ಭೂತದ ಸಿನಿಮಾ ಪ್ರಚಾರಕ್ಕೆ ಬಂದ ಶ್ರದ್ಧಾ ಕಪೂರ್​ಗೆ ಮದುವೆ ಬಗ್ಗೆ ಪ್ರಶ್ನೆ; ನಟಿಯ ಉತ್ತರ ಏನು?

ರಾಹುಲ್​ ಮೋದಿ ಜೊತೆ ನಟಿ ಶ್ರದ್ಧಾ ಕಪೂರ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಅವರ ಮದುವೆ ಯಾವಾಗ ನಡೆಯಲಿದೆ ಎಂಬ ಕೌತುಕ ಅಭಿಮಾನಿಗಳಿಗೆ ಇದೆ. ಈ ಬಗ್ಗೆ ‘ಸ್ತ್ರೀ 2’ ಸಿನಿಮಾದ ಟ್ರೇಲರ್​ ಲಾಂಚ್​ ಇವೆಂಟ್​ನಲ್ಲಿ ಶ್ರದ್ಧಾ ಕಪೂರ್​ ಅವರಿಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಫಿಲ್ಮಿ ಸ್ಟೈಲ್​ನಲ್ಲೇ ಉತ್ತರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಭೂತದ ಸಿನಿಮಾ ಪ್ರಚಾರಕ್ಕೆ ಬಂದ ಶ್ರದ್ಧಾ ಕಪೂರ್​ಗೆ ಮದುವೆ ಬಗ್ಗೆ ಪ್ರಶ್ನೆ; ನಟಿಯ ಉತ್ತರ ಏನು?
ಶ್ರದ್ಧಾ ಕಪೂರ್​
Follow us
ಮದನ್​ ಕುಮಾರ್​
|

Updated on: Jul 19, 2024 | 5:37 PM

ಬಾಲಿವುಡ್​ನ ಅನೇಕ ನಟಿಯರು ಮದುವೆ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಚ್ಚರಿ ನೀಡುತ್ತಿದ್ದಾರೆ. ಈಗಾಗಲೇ ಆಲಿಯಾ ಭಟ್​, ಪರಿಣೀತಿ ಚೋಪ್ರಾ, ಸೋನಾಕ್ಷಿ ಸಿನ್ಹಾ ಮುಂತಾದವರು ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಹಾಗಾದ್ರೆ ಶ್ರದ್ಧಾ ಕಪೂರ್​ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ‘ಸ್ತ್ರೀ 2’ ಸಿನಿಮಾದ ಟ್ರೇಲರ್​ ಲಾಂಚ್ ಸಮಾರಂಭದಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಶ್ರದ್ಧಾ ಕಪೂರ್​ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

‘ಸ್ತ್ರೀ 2’ ಸಿನಿಮಾದಲ್ಲಿ ಹಾರರ್​ ಕಥಾಹಂದರ ಇದೆ. ಈ ಚಿತ್ರದ ಟ್ರೇಲರ್​ ಅನಾವರಣ ಮಾಡಲಾಗಿದೆ. ರಾಜ್​ಕುಮಾರ್​ ರಾವ್​, ಪಂಕಜ್​ ತ್ರಿಪಾಠಿ, ಅಭಿಷೇಕ್​ ಬ್ಯಾನರ್ಜಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್​ ಬಿಡುಗಡೆ ವೇಳೆ ‘ನಿಮ್ಮ ಮದುವೆ ಯಾವಾಗ’ ಎಂದು ಶ್ರದ್ಧಾ ಕಪೂರ್​ಗೆ ಕೇಳಲಾಗಿದೆ. ‘ಆಕೆ ಸ್ತ್ರೀ.. ಆಕೆಗೆ ಇಷ್ಟಬಂದಾಗ ಮದುಮಗಳು ಆಗ್ತಾಳೆ’ ಎಂದು ಶ್ರದ್ಧಾ ಕಪೂರ್​ ಉತ್ತರಿಸಿದ್ದಾರೆ.

ಆಗಸ್ಟ್​ 15ರಂದು ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್​ ಮತ್ತು ಟೀಸರ್​ ಮೂಲಕ ಈ ಸಿನಿಮಾ ಸಖತ್​ ಕೌತುಕ ಮೂಡಿಸಿದೆ. ಈ ಚಿತ್ರಕ್ಕೆ ದಿನೇಶ್​ ವಿಜನ್​ ಅವರು ಬಂಡವಾಳ ಹೂಡಿದ್ದಾರೆ. ಈ ವರ್ಷ ಅವರು ನಿರ್ಮಾಣ ಮಾಡಿದ್ದ ‘ಮುಂಜ್ಯ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೂಪರ್​ ಹಿಟ್​ ಆಯಿತು. ಈಗ ಅವರು ‘ಸ್ತ್ರೀ 2’ ಚಿತ್ರದಿಂದ ಅದೇ ರೀತಿ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಈ ರಾಹುಲ್ ಮೋದಿ ಯಾರು?

2018ರಲ್ಲಿ ‘ಸ್ತ್ರೀ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಯಶಸ್ಸಿನ ಬಳಿಕ ‘ಸ್ತ್ರೀ 2’ ಅನೌನ್ಸ್​ ಮಾಡಲಾಯಿತು. ಈಗ ‘ಸ್ತ್ರೀ 2’ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಏನೆಂದರೆ, ನಿರ್ಮಾಪಕರು ‘ಸ್ತ್ರೀ 3’ ಬಗ್ಗೆಯೂ ಪ್ಲ್ಯಾನ್​ ರೆಡಿ ಮಾಡಿದ್ದಾರೆ. ಈಗಾಗಲೇ ಇದಕ್ಕೆ ಕಥೆ ಸಿದ್ಧವಾಗಿದೆ. ಆದಷ್ಟು ಬೇಗ ‘ಸ್ತ್ರೀ 3’ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಈಗ ‘ಸ್ತ್ರೀ 2’ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.