AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಲಿ, ನಮ್ಮ ಉದ್ದೇಶ ಮನರಂಜನೆ ನೀಡೋದು’; ಬೈಕಾಟ್ ಬಗ್ಗೆ ಶಾರುಖ್​ ಮಾತು

‘ಕೆಟ್ಟ ಕೆಲಸ (ಸಿನಿಮಾ) ಅಥವಾ ಒಳ್ಳೆಯ ಕೆಲಸ ಮಾಡಲಿ ಸಿನಿಮಾ ಮಾಡುವವರ ಉದ್ದೇಶ ಯಾವಾಗಲೂ ಮನರಂಜನೆ ನೀಡುವುದೇ ಆಗಿರುತ್ತದೆ’ ಎಂದಿದ್ದಾರೆ.

‘ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಲಿ, ನಮ್ಮ ಉದ್ದೇಶ ಮನರಂಜನೆ ನೀಡೋದು’; ಬೈಕಾಟ್ ಬಗ್ಗೆ ಶಾರುಖ್​ ಮಾತು
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on: Jan 31, 2023 | 7:17 AM

Share

ಶಾರುಖ್ ಖಾನ್ (Shah Rukh Khan) ಅವರು ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರತಿ ಬಾರಿ ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಹೋದಲ್ಲೆಲ್ಲ ಮಾಧ್ಯಮದವರನ್ನು ಎದುರುಗೊಳ್ಳುತ್ತಿದ್ದರು. ಆದರೆ, ‘ಪಠಾಣ್​’ (Pathaan Movie) ಚಿತ್ರಕ್ಕೆ ಅವರು ಬೇರೆಯದೇ ತಂತ್ರ ಉಪಯೋಗಿಸಿದ್ದರು. ‘ಪಠಾಣ್​’ ಸಾಕಷ್ಟು ವಿವಾದ ಎಬ್ಬಿಸಿದ್ದರಿಂದ ಸಿನಿಮಾ ರಿಲೀಸ್​​ಗೂ ಮುನ್ನ ಯಾವ ಮಾಧ್ಯಮಕ್ಕೂ ಶಾರುಖ್​ ಸಂದರ್ಶನ ನೀಡಿರಲಿಲ್ಲ. ಚಿತ್ರ ಗೆದ್ದ ಬಳಿಕ ಅವರು ಮಾಧ್ಯಮದವರನ್ನು ಎದುರುಗೊಂಡಿದ್ದಾರೆ. ಈ ವೇಳೆ ಅವರು ಬೈಕಾಟ್ ವಿಚಾರವಾಗಿ ಮಾತನಾಡಿದ್ದಾರೆ.

‘ಪಠಾಣ್​’ ಚಿತ್ರದ ‘ಬೇಷರಂ ರಂಗ್​..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಣ್ಣದ ಬಿಕಿನಿ ವಿವಾದ ಹುಟ್ಟುಹಾಕಿತ್ತು. ಸಿನಿಮಾ ಹಿಟ್ ಆದ ಬಳಿಕ ವಿವಾದ ತಣ್ಣಗಾಗಿದೆ. ಈಗ ಶಾರುಖ್ ಖಾನ್ ಅವರು ಬೈಕಾಟ್ ವಿಚಾರವಾಗಿ ಮಾತನಾಡಿದ್ದಾರೆ. ‘ಕೆಟ್ಟ ಕೆಲಸ (ಸಿನಿಮಾ) ಅಥವಾ ಒಳ್ಳೆಯ ಕೆಲಸ ಮಾಡಲಿ ಸಿನಿಮಾ ಮಾಡುವವರ ಉದ್ದೇಶ ಯಾವಾಗಲೂ ಮನರಂಜನೆ ನೀಡುವುದೇ ಆಗಿರುತ್ತದೆ’ ಎಂದಿದ್ದಾರೆ.

‘ನಾನು ಒಂದು ಮುಖ್ಯವಾದ ವಿಷಯವನ್ನು ಹೇಳಲು ಬಯಸುತ್ತೇನೆ. ನಾವು ಸಿನಿಮಾ ಮಾಡೋದು ಖುಷಿಯನ್ನು ಹಂಚಲು. ನಾವು ತಪ್ಪನ್ನು ಮಾಡುತ್ತೇವೆ. ಸಿನಿಮಾ ಮಾಡುವ ಹಿಂದಿನ ಉದ್ದೇಶ ನಮಗೆ ಸ್ಪಷ್ಟವಾಗಿದೆ. ಸಿನಿಮಾದಲ್ಲಿ ಕೆಟ್ಟ ವ್ಯಕ್ತಿಯಾಗಿ ಕಾಣಿಸಿಕೊಂಡರೂ ಖುಷಿ, ಪ್ರೀತಿ, ದಯೆ ಮತ್ತು ಸಹೋದರತ್ವವನ್ನು ಹರಡುವುದು ನಮ್ಮ ಉದ್ದೇಶ ಆಗಿರುತ್ತದೆ. ನಾವ್ಯಾರೂ ಕೆಟ್ಟವರಲ್ಲ. ಎಲ್ಲರನ್ನೂ ಸಂತೋಷವಾಗಿಸಲು ನಾವು ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತೇವೆ’ ಎಂದಿದ್ದಾರೆ ಶಾರುಖ್​ ಖಾನ್.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

‘ಸಿನಿಮಾ ಮೂಲಕ ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಇರುವುದಿಲ್ಲ. ಇದು ಕೇವಲ ಮನರಂಜನೆಗಾಗಿ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಮತ್ತು ಪರಸ್ಪರ ತಮಾಷೆ ಮಾಡಿಕೊಳ್ಳುತ್ತೇವೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ದೀಪಿಕಾ ಪಡುಕೋಣೆ ಅವರ ಅಮರ್. ನಾನು ಅಕ್ಬರ್. ಜಾನ್ ಅಬ್ರಾಹಂ ಅವರು ಆ್ಯಂಥೋನಿ. ಇದು ಅಮರ್, ಅಕ್ಬರ್ ಆ್ಯಂಥೋನಿ’ ಎಂದು ಹೇಳುವ ಮೂಲಕ ಎಲ್ಲರೂ ಒಂದೇ ಎನ್ನುವ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ‘ಪಠಾಣ್​’ ಗೆಲುವಿನ ಬಳಿಕ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ

ನಮ್ಮ ಚಿತ್ರಗಳ ಮೇಲೆ ನೀವು ತೋರುವ ಪ್ರೀತಿಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ನಾವು ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕು. ಜತೆಗೆ ಆಧುನಿಕ ರೀತಿಯಲ್ಲಿ ಕಥೆ ಹೇಳಬೇಕು. ನಾವು ಆ ಕಥೆಗಳನ್ನು ಹೇಳಿದಾಗ ನಾವು ಯಾರನ್ನೂ ಅಪಹಾಸ್ಯ ಮಾಡುವ ಉದ್ದೇಶ ಇರುವುದಿಲ್ಲ’ ಎಂದಿದ್ದಾರೆ ಶಾರುಖ್​ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ