Updated on: Sep 12, 2022 | 7:03 PM
ಟೀಂ ಇಂಡಿಯಾ ‘ಏಷ್ಯಾ ಕಪ್’ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಟೂರ್ನಿಯಲ್ಲಿ ಅರ್ಧದಿಂದಲೇ ಹೊರ ಬಿದ್ದಿದೆ. ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ವಿರುದ್ಧ ಟಿ 20 ಸರಣಿ ಆರಂಭ ಆಗಲಿದೆ. ಅದಕ್ಕೂ ಮೊದಲು ಕೊಹ್ಲಿ ಒಂದು ಬ್ರೇಕ್ ಪಡೆದಿದ್ದಾರೆ.
ಅನುಷ್ಕಾ ಶರ್ಮಾ ಅವರು ಮದುವೆ ನಂತರ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು ಕಡಿಮೆ. ಅವರು ಆಗೊಂದು-ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಪತಿ ವಿರಾಟ್ ವೃತ್ತಿ ಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಅನುಷ್ಕಾ ಶರ್ಮಾ ಶೇರ್ ಮಾಡಿಕೊಂಡಿದ್ದಾರೆ. ರಸ್ತೆಯ ಬದಿಯಲ್ಲಿ ಕುಳಿತು ವಿರಾಟ್ ಹಾಗೂ ಅನುಷ್ಕಾ ಬಿಸಿ ಪಾನೀಯ ಹೀರುತ್ತಿದ್ದಾರೆ. ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿರುವ ಫೋಟೋ ಸಾಕಷ್ಟು ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ಗೆ ವಮಿಕಾ ಹೆಸರಿನ ಮಗು ಜನಿಸಿದೆ. ಮಗುವಿಗೆ ಈಗ ಒಂದೂವರೆ ವರ್ಷ ತುಂಬಿದೆ. ಆದಾಗ್ಯೂ ಈ ದಂಪತಿ ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ.