ಆಮಿರ್ ಖಾನ್ 60ನೇ ವರ್ಷದ ಬರ್ತ್​ಡೇ ಪಾರ್ಟಿಗೆ ಬಂದ ಶಾರುಖ್, ಸಲ್ಮಾನ್

ನಟ ಆಮಿರ್ ಖಾನ್ ಅವರು ಸಿನಿಮಾಗಳ ಆಯ್ಕೆಯಲ್ಲಿ ಗಡಿಬಿಡಿ ಮಾಡುತ್ತಿಲ್ಲ. ಖಾಸಗಿ ಬದುಕಿಗೆ ಅವರು ಹೆಚ್ಚು ಸಮಯ ನೀಡುತ್ತಿದ್ದಾರೆ. ಈಗ ಅವರು 60ನೇ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಂದ್ರದಲ್ಲಿರುವ ಆಮಿರ್ ಖಾನ್ ಅವರ ನಿವಾಸಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್ ಆಗಮಿಸಿದ್ದಾರೆ.

ಆಮಿರ್ ಖಾನ್ 60ನೇ ವರ್ಷದ ಬರ್ತ್​ಡೇ ಪಾರ್ಟಿಗೆ ಬಂದ ಶಾರುಖ್, ಸಲ್ಮಾನ್
Salman Khan, Shah Rukh Khan, Aamir Khan

Updated on: Mar 12, 2025 | 10:39 PM

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರು ಮಾರ್ಚ್​ 14ರಂದು 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ವರ್ಷ 60ನೇ ಬರ್ತ್​ಡೇ ಆದ ಕಾರಣ ತುಂಬ ಸ್ಪೆಷಲ್. 2 ದಿನ ಮುಂಚಿತವಾಗಿಯೇ ಸೆಲೆಬ್ರೇಷನ್ ಶುರುವಾಗಿದೆ. ಆಮಿರ್ ಖಾನ್ ಅವರ ಮನೆಯಲ್ಲಿ ಬರ್ತ್​ಡೇ ಆಚರಣೆ ಮಾಡಲಾಗುತ್ತಿದೆ. ಚಿತ್ರರಂಗದ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದಾರೆ. ಆಮಿರ್ ಖಾನ್ ಮನೆಗೆ ಶಾರುಖ್ ಖಾನ್, ಸಲ್ಮಾನ್ ಖಾನ್ (Salman Khan) ಅವರು ಆಗಮಿಸಿದ್ದಾರೆ. ಈ ಮೂವರು ಸೂಪರ್​ ಸ್ಟಾರ್​ಗಳು ಒಂದೆಡೆ ಸೇರುವುದು ಬಹಳ ಅಪರೂಪ. ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಮುಂಬೈನ ಬಾಂದ್ರಾದಲ್ಲಿ ಆಮಿರ್ ಖಾನ್ ಅವರ ಅಪಾರ್ಟ್​​ಮೆಂಟ್ ಇದೆ. ಇಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್​ಗೆ ಆಮಿರ್ ಖಾನ್ ಬರ್ತ್​ಡೇ ಪಾರ್ಟಿ ನೀಡಿದ್ದಾರೆ. ಮಾರ್ಚ್​ 14ರಂದು ಕೂಡ ಅವರು ಚಿತ್ರರಂಗದ ಸ್ನೇಹಿತರಿಗಾಗಿ ಅದ್ದೂರಿ ಔತಣಕೂಟ ಏರ್ಪಡಿಸಲಿದ್ದಾರೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ನಡುವೆ ಉತ್ತಮ ಗೆಳೆತನ ಇದೆ. ಇತ್ತೀಚೆಗೆ ಆಮಿರ್ ಖಾನ್ ಮಗನ ಸಿನಿಮಾಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನೆಂದರೆ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಅವರು ಜೊತೆಯಾಗಿ ಸಿನಿಮಾ ಮಾಡುವ ಪ್ಲ್ಯಾನ್ ಕೂಡ ದೆ. ಆ ಬಗ್ಗೆ ಆಮಿರ್ ಖಾನ್ ಅವರು ಇತ್ತೀಚೆಗೆ ಮಾತನಾಡಿದ್ದರು. ಈಗಾಗಲೇ ಈ ಮೂವರು ಕೂಡ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ. ಇಂದಿನ ಭೇಟಿಯಲ್ಲಿ ಕೂಡ ಆ ವಿಚಾರಗಳನ್ನು ಅವರು ಮಾತನಾಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಿನಿಮಾ ತಡವಾದರೂ ಚಾರ್ಮ್​ ಕಳೆದುಕೊಳ್ಳದ ಶಾರುಖ್ ಖಾನ್

‘ಆರು ತಿಂಗಳ ಹಿಂದೆ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ನಾನು ಒಟ್ಟಿಗೆ ಇದ್ದಾಗ ಈ ಬಗ್ಗೆ ಚರ್ಚೆ ಮಾಡಿದೆವು. ನಾನೇ ಆ ವಿಷಯ ಪ್ರಸ್ತಾಪಿಸಿದ್ದು. ನಾವು ಮೂವರು ಒಟ್ಟಿಗೆ ಸಿನಿಮಾ ಮಾಡದೇ ಇದ್ದರೆ ಖಂಡಿತಾ ಬೇಸರ ಆಗುತ್ತದೆ ಅಂತ ಹೇಳಿದೆ. ಅದನ್ನು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕೂಡ ಒಪ್ಪಿದರು. ಶೀಘ್ರದಲ್ಲೇ ಇದು ನೆರವೇರುತ್ತದೆ ಎಂಬ ನಂಬಿಕೆ ಇದೆ. ನನಗೆ ಸರಿಯಾದ ಕಥೆ ಬೇಕು. ಅದಕ್ಕಾಗಿ ನಾವು ಕಾಯುತ್ತಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದರು.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.