ವಿವಾದದಲ್ಲಿ ‘ಕಿಂಗ್​​’ ಸಿನನಿಮಾ; ದೀಪಿಕಾ ಧರಿಸಿದ ಕೇಸರಿ ಬಟ್ಟೆಗೆ ವಿರೋಧ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಿಂಗ್ ಸಿನಿಮಾದ ಹಾಡೊಂದರಲ್ಲಿ ಧರಿಸಿರುವ ಕೇಸರಿ ಬಣ್ಣದ ಉಡುಗೆಯು ಹೊಸ ವಿವಾದಕ್ಕೆ ಕಾರಣವಾಗಿದೆ. ಸನಾತನ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದು, ಉಡುಗೆಯ ಬಣ್ಣ ಬದಲಾಯಿಸದಿದ್ದರೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  

ವಿವಾದದಲ್ಲಿ ‘ಕಿಂಗ್​​’ ಸಿನನಿಮಾ; ದೀಪಿಕಾ ಧರಿಸಿದ ಕೇಸರಿ ಬಟ್ಟೆಗೆ ವಿರೋಧ
ಶಾರುಖ್​-ದೀಪಿಕಾ
Edited By:

Updated on: Nov 07, 2026 | 7:59 AM

ಮುಖ್ಯಾಂಶಗಳು

  • ಕಿಂಗ್ ಸಿನಿಮಾಗೆ ಸಂಕಷ್ಟ
  • ದೀಪಿಕಾ ಕೇಸರಿ ಉಡುಗೆ ವಿವಾದಕ್ಕೆ ಕಾರಣ
  • ಶಾರುಖ್ ಖಾನ್ ವಿರುದ್ಧ ಶಾಸಕರ ಆಕ್ರೋಶ

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಮುಂಬರುವ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಈ ಚಿತ್ರದ ಬಿಡುಗಡೆಯಾಗಿರುವ ಹಾಡೊಂದರಲ್ಲಿ ನಾಯಕಿ ದೀಪಿಕಾ ಪಡುಕೋಣೆ ಧರಿಸಿರುವ ಉಡುಗೆಯ ಬಣ್ಣವು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರೊಬ್ಬರು ಈ ಬಗ್ಗೆ ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾ ತಂಡದ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ.

ಚಿತ್ರದ ‘ತು ಮಿಲ್ ಜಾಯೆ’ ಹಾಡಿನಲ್ಲಿ ಅತಿ ಹೆಚ್ಚು ವಿಎಫ್‌ಎಕ್ಸ್ ಬಳಕೆ ಮಾಡಲಾಗಿದೆ ಎಂದು ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಹಾಡಿನಲ್ಲಿರುವ ಕೇಸರಿ ಬಣ್ಣದ ಉಡುಗೆಯು ಹೊಸ ವಿವಾದಕ್ಕೆ ಮುನ್ನುಡಿ ಬರೆದಿದೆ. ದೀಪಿಕಾ ಧರಿಸಿರುವ ಬಟ್ಟೆಯು ಸನಾತನ ಧರ್ಮಕ್ಕೆ ಅಪಮಾನ ಮಾಡುವ ಯತ್ನವಾಗಿದೆ ಎಂದು ಮುಖಂಡರು ಬಹಿರಂಗವಾಗಿ ಆರೋಪಿಸಿದ್ದಾರೆ.

Loading...

ದೆಹಲಿಯ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಅವರು ನಟ ಶಾರುಖ್ ಖಾನ್ ಹಾಗೂ ಚಿತ್ರತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಿಕಿನಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಅವರು ಕಿಡಿಕಾರಿದ್ದಾರೆ. ಮುಂಬರುವ ದಿನಗಳಲ್ಲಿ ಈ ಬಣ್ಣವನ್ನು ಬದಲಾಯಿಸದಿದ್ದರೆ ದೇಶಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಗಡುವು ನೀಡಿದ್ದಾರೆ.

ಈ ಹಿಂದೆ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ‘ಬೆಶರಮ್ ರಂಗ್’ ಹಾಡಿನ ಸಂದರ್ಭದಲ್ಲೂ ಇದೇ ರೀತಿಯ ಕೇಸರಿ ಬಣ್ಣದ ವಿವಾದ ತಲೆದೋರಿತ್ತು. ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದನ್ನು ಶಾಸಕರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ. ಒಂದು ವೇಳೆ ಚಿತ್ರತಂಡವು ಎಚ್ಚೆತ್ತುಕೊಳ್ಳದಿದ್ದರೆ ಅದೇ ಮಾದರಿಯ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಅವರು ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಇದನ್ನೂ ಓದಿ: ‘ಕಿಂಗ್’ ಬಿಡುಗಡೆಗೆ ತಿಂಗಳಿರುವಾಗಲೇ 665 ಕೋಟಿ ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್

ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಗೌರಿ ಖಾನ್ ಹಾಗೂ ಮಮತಾ ಆನಂದ್ ನಿರ್ಮಾಣ ಮಾಡುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹಾಗೂ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಲಾಂಚ್‌ನಲ್ಲಿ ಸಿನಿಮಾ ರೂಪುಗೊಳ್ಳುತ್ತಿದೆ. ಈ ವರ್ಷದ ಡಿಸೆಂಬರ್ 24ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us