ಬಸ್ನಲ್ಲಿ ಕುಳಿತು ಅನುಷ್ಕಾಗೆ ವಿಡಿಯೋ ಕಾಲ್ ಮಾಡಿದ ಕೊಹ್ಲಿ; ಫ್ಯಾನ್ಸ್ಗೂ ಪತ್ನಿಯನ್ನು ತೋರಿಸಿದ ವಿರಾಟ್
ವಿರಾಟ್ ಅವರು ಟೀಂ ಇಂಡಿಯಾ ಬಸ್ ಏರಿದ್ದರು. ಅವರು ಕಿಟಕಿ ಪಕ್ಕವೇ ಕುಳಿತಿದ್ದರು. ಈ ವೇಳೆ ವಿರಾಟ್ ಅವರು ಅನುಷ್ಕಾ ಜತೆ ವಿಡಿಯೋ ಕಾಲ್ನಲ್ಲಿದ್ದರು.
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ದಂಪತಿ. ಇವರ ಅಭಿಮಾನಿ ಬಳಗ ದೊಡ್ದದಾಗಿದೆ. ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರೆ ಫ್ಯಾನ್ಸ್ಗೆ ಎಲ್ಲಿಲ್ಲದ ಖುಷಿ. ಈಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿರಾಟ್ ಕೊಹ್ಲಿ ಅವರು ಟೀಮ್ ಜತೆ ಬಸ್ನಲ್ಲಿ ಹೋಗುವಾಗ ಅನುಷ್ಕಾ (Anushka Sharma) ಜತೆ ವಿಡಿಯೋ ಕಾಲ್ನಲ್ಲಿದ್ದರು. ಈ ವೇಳೆ ಕಿಟಕಿ ಪಕ್ಕದಲ್ಲಿದ್ದ ಫ್ಯಾನ್ಸ್ ಕೊಹ್ಲಿಯನ್ನು ನೋಡಿ ಖುಷಿಯಿಂದ ಕುಣಿದಾಡಿದ್ದಾರೆ. ವಿರಾಟ್ ಅವರು ಫ್ಯಾನ್ಸ್ಗೆ ಪತ್ನಿಯನ್ನು ತೋರಿಸುವ ಮೂಲಕ ಈ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ಸರಣಿ ಆಡುತ್ತಿದೆ. ಮೂರು ಟಿ20 ಪಂದ್ಯಗಳಲ್ಲಿ ಭಾರತ ಈಗಾಗಲೇ ಒಂದು ಗೇಮ್ ಗೆದ್ದು 1-0 ಅಂತರದಲ್ಲಿ ಸರಣಿ ಮುನ್ನಡೆ ಕಾಯ್ದುಕೊಂಡಿದೆ. ವಿರಾಟ್ ಅವರು ಟೀಂ ಇಂಡಿಯಾ ಬಸ್ ಏರಿದ್ದರು. ಅವರು ಕಿಟಕಿ ಪಕ್ಕವೇ ಕುಳಿತಿದ್ದರು. ಈ ವೇಳೆ ವಿರಾಟ್ ಅವರು ಅನುಷ್ಕಾ ಜತೆ ವಿಡಿಯೋ ಕಾಲ್ನಲ್ಲಿದ್ದರು. ಈ ವಿಚಾರ ಫ್ಯಾನ್ಸ್ಗೆ ತಿಳಿದಿರಲಿಲ್ಲ.
‘ವಿರಾಟ್, ವಿರಾಟ್..’ ಎಂದು ಫ್ಯಾನ್ಸ್ ಕೂಗಿದ್ದಾರೆ. ಅಭಿಮಾನಿಗಳ ಕಡೆಗೆ ತಿರುಗಿದ ವಿರಾಟ್ ಕೈ ಬೀಸಿದ್ದಾರೆ. ಜತೆಗೆ ಮೊಬೈಲ್ ಸ್ಕ್ರೀನ್ ಅನ್ನು ಫ್ಯಾನ್ಸ್ ಕಡೆ ತೋರಿಸಿದ್ದಾರೆ. ವಿಡಿಯೋ ಕಾಲ್ನಲ್ಲಿ ಇದ್ದಿದ್ದು ಅನುಷ್ಕಾ ಶರ್ಮಾ ಆಗಿತ್ತು. ಇದನ್ನು ನೋಡಿ ಫ್ಯಾನ್ಸ್ ಖುಷಿ ಮತ್ತಷ್ಟು ಹೆಚ್ಚಿದೆ. ಈ ವೇಳೆ ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Virat Kohli busy in video call with Anushka while returning from match and shows it to fans ??❤️#ViratKohli? pic.twitter.com/y8SIvWprzW
— Mufaddal Vohra (@133_AT_Hobart) September 29, 2022
ಈ ವಿಡಿಯೋಗೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ವಿರಾಟ್ ಕೊಹ್ಲಿ ಎಷ್ಟೊಂದು ಸಿಂಪಲ್. ಇದೇ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗುತ್ತಾರೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ವಿರಾಟ್ ಇಷ್ಟ ಆಗುವುದೇ ಇದಕ್ಕೆ. ಅನುಷ್ಕಾನ ತೋರಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಇನ್ನೂ ಕೆಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಸುತ್ತಾಟ; ಇಲ್ಲಿವೆ ಫೋಟೋಗಳು
2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದಲ್ಲಿ ಅನುಷ್ಕಾ ಶರ್ಮಾ ಅವರು ಕೊನೆಯದಾಗಿ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ.
Published On - 4:07 pm, Fri, 30 September 22