ಶಾರುಖ್ ಖಾನ್ 61ನೇ ಜನ್ಮದಿನ: ಕೈಬರಹದ ಪತ್ರದ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ

ಶಾರುಖ್ ಖಾನ್ ಅವರ ಹುಟ್ಟುಹಬ್ಬದ ದಿನ ಮನ್ನತ್ ಬಂಗಲೆಯ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಅವರಿಗೆ ಶಾರುಖ್ ಖಾನ್ ದರ್ಶನ ನೀಡುವುದು ವಾಡಿಕೆ. ಆದರೆ ಈ ವರ್ಷ ಶಾರುಖ್ ಖಾನ್ ಅವರು ಮನ್ನತ್ ನಿವಾಸದಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಅಭಿಮಾನಿಗಳಿಗೆ ಅವರು ನಿರಾಸೆ ಮಾಡಿಲ್ಲ.

ಶಾರುಖ್ ಖಾನ್ 61ನೇ ಜನ್ಮದಿನ: ಕೈಬರಹದ ಪತ್ರದ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ
Shah Rukh Khan
Image Credit source: PTI

Updated on: Nov 02, 2026 | 3:52 PM

ಬಾಲಿವುಡ್‌ ನಟ ಶಾರುಖ್ ಖಾನ್ ಅವರ 61ನೇ ಜನ್ಮದಿನದ ಅಂಗವಾಗಿ ಮುಂಬೈನ ಅವರ ಪ್ರಸಿದ್ಧ ನಿವಾಸ ‘ಮನ್ನತ್’ ಮುಂಭಾಗ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರತಿ ವರ್ಷ ಮಧ್ಯರಾತ್ರಿ ಶಾರುಖ್ ಖಾನ್ ಅವರು ತಮ್ಮ ನಿವಾಸದ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ನೀಡುವುದು ಸಂಪ್ರದಾಯವಾಗಿತ್ತು. ಆದರೆ, ಈ ಬಾರಿ ಅವರು ತಾತ್ಕಾಲಿಕವಾಗಿ ಬೇರೆಡೆ ವಾಸ್ತವ್ಯ ಹೂಡಿರುವುದರಿಂದ ಆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಆದಾಗ್ಯೂ, ಅಭಿಮಾನಿಗಳು ಬರಿಗೈಯಲ್ಲಿ ಹಿಂತಿರುಗಲಿಲ್ಲ. ತಮ್ಮ ನೆಚ್ಚಿನ ನಟನ ಕೈಬರಹದ ಪತ್ರ ಹಾಗೂ ಮುಂಬರುವ ‘ಕಿಂಗ್’ ಸಿನಿಮಾದ ಅದ್ಧೂರಿ ಪ್ರೊಜೆಕ್ಷನ್ ದೃಶ್ಯಗಳನ್ನು ಕಂಡು ರೋಮಾಂಚನಗೊಂಡಿದ್ದಾರೆ.

ತಮ್ಮ ಪ್ರೀತಿಯ ನಟನನ್ನು ಖುದ್ದಾಗಿ ನೋಡಲು ಸಾಧ್ಯವಾಗದಿದ್ದರೂ, ಮನ್ನತ್ ಕಟ್ಟಡದ ಮೇಲೆ ಹಾಕಲಾಗಿದ್ದ ಬೃಹತ್ ಬಿಲ್ ಬೋರ್ಡ್‌ನಲ್ಲಿ ಶಾರುಖ್ ಖಾನ್ ಅಭಿಮಾನಿಗಳಿಗಾಗಿ ವಿಶೇಷ ಹಸ್ತಪ್ರತಿಯ ಪತ್ರವೊಂದನ್ನು ಪ್ರಕಟಿಸಿದ್ದರು. ‘ನಿಮ್ಮೆಲ್ಲರ ಶುಭಾಶಯಗಳು ಮತ್ತು ಅಪಾರ ಪ್ರೀತಿಗೆ ಧನ್ಯವಾದಗಳು. ನನ್ನ ಕಡೆಯಿಂದಲೂ ನಿಮಗಾಗಿ ಪ್ರೀತಿಯನ್ನು ರವಾನಿಸುತ್ತಿದ್ದೇನೆ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ.

ಶಾರುಖ್ ಖಾನ್ ಅವರ ಹೋಮ್ ಪ್ರೊಡಕ್ಷನ್ ‘ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್’ ಸಂಸ್ಥೆಯು ಈ ಜನ್ಮದಿನವನ್ನು ‘ಕಿಂಗ್’ ಸಿನಿಮಾದ ಪ್ರಚಾರಕ್ಕಾಗಿ ಅದ್ಧೂರಿಯಾಗಿ ಬಳಸಿಕೊಂಡಿದೆ. ಮನ್ನತ್ ಕಟ್ಟಡದ ಮೇಲಿನ ಪೋಸ್ಟರ್‌ಗಳಲ್ಲಿ ‘ಕಿಂಗ್ ಅಕೇಲಾ ಕಾಫಿ ಹೈ’ ಎಂದು ಸಿನಿಮಾ ಡೈಲಾಗ್ ಬಿತ್ತರ ಮಾಡಲಾಗಿದೆ. ಭಾನುವಾರ ರಾತ್ರಿಯೇ ಮುಂಬೈನ ಪ್ರಸಿದ್ಧ ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯನ್ನು ಶಾರುಖ್ ಅವರ ಫೋಟೋಗಳು ಹಾಗೂ ಹುಟ್ಟುಹಬ್ಬದ ಶುಭಾಶಯದ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.

ಜನ್ಮದಿನದ ಪ್ರಯುಕ್ತ ಶಾರುಖ್ ಖಾನ್ ಅವರು ‘ಕಿಂಗ್’ ಸಿನಿಮಾದ ಆ್ಯಕ್ಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಉರಿಯುತ್ತಿರುವ ಸುರಂಗದಿಂದ ಕೈಯಲ್ಲಿ ಗನ್ ಹಿಡಿದು ಕೋಪದಿಂದ ಹೊರಬರುವ ಸನ್ನಿವೇಶವುಳ್ಳ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪೋಸ್ಟರ್ ಶೇರ್ ಮಾಡಿ ಶಾರುಖ್, ‘ಇಂದು ಮತ್ತೆ ನೆನಪಾಯಿತು… ಕೊಲೆಗಾರನಲ್ಲ, ಪ್ರೇಮಿ ನಾನು’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಜನ್ಮದಿನ: ಬರೀ ನಟನೆಯಲ್ಲ, 10,000 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಕಿಂಗ್ ಖಾನ್

ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಸಿನಿಮಾ ಡಿಸೆಂಬರ್ 24ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. 2023ರ ಬ್ಲಾಕ್‌ಬಸ್ಟರ್ ‘ಪಠಾನ್’ ನಂತರ ಶಾರುಖ್ ಹಾಗೂ ಸಿದ್ಧಾರ್ಥ್ ಆನಂದ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಶಾರುಖ್ ಅವರು ತಮ್ಮ ಮಗಳು ಸುಹಾನಾ ಖಾನ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us