‘ಒನ್ ನೈಟ್ ಸ್ಟ್ಯಾಂಡ್’– ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇದೆ. ಈ ಬಗ್ಗೆ ಅನೇಕರು ಓಪನ್ ಆಗಿ ಮಾತನಾಡುತ್ತಾರೆ. ಸೆಲೆಬ್ರಿಟಿಗಳ ವಲಯದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಕೆಲವರು ಈ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಒನ್ ನೈಟ್ ಸ್ಟ್ಯಾಂಡ್ಗೆ ಕನ್ನಡದಲ್ಲಿ ‘ಒಂದು ರಾತ್ರಿಯ ಸಂಬಂಧ’ ಎಂದು ಕರೆಯಬಹುದು. ದೈಹಿಕ ಸಂಪರ್ಕಕ್ಕಾಗಿ ಗಂಡು-ಹೆಣ್ಣು ಒಂದು ರಾತ್ರಿ ಸೇರುತ್ತಾರೆ. ಈ ವೇಳೆ ಅವರಿಗೆ ಯಾವುದೇ ಕಮಿಟ್ಮೆಂಟ್ ಇರುವುದಿಲ್ಲ. ರಾತ್ರಿ ಕಳೆದ ನಂತರ ಇಬ್ಬರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ, ಯಾವುದೇ ಸಂಬಂಧ ಅಥವಾ ಬದ್ಧತೆ ಇಲ್ಲದೆ ನಡೆಯುವ ದೈಹಿಕ ಸಂಪರ್ಕಕ್ಕೆ ‘ಒನ್ ನೈಟ್ ಸ್ಟ್ಯಾಂಡ್’ (one-night stands) ಎನ್ನಬಹುದು. ಹಾಗಾದರೆ, ಈ ಬಗ್ಗೆ ಓಪನ್ ಆಗಿ ಮಾತನಾಡಿದ ಸೆಲೆಬ್ರಿಟಿಗಳು ಯಾರು? ಇಲ್ಲಿದೆ ವಿವರ.
ರಣವೀರ್ ಸಿಂಗ್ ಅವರು ಎಲ್ಲಾ ವಿಚಾರಗಳನ್ನು ಓಪನ್ ಆಗಿಯೇ ಮಾತನಾಡುತ್ತಾರೆ. ಅವರು ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದರು. ಅವರು ಒನ್ ನೈಟ್ ಸ್ಟ್ಯಾಂಡ್ ಮಾಡಿದ ಬಗ್ಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಒಪ್ಪಿಕೊಂಡಿದ್ದರು.
ಶೆರ್ಲಿನ್ ಚೋಪ್ರಾ ಅವರು ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ. ಅವರು ಒಂದು ರಾತ್ರಿಯ ಸಂಬಂಧದ ಬಗ್ಗೆ ಮಾತನಾಡಿದ್ದರು. ಒನ್ ನೈಟ್ ಸ್ಟ್ಯಾಂಡ್ ಮಾಡಿದ ವ್ಯಕ್ತಿಯ ಜತೆ ಅವರಿಗೆ ರಿಲೇಶನ್ಶಿಪ್ ಬೆಳೆಯಿತು. ಆದರೆ, ಕಮಿಟ್ಮೆಂಟ್ಗೆ ಅವರು ರೆಡಿ ಇಲ್ಲದ ಕಾರಣ ಆ ರಿಲೇಶನ್ಶಿಪ್ ಕೊನೆಗೊಳಿಸಿದರು.
ಬಾಲಿವುಡ್ನಲ್ಲಿ ಸೀರಿಯಲ್ ಕಿಸ್ಸರ್ ಎಂದೇ ಫೇಮಸ್ ಆದವರು ಇಮ್ರಾನ್ ಹಶ್ಮಿ. ಅವರು ಕೂಡ ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದರು. ‘ನಾನು ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದೆ. ಈಗ ಮದುವೆ ನಂತರ ಅದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದರು.
ಕುಬ್ರಾ ಸೇಠ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಕೂಡ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದರು. ಅವರ ‘ಓಪನ್ ಬುಕ್’ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಅಮ್ಮನಾಗಲು ರೆಡಿ ಇರಲಿಲ್ಲ. ಫ್ರೆಂಡ್ ಜತೆ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದೆ. ಈ ವೇಳೆ ಪ್ರೆಗ್ನೆಂಟ್ ಆಗಿದ್ದೆ. ನಂತರ ಅಬಾರ್ಷನ್ ಮಾಡಿಕೊಂಡೆ’ ಎಂದು ಹೇಳಿದ್ದರು.
ಆದಿತ್ಯ ರಾಯ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಮಾತನಾಡಿದ್ದಾರೆ. ಅವರು ಎಂದಿಗೂ ಒನ್ ನೈಟ್ ಸ್ಟ್ಯಾಂಡ್ ಮಾಡೇ ಇಲ್ಲ ಎಂದು ಹೇಳಿದ್ದರು. ‘ನನಗೆ ಒನ್ ನೈಟ್ ಸ್ಟ್ಯಾಂಡ್ ಇಷ್ಟವಿಲ್ಲ. ಅದು ಅವರವರ ಆಯ್ಕೆ’ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ‘ತುಟಿಗೆ ಕಿಸ್ ಮಾಡುತ್ತಿದ್ದ, ತೊಡೆ ಸವರುತ್ತಿದ್ದ’; ಕುಬ್ರಾ ಸೇಠ್ಗೆ ಬೆಂಗಳೂರು ಹೋಟೆಲ್ನಲ್ಲಾಗಿತ್ತು ಲೈಂಗಿಕ ದೌರ್ಜನ್ಯ
ಅಪ್ರಾಪ್ತೆ ಆಗಿದ್ದಾಗ ಲೈಂಗಿಕ ಶೋಷಣೆ: ಮರುಕ ವ್ಯಕ್ತಪಡಿಸಿದವರಿಗೆ ಒಂದೇ ಮಾತಲ್ಲಿ ಉತ್ತರಿಸಿದ ಕುಬ್ರಾ ಸೇಠ್