Shah Rukh Khan: ಮನ್ನತ್ ಬಾಲ್ಕನಿಗೆ ಬರೋದಕ್ಕೆ ಎರಡು ಕಾರಣ ತಿಳಿಸಿದ ಶಾರುಖ್ ಖಾನ್

| Updated By: ರಾಜೇಶ್ ದುಗ್ಗುಮನೆ

Updated on: Jan 31, 2023 | 12:13 PM

ಶಾರುಖ್ ಖಾನ್ ಅವರು ‘ಪಠಾಣ್​’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಹಿಟ್ ಆಗುವುದಕ್ಕೂ ಮೊದಲು ನಾಲ್ಕು ವರ್ಷ ಅವರು ನಟನೆಯಿಂದ ದೂರ ಇದ್ದರು. ಈ ಮಧ್ಯೆ ಆರ್ಯನ್ ಖಾನ್ ಡ್ರಗ್ ಕೇಸ್ ವಿಚಾರವೂ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

Shah Rukh Khan: ಮನ್ನತ್ ಬಾಲ್ಕನಿಗೆ ಬರೋದಕ್ಕೆ ಎರಡು ಕಾರಣ ತಿಳಿಸಿದ ಶಾರುಖ್ ಖಾನ್
ಶಾರುಖ್ ಖಾನ್
Follow us on

ಶಾರುಖ್ ಖಾನ್ (Shah Rukh Khan) ಅವರ ಮುಂಬೈ ನಿವಾಸ ಮನ್ನತ್​ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಈ ಮನೆಯ ಎದುರು ಸದಾ ಅಭಿಮಾನಿಗಳ ದಂಡು ನೆರೆದಿರುತ್ತದೆ. ಶಾರುಖ್ ಖಾನ್ ಬಾಲ್ಕನಿಗೆ ಬಂದು ಕೈಬೀಸುತ್ತಾರೆ ಎಂದು ಫ್ಯಾನ್ಸ್ ಕಾದಿರುತ್ತಾರೆ. ಇಡೀ ದಿನ ಅವರಿಗಾಗಿ ಕಾಯುತ್ತಾರೆ. ಈಗ ಶಾರುಖ್ ಖಾನ್ ಅವರು ತಾವು ಬಾಲ್ಕನಿಗೆ ಬರೋದು ಏಕೆ ಎನ್ನುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದಕ್ಕೆ ಅವರು ಎರಡು ಕಾರಣಗಳನ್ನು ನೀಡಿದ್ದಾರೆ

ಶಾರುಖ್ ಖಾನ್ ಅವರು ‘ಪಠಾಣ್​’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಹಿಟ್ ಆಗುವುದಕ್ಕೂ ಮೊದಲು ನಾಲ್ಕು ವರ್ಷ ಅವರು ನಟನೆಯಿಂದ ದೂರ ಇದ್ದರು. ಈ ಮಧ್ಯೆ ಆರ್ಯನ್ ಖಾನ್ ಡ್ರಗ್ ಕೇಸ್ ವಿಚಾರವೂ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಶಾರುಖ್ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸಮಯವನ್ನು ಮನೆಯಲ್ಲೇ ಕಳೆದಿದ್ದಾರೆ. ಹಲವು ಬಾರಿ ಅವರು ಫ್ಯಾನ್ಸ್​ನ ನೋಡೋಕೆ ಬಾಲ್ಕನಿಗೆ ಬರುತ್ತಿದ್ದರು. ‘ಪಠಾಣ್​’ ಸಕ್ಸಸ್ ಮೀಟ್​ನಲ್ಲಿ ಶಾರುಖ್ ಈ ಬಗ್ಗೆ ಮಾತನಾಡಿದ್ದಾರೆ.

‘ನನ್ನ ಚಿತ್ರ ಹಿಟ್ ಆಗದಿದ್ದರೂ ನನಗೆ ಅಭಿಮಾನಿಗಳು ಅದೇ ರೀತಿಯ ಪ್ರೀತಿಯನ್ನು ನೀಡುತ್ತಾರೆ. ನಿನಗೆ ದುಃಖವಾದಾಗ ನಿನಗೆ ಪ್ರೀತಿ ನೀಡುವವರ ಬಳಿ ಹೋಗು ಎಂದು ಹಿರಿಯರು ನನಗೆ ಹೇಳಿದ್ದರು. ಎಲ್ಲರಿಗೂ ಎಲ್ಲದೂ ಕೈಗೂಡುವುದಿಲ್ಲ. ಜೀವನವೇ ಹಾಗೆ. ಅದು ಹಾಗೆಯೇ ಇರಬೇಕು. ಮನುಷ್ಯನಿಗೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಬರುತ್ತವೆ’ ಎಂದಿದ್ದಾರೆ ಶಾರುಖ್ ಖಾನ್.

ಇದನ್ನೂ ಓದಿ
ಐದು ದಿನಕ್ಕೆ 500 ಕೋಟಿ ರೂಪಾಯಿ ಬಾಚಿದ ‘ಪಠಾಣ್​’; ಭಾರತದಲ್ಲಿ ಎಷ್ಟು ಕಲೆಕ್ಷನ್​?
ಕಂಬ್ಯಾಕ್​ಗೆ ಶಾರುಖ್ ಖಾನ್ ತಂತ್ರವನ್ನೇ ಬಳಸಲಿದ್ದಾರೆ ಆಮಿರ್ ಖಾನ್? ಕಾಯಬೇಕು ಇನ್ನಷ್ಟು ವರ್ಷ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

‘ಜೀವನದಲ್ಲಿ ಬೇಸರ ಆದರೆ ನಿನ್ನ ಜೊತೆ ಕೆಲಸ ಮಾಡುವವರ ಜತೆ ಹೋಗಬೇಡ. ತಪ್ಪನ್ನು ಹೇಗೆ ತಿದ್ದಿ ಸಾಗಬೇಕು ಎಂದು ಕಿವಿಮಾತು ಹೇಳುವವರ ಜತೆ ಹೋಗಬೇಡ. ನಿನಗೆ ಪ್ರೀತಿ ಕೊಡುವವರ ಜತೆ ಹೋಗು ಎಂಬ ಮಾತನ್ನು ಪಾಲಿಸುತ್ತೇನೆ. ಲಕ್ಷಾಂತರ, ಕೋಟ್ಯಂತರ ಮಂದಿ ನನಗೆ ಪ್ರೀತಿ ತೋರುತ್ತಾರೆ ಎಂಬುದು ನನ್ನ ಅದೃಷ್ಟ. ನನಗೆ ಬೇಸರ ಆದಾಗ ನಾನು ಬಾಲ್ಕನಿಗೆ ಹೋಗುತ್ತೇನೆ. ನನಗೆ ಖುಷಿ ಆದಾಗ ಬಾಲ್ಕನಿಗೆ ಹೋಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬೈಕಾಟ್​’ ಎನ್ನುವವರಿಗೆ ಶಾರುಖ್ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಒಂದೊಳ್ಳೆಯ ಪಾಠ

ಶಾರುಖ್ ಖಾನ್ ಅವರು ‘ಪಠಾಣ್​’ ಗೆಲುವಿನ ಬೆನ್ನಲ್ಲೇ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳತ್ತ ಕೈ ಬೀಸಿ ಅವರು ಧನ್ಯವಾದ ತಿಳಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:49 am, Tue, 31 January 23