Oscars 2023: ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕಿಲ್ಲ ಆಸ್ಕರ್​ ನಾಮಿನೇಷನ್​; ಪ್ರತಿಷ್ಠಿತ ಪ್ರಶಸ್ತಿಗೆ ನೆಟ್ಟಿಗರ ಬಹಿಷ್ಕಾರ

| Updated By: ರಾಜೇಶ್ ದುಗ್ಗುಮನೆ

Updated on: Jan 25, 2023 | 6:27 AM

The Kashmir Files | Vivek Agnihotri: ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ‘ಆಸ್ಕರ್​ ಪ್ರಶಸ್ತಿ’ ಸ್ಪರ್ಧೆಗೆ ನಾಮಿನೇಟ್​ ಆಗದೇ ಇರುವುದರಿಂದ ಟ್ವಿಟರ್​ನಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Oscars 2023: ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕಿಲ್ಲ ಆಸ್ಕರ್​ ನಾಮಿನೇಷನ್​; ಪ್ರತಿಷ್ಠಿತ ಪ್ರಶಸ್ತಿಗೆ ನೆಟ್ಟಿಗರ ಬಹಿಷ್ಕಾರ
ದಿ ಕಾಶ್ಮೀರ್ ಫೈಲ್ಸ್ ಪೋಸ್ಟರ್​, ವಿವೇಕ್ ಅಗ್ನಿಹೋತ್ರಿ
Follow us on

ಸಿನಿಪ್ರಿಯರು ಬಹುದಿನಗಳಿಂದ ಕಾದಿದ್ದ ‘ಆಸ್ಕರ್​ ನಾಮಿನೇಷನ್​ ಪಟ್ಟಿ’ (Oscars 2023 Nomination) ಪ್ರಕಟ ಆಗಿದೆ. 300ಕ್ಕೂ ಅಧಿಕ ಸಿನಿಮಾಗಳು ನಾಮನಿರ್ದೇಶನಗೊಳ್ಳಲು ಅರ್ಹತೆ ಪಡೆದಿದ್ದವು. ಆ ಪೈಕಿ ಒಂದಷ್ಟು ಸಿನಿಮಾಗಳಿಗೆ ಮಾತ್ರ ನಾಮಿನೇಟ್​​ ಆಗುವ ಅವಕಾಶ ಸಿಕ್ಕಿದೆ. ಇನ್ನುಳಿದ ಸಿನಿಮಾಗಳಿಗೆ ತೀವ್ರ ನಿರಾಸೆ ಆಗಿದೆ. ಕನ್ನಡದ ‘ಕಾಂತಾರ’, ‘ವಿಕ್ರಾಂತ್​ ರೋಣ’, ಹಿಂದಿಯ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾಗಳು ರೇಸ್​ನಿಂದ ಹೊರಗುಳಿದಿವೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಹಾಗಾಗಿ ಆಸ್ಕರ್​ ಪ್ರಶಸ್ತಿಯನ್ನೇ ಬಹಿಷ್ಕರಿಸಲು ಕೆಲವು ನೆಟ್ಟಿಗರು ಮುಂದಾಗಿದ್ದಾರೆ. #boycottoscars ಎಂದು ಹ್ಯಾಶ್ ಟ್ಯಾಗ್​ ಟ್ರೆಂಡ್​ ಶುರು ಮಾಡಲಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಕಥೆ ಏನಾಯ್ತು ಎಂದು ಅನೇಕರು ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರನ್ನು ಪ್ರಶ್ನಿಸುತ್ತಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕಡಿಮೆ ಬಜೆಟ್​ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಹಲವು ಆಯಾಮದಿಂದ ಈ ಸಿನಿಮಾ ಚರ್ಚೆಗೆ ಒಳಗಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗಳನ್ನು ಆಧರಿಸಿ ಮೂಡಿಬಂದ ಈ ಸಿನಿಮಾಗೆ ಆಸ್ಕರ್​ ಸಿಗಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ
Vivek Agnihotri: ವಿವೇಕ್​ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್​ ಶಾಟ್​ ಸಮೇತ ಬಯಲಿಗೆ ಎಳೆದ ನಿರ್ದೇಶಕ
Vivek Agnihotri: ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Vivek Agnihotri: ದೆಹಲಿ ಹೈಕೋರ್ಟ್​ನಲ್ಲಿ ಬೇಷರತ್​ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಅತ್ಯುತ್ತಮ ಭಾಷಾ ಚಿತ್ರ ವಿಭಾಗಕ್ಕೆ ಭಾರತದಿಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಆಯ್ಕೆ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಅಲ್ಲಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದರಿಂದ ಸ್ವತಂತ್ರವಾಗಿಯಾದರೂ ‘ದಿ ಕಾಶ್ಮೀರ್​ ಫೈಲ್ಸ್​’ ನಾಮಿನೇಟ್​ ಆಗಬಹುದು ಎಂದು ಊಹಿಸಲಾಗಿತ್ತು. ಆ ಮಾರ್ಗದಲ್ಲಿಯೂ ಆಸ್ಕರ್​ ಸ್ಪರ್ಧೆಗೆ ಎಂಟ್ರಿ ಪಡೆಯುವಲ್ಲಿ ಈ ಸಿನಿಮಾ ವಿಫಲ ಆಗಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ‘ಆಸ್ಕರ್​ ಪ್ರಶಸ್ತಿ’ ಸ್ಪರ್ಧೆಗೆ ನಾಮಿನೇಟ್​ ಆಗದೇ ಇರುವುದರಿಂದ ಟ್ವಿಟರ್​ನಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. #boycottoscars ಹ್ಯಾಶ್​ ಟ್ಯಾಗ್​ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಹಿಷ್ಕರಿಸಲು ನೆಟ್ಟಿಗರು ಮುಂದಾಗಿದ್ದಾರೆ. ಈ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಮೂಡಿದೆ.

ಭಾರತದಿಂದ ಆಸ್ಕರ್​ಗೆ 3 ನಾಮಿನೇಷನ್​:

ಜ.24ರಂದು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್​​ವಿನ್ ಥಿಯೇಟರ್​ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಮಿನೇಷನ್​ ಲಿಸ್ಟ್​ ಅನೌನ್ಸ್​ ಮಾಡಲಾಗಿದೆ. ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್​ಲಿಸ್ಟ್​ ಆಗಿದ್ದರಿಂದ ನಾಮಿನೇಷನ್​ ಪ್ರಕ್ರಿಯೆ ಮೇಲೆ ಸಖತ್​ ನಿರೀಕ್ಷೆ ಮೂಡಿತ್ತು. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:47 pm, Tue, 24 January 23