ಸಲ್ಮಾನ್ ಸಿನಿಮಾಗೆ ಚಿಲ್ಲರೆ ಗಳಿಕೆ; ಇನ್ನೂ ನೂರು ಕೋಟಿ ತಲುಪಿಲ್ಲ ‘ಸಿಕಂದರ್’ ಕಲೆಕ್ಷನ್

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗಳನ್ನು ಮೀರುತ್ತಿಲ್ಲ. ರಿಲೀಸ್ ಆದ ಆರು ದಿನಗಳ ನಂತರವೂ 100 ಕೋಟಿ ರೂಪಾಯಿಗಳ ಗುರಿ ತಲುಪಲು ವಿಫಲವಾಗಿದೆ. ಚಿತ್ರದ ನಿರ್ದೇಶಕರ ಆಯ್ಕೆ ಮತ್ತು ಸ್ಕ್ರಿಪ್ಟ್‌ನಲ್ಲಿ ಸಲ್ಮಾನ್ ಖಾನ್ ಹೆಚ್ಚು ಗಮನ ಹರಿಸಬೇಕೆಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಸಲ್ಮಾನ್ ಸಿನಿಮಾಗೆ ಚಿಲ್ಲರೆ ಗಳಿಕೆ; ಇನ್ನೂ ನೂರು ಕೋಟಿ ತಲುಪಿಲ್ಲ ‘ಸಿಕಂದರ್’ ಕಲೆಕ್ಷನ್
ಸಲ್ಮಾನ್ ಖಾನ್

Updated on: Apr 05, 2025 | 8:36 AM

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ (Sikandar Movie) ಕುಂಟುತ್ತಾ ಸಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಆರು ದಿನ ಕಳೆದರೂ ಇನ್ನೂ ಚಿತ್ರದ ಗಳಿಕೆ 100 ಕೋಟಿ ರೂಪಾಯಿ ತಲುಪಿಲ್ಲ. ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಸಿನಿಮಾ 100 ಕೋಟಿ ರೂಪಾಯಿ ಗಳಿಸಲೂ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಗಲಿದೆ. ಸಲ್ಲು ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಮಾರ್ಚ್ 30ರಂದು ರಿಲೀಸ್ ಆಯಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲು ವಿಫಲವಾಗಿದೆ. ಈ ಚಿತ್ರದ ಒಂದು ದಿದನ ಗಳಿಕೆ 30 ಕೋಟಿ ರೂಪಾಯಿ ದಾಟಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕನ್ನಡದ ‘ಕೆಜಿಎಫ್ 2’ ಸಿನಿಮಾ ಹಿಂದಿ ಒಂದರಲ್ಲೇ ಒಂದು ದಿನಕ್ಕೆ 50+ ಕೋಟಿ ರೂಪಾಯಿ ಗಳಿಸಿತ್ತು. ‘ಪುಷ್ಪ 2’ ಚಿತ್ರದ ಒಂದು ದಿನದ ಗಳಿಕೆಯಂತೂ 60 ಕೋಟಿ ರೂಪಾಯಿ ದಾಟಿತ್ತು. ಇವುಗಳಿಗೆ ಹೋಲಿಸಿದರೆ ಸಲ್ಮಾನ್ ಖಾನ್ ಸಿನಿಮಾ ಡಲ್ ಆಗಿ ಹೋಗಿದೆ.

ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಏಪ್ರಿಲ್ 4ರಂದು ಕೇವಲ 3.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ 94 ಕೋಟಿ ರೂಪಾಯಿ ಆಗಿದೆ. ಸಲ್ಲು ಸಿನಿಮಾ ಒಂದು ವಾರಕ್ಕಾದರೂ 100 ಕೋಟಿ ರೂಪಾಯಿ ಕ್ಲಬ್ ಸೇರುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
ರಶ್ಮಿಕಾ ಮಂದಣ್ಣ ನಟಿಸಿದ ಸ್ಟಾರ್ ಹೀರೋಗಳ ಪಟ್ಟಿ ಬಹುದೊಡ್ಡದಿದೆ
ಒಮನ್​​ನಲ್ಲಿ ಜಿಮ್ ಟ್ರೇನರ್​ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನ; ಅವರ ಯಶಸ್ಸಿನ ಗುಟ್ಟಿದು
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ

ಸದ್ಯ ಎಲ್ಲರೂ ಸಲ್ಮಾನ್ ಖಾನ್ ಸಿನಿಮಾ ಸೋಲಲು ನಿರ್ದೇಶಕ ಎಆರ್​ ಮುರುಗದಾಸ್ ಅವರನ್ನು ದೂಷಿಸುತ್ತಾ ಇದ್ದಾರೆ. ‘ಘಜಿನಿ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ ಅವರಿಗೆ ಇದೆಂಥಾ ಪರಿಸ್ಥಿತಿ ಬಂದೊದಗಿತು ಎಂದು ಅವರ ಫ್ಯಾನ್ಸ್ ಬೇಸರ ಮಾಡಿಕೊಳ್ಳುತ್ತಾ ಇದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್-ರಶ್ಮಿಕಾ ನಡುವಿನ 31 ವರ್ಷ ವಯಸ್ಸಿನ ಅಂತರ ಸಮರ್ಥಿಸಿಕೊಂಡ ಅಮೀಶಾ ಪಟೇಲ್

ಸಲ್ಮಾನ್ ಖಾನ್ ಅವರು ಮುಂದಿನ ದಿನಗಳಲ್ಲಿ ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಲಹೆಯನ್ನು ಸಲ್ಲು ಸ್ವೀಕರಿಸುತ್ತಾರಾ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.