್ಕರ್ ಬಂದಿತ್ತು. ಬಳಿಕ 2022 ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ಎಂಟರ್ಟೈನ್​​​ಮೆಂಟ್ ನಿರ್ಮಾಣ ಮಾಡಿದೆ.

ಡಾಕ್ಯುಮೆಂಟರಿ ಮಾತ್ರವೇ ಅಲ್ಲದೆ ಸಿಖ್ಯ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದೆ. ಅದರಲ್ಲೂ ದೊಡ್ಡ ಸ್ಟಾರ್ ನಟರಲ್ಲದೆ, ಹೊಸಬರನ್ನು ಹಾಕಿಕೊಂಡು ಕತೆಗೆ ಮಾತ್ರವೇ ಪ್ರಾಧಾನ್ಯತೆ ನೀಡುತ್ತಾ ಸಿನಿಮಾ ನಿರ್ಮಾಣ ಮಾಡುವುದು ಸಿಖ್ಯ ಶೈಲಿ. ‘ದಿ ಲಂಚ್​​ಬಾಕ್ಸ್’, ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಠಲ್’ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್